ಬೆಂಗಳೂರು: ಪರಿಚಯಸ್ಥನಿಂದಲೇ ಪ್ರಜ್ಞೆ ತಪ್ಪಿಸಿ ನಿರಂತರವಾಗಿ ಲೈಂಗಿಕ ಕಿರುಕುಳ (physical assault) ನಡೆದಿದೆ ಎಂದು ಮಹಿಳೆಯೊಬ್ಬರು (Woman) ಆರೋಪ ಮಾಡಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಎರಡು ವರ್ಷದ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆ ಬಳಿ ನಡೆದ ಘಟನೆ ಇದಾಗಿದ್ದು, ದೌರ್ಜನ್ಯಗೊಳಗಾಗಿರುವ ಮಹಿಳೆ ಪಾದ್ರಿ ಅಲ್ಬರ್ಟ್ ಎಂಬುವವರ ಮೇಲೆ ಇಂದು ದೂರು ದಾಖಲಿಸಿದ್ದಾರೆ.
ಜಿಸಸ್ ರಕ್ತ ಇದನ್ನು ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಪ್ರಜ್ಞೆ ತಪ್ಪಿಸಿರುವುದಾಗಿ ದೂರು ನೀಡಿದ್ದು, ವಕೀಲೆಯೊಬ್ಬರ ಸಹಾಯದಿಂದ ದೌರ್ಜನ್ಯಕ್ಕೊಳಗಾದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಖಾಸಗಿ ಅಂಗಗಳನ್ನು ಮುಟ್ಟಿ ಮೊಬೈಲ್ನಲ್ಲಿ ವಿಡಿಯೋ ಮಾಡಿ ಪದೇ ಪದೆ ಕಿರುಕುಳ ಕೊಡುತ್ತಿದ್ದರು ಎನ್ನುವ ಬಗ್ಗೆ ಆರೋಪಿಸಲಾಗಿದ್ದು, ಬೇರೆಯವರಿಗೆ ಮಾಹಿತಿ ನೀಡಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಸೋಲದೇವನಹಳ್ಳಿ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಪಾದ್ರಿ ಅಲ್ಬರ್ಟ್ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ಏನಿದೆ?
ಈ ಕೇಸಿನ ಸಾರಾಂಶವೇನೆಂದರೆ ಪಿರ್ಯಾದುದಾರರಿಗೆ 2016 ರಲ್ಲಿ ಅಲ್ಬರ್ಟ್ ಎಂಬುವವರ ಪರಿಚಯವಾಗಿದ್ದು, ಅಲ್ಬರ್ಟ್ನು ಕೆಲಸಕೊಡಿಸುವುದಾಗಿ ತಿಳಿಸಿದ ನಂತರ ಜೆ. ಸಿ. ರಸ್ತೆಯಲ್ಲಿರುವ ಜೈನ್ ಗೇಟ್ ಲಾಯರ್ ಆಫೀಸ್ನಲ್ಲಿ ಕೆಲಸಕ್ಕೆ ಸೇರಿದೆ ಅಲ್ಬರ್ಟ್ನ್ನು ಆಗಾಗ ಆಫೀಸ್ ಹತ್ತಿರ ಬಂದು ಸಲುಗೆಯಿಂದ ಮಾತನಾಡುವುದು ಹೋಗುವುದು ಮಾಡುತ್ತಿದ್ದ ಹೀಗಿರುವಾಗೆ ಆಲ್ಬರ್ಟ್ 02 ವರ್ಷಗಳ ಹಿಂದೆ ದಿನಾಂಕ: 29/07/2019 ರಂದು ಸಂಜೆ 19-00 ಗಂಟೆ ಸಮಯದಲ್ಲಿ ಆಫೀಸ್ ಹತ್ತಿರ ಬಂದು ಹೆಸರಘಟ್ಟದಲ್ಲಿ ಚರ್ಚ್ ಮಾಡಿರುತ್ತೇನೆ. ಅಲ್ಲಿ ಹೋಗಿ ಪ್ರಾರ್ಥನೆ ಮಾಡಿದರೆ ಒಳ್ಳೆಯದು ಆಗುತ್ತದೆ ಎಂದು ಹೇಳಿ ರಾತ್ರಿ ವೇಳೆ ಕಾರಿನಲ್ಲಿ ಹೆಸರಘಟ್ಟ ಕೆರೆ ಹತ್ತಿರ ಕರೆದುಕೊಂಡು ಹೋಗಿ ಇದು ಜಿಸಸ್ ರಕ್ತ ಇದನ್ನು ಕುಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ನನಗೆ ಕುಡಿಸಿದಾಗ ನಾನು ಅರೆ ಪ್ರಜೆಯಾಗಿದ್ದು, ಆವೇಳೆ ಅಲ್ಪರ್ಟ್ ನನ್ನ ಅಂಗಾಂಗಗಳನ್ನು ಕೈಗಳಿಂದ ಮುಟ್ಟಿರುವ ಬಗ್ಗೆ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ನಂತರ ಕಾರಿನಲ್ಲಿ, ಮನೆಗೆ ತಂದು ಬಿಟ್ಟನು ಎಂದು ಮಹಿಳೆ ದೂರಿನ ಪ್ರತಿಯಲ್ಲಿ ದಾಖಲಿಸಿದ್ದಾರೆ.
ಮೊಬೈಲ್ನಲ್ಲಿ ಸೆರೆಹಿಡಿದಿರುವುದನ್ನೇ ತೋರಿಸಿ ಇದನ್ನು ಎಲ್ಲರಿಗೂ ತೋರಿಸಿ ನಿನ್ನ ಮಾನ ಕಳೆಯುತ್ತೇನೆಂದು ಹೆದರಿಸಿ ಹೆಸರಘಟ್ಟ ಚರ್ಚ್ಗೆ ಬಾ ಎಂದು ಕಾರಿನಲ್ಲಿ ಕರೆದುಕೊಂಡು ಸೋಲದೇವನಹಳ್ಳಿ, ರಸ್ತೆಯ ಬಳಿ ಇರುವ ಹಳೆ ಮನೆಗಳ ಬಳಿ ಕರೆದುಕೊಂಡು ಹೋಗಿ ಕಾರನ್ನು ಕತ್ತಲಿನಲ್ಲಿ ನಿಲಿಸಿ ನನ್ನ ಎದೆ ಇತರೆ ಅಂಗಾಂಗಗಳನ್ನು ಕೈಯಲ್ಲಿ ಹಿಡಿದು ನನಗೆ ದೈಹಿಕವಾಗಿ ಹಿಂಸೆ ನೀಡಿದ ಹಾಗೂ ನಾನು ಬೇಡವೆಂದರೂ ನನಗೆ ಬಲತ್ಕಾರವಾಗಿ ಶೀಲ ಕೆಡಿಸಲು ಪ್ರಯತ್ನಿಸಿ ಬಾಯಿಗೆ ಬಂದಂತೆ ಕೆಟ್ಟ ಪದಗಳಿಂದ ಬೈಯ್ದು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸಿಬಿಡುತ್ತೇನೆಂದು ಬೆದರಿಕೆ ಹಾಕಿದ. ಆದ್ದರಿಂದ ನಾನು ಭಯಗೊಂಡು ಯಾರಿಗೂ ಹೇಳಿರಲಿಲ್ಲ. ನಂತರ ನಾನು ಕೆಲಸ ಮಾಡುತ್ತಿದ್ದ ಲಾಯರ್ ಪ್ರಿಯದರ್ಶುನಿಯವರ ಬಳಿ ಹೇಳಿದಾಗ ಅವರು ಪೊಲೀಸ್ ಕಂಪೆಂಟ್ ಕೊಡು ಎಂದು ಹೇಳಿದರು. ಆದ್ದರಿಂದ ಈ ದಿನ ತಡವಾಗಿ ಬಂದು ನನಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ, ಪ್ರಾಣ ಬೆದರಿಕೆ ಹಾಕಿರುವ ಅಲ್ಬರ್ಟ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದೇನೆ ಎಂದು ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡಿದ್ದಾರೆ.
ಇದನ್ನೂ ಓದಿ:
ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ಬಿಸಿಸಿಐ ಅಧಿಕಾರಿಯಿಂದ ಲೈಂಗಿಕ ಕಿರುಕುಳ! ಭೂಗತ ಪಾತಕಿ ಪತ್ನಿಯ ಗಂಭೀರ ಆರೋಪ: ವರದಿ
ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಿನ್ಸಿಪಾಲ್ ಸಸ್ಪೆಂಡ್
Published On - 1:37 pm, Sat, 27 November 21