
ನೆಲಮಂಗಲ, ಅಕ್ಟೋಬರ್ 26: ಅವರು ದೇವಸ್ಥಾನದ ಅರ್ಚಕರು (Priest). ಮಗಳಿಗೆ ಮದುವೆ ಮಾಡಿ ಸುಖ-ಸಂಸಾರದಿಂದ ಜೀವನ ನಡೆಸುತ್ತಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಫ್ಯಾಕ್ಟರಿಗೆ ಹೋಗಿ ಬರುತ್ತೇನೆ ಎಂದು ಹೋದವರು ಸಾವಿಗೆ ಶರಣಾಗಿದ್ದರು (death). ಇದು ಕುಟುಂಸ್ಥರಲ್ಲಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಹೀಗಿರುವಾಗಲೇ ಅದೊಂದು ಡೆತ್ನೋಟ್ ಉತ್ತರ ನೀಡಿತ್ತು.
ಅಶ್ವತ್ಥ್ ನಾರಾಯಣ (54) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅರ್ಚಕ. ನೆಲಮಂಗಲದ ಸೋಲದೇವನಹಳ್ಳಿ ನಿವಾಸಿ ಆಗಿದ್ದ ಅಶ್ವತ್ಥ್ ನಾರಾಯಣ, ತಲೆತಲಾಂತರದಿಂದ ಮುನೇಶ್ವರ ಸ್ವಾಮಿಯನ್ನ ಪೂಜಿಸಿಕೊಂಡು ಬರುತ್ತಿದ್ದರು. ಆರ್ಥಿಕವಾಗಿ ತೊಂದರೆ ಇಲ್ಲದ ಕುಟುಂಬ ಇವರದ್ದು. ದೇವರ ಪೂಜೆ ಜೊತೆಗೆ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೂ ಹೋಗುತ್ತಿದ್ದರು.
ಎಂದಿನಂತೆ ಬೆಳಿಗ್ಗೆ ಅಶ್ವಥ್ ನಾರಾಯಣ ಮನೆಯಿಂದ ತಡರಾತ್ರಿ ಫ್ಯಾಕ್ಟರಿಗೆ ಕೆಲಸಕೆಂದು ತೆರಳಿದ್ದಾರೆ. ಬಳಿಕ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆತ್ನೋಟ್ನಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಅನಾರೋಗ್ಯದಿಂದ ನನಗೆ ಜೀವನದಲ್ಲಿ ಬದುಕಲು ಕಷ್ಟವಾಗುತ್ತಿದೆ ಎಂದು ಉಲ್ಲೆಖಿಸಿದ್ದಾರೆ.
ಇದನ್ನೂ ಓದಿ: 4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?
ಸದ್ಯ ಘಟನೆ ಸಂಬಂಧ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ತರಿಗೆ ಹಸ್ತಾಂತರಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಬಾಲಕನನ್ನು ರಕ್ಷಿಸಲು ಹೋಗಿ ಇಬ್ಬರು ಸಹೋದರರು ನೀರುಪಾಲಾಗಿರುವಂತಹ ಘಟನೆ ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ಬಳಿ ನಡೆದಿದೆ. ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರರಾದ ನಂದನ್(25) ಹಾಗೂ ರಾಕೇಶ್(20) ಮೃತ ಸಹೋದರರು. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ನೆಲಮಂಗಲದಲ್ಲಿ ಮತ್ತೆ ಶುರುವಾಯ್ತಾ ವಾರ್? ಗ್ರಾ ಪಂ ಸದಸ್ಯನ ಮೇಲೆ ಫೈರಿಂಗ್!
ಕೊಂಬೆ ಹಿಡಿದುಕೊಂಡಿದ್ದ ಬಾಲಕ ರಕ್ಷಣೆಗೆ ಇಬ್ಬರು ಸಹೋದರರು ನಾಲೆಗೆ ಇಳಿದಿದ್ದರು. ಈ ವೇಳೆ ನಾಲೆಯಲ್ಲಿ ಕೊಚ್ಚಿಹೋಗಿ ಇಬ್ಬರು ಸೋದರರು ಸಾವನ್ನಪ್ಪಿದ್ದು, ಮರದ ಕೊಂಬೆ ನೆರವಿನಿಂದ ಬಾಲಕ ಬಚಾವ್ ಆಗಿದ್ದಾನೆ. ಹದಿನೈದು ದಿನಗಳ ಹಿಂದಷ್ಟೇ ನಂದನ್ ಪ್ರೀತಿಸಿ ಮದುವೆಯಾಗಿದ್ದ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.