ನೆಲಮಂಗಲ: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ದಾಳಿ; ಓರ್ವನ ಬಂಧನ
ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸಿಲಿಂಡರ್ಗಳ ಜತೆಗೆ ರೀಫಿಲಿಂಗ್ ಬಳಕೆ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಸಿಲಿಂಡರ್ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಮಹದೇವಸ್ವಾಮಿಯನ್ನು (49) ಬಂಧಿಸಿದ್ದಾರೆ.
ಬೆಂಗಳೂರು: ಪರವಾನಗಿ ಪಡೆಯದೆ ಅಕ್ರಮ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಮನೆ ಮೇಲೆ ಸಿಸಿಬಿ ಪೊಲೀಸರು (CCB police) ದಾಳಿ ನಡೆಸಿದ್ದಾರೆ. ನೆಲಮಂಗಲ ಸಮೀಪದ ಟಿ.ದಾಸರಹಳ್ಳಿಯ ಕಲ್ಯಾಣನಗರದಲ್ಲಿ ರೀಫಿಲಿಂಗ್ ಮಿಷಿನ್ ಇಟ್ಟುಕೊಂಡು ಕಾಪರ್ ರಾಂಡ್ಗಳ ಮೂಲಕ ಸಣ್ಣ ಸಣ್ಣ ಸಿಲಿಂಡರ್ಗಳಿಗೆ ರೀಫಿಲಿಂಗ್ ಮಾಡುತ್ತಿದ್ದರು. ಈ ವಿಷಯ ತಿಳಿದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸಿಲಿಂಡರ್ಗಳ (Cylinder) ಜತೆಗೆ ರೀಫಿಲಿಂಗ್ ಬಳಕೆ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ಸಿಲಿಂಡರ್ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಮಹದೇವಸ್ವಾಮಿಯನ್ನು (49) ಬಂಧಿಸಿದ್ದಾರೆ.
ಮಹದೇವಸ್ವಾಮಿ ಮೇಲೆ ಜನವಸತಿ ಪ್ರದೇಶದಲ್ಲಿ ಅಕ್ರಮ ದಂಧೆ, ಸರ್ಕಾರಕ್ಕೆ ಮೋಸದಡಿ ಕೇಸ್ ದಾಖಲು ಮಾಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಎಫ್ಐಆರ್ ವಿವರ ಪಿರ್ಯಾದುದಾರರಾದ ಎನ್.ಲಕ್ಷ್ಮೀನರಸಿಂಹಯ್ಯ, ಪಿ.ಎಸ್.ಐ, ಆರ್ಥಿಕ ಅಪರಾಧ ದಳ, ಸಿಸಿಬಿ ಬೆಂಗಳೂರು ಸಿಟಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಬೆಂಗಳೂರು ನಗರ, ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ನಂ.170, ಸರ್ಕಾರಿ ಪ್ರೌಢಶಾಲೆ ರಸ್ತೆ, ಮಾಡೆಲ್ ಕಾಲೋನಿ, ಟಿ.ದಾಸರಹಳ್ಳಿ, ಬೆಂಗಳೂರು ವಿಳಾಸದಲ್ಲಿ ಸರ್ಕಾರದ ಯಾವುದೇ ಪ್ರಾಧಿಕಾರದಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಹಾಗೂ ಜನ ವಾಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ಯಾವ ಸಂದರ್ಭದಲಾದರೂ ಅನಾಹುತ ಸಂಭವಿಸಿ ಸಾರ್ವಜನಿಕ ಜೀವ ಮತ್ತು ಆಸ್ತಿ-ಪಾಸ್ತಿಗೆ ಹಾನಿ ಉಂಟಾಗುವ ಸಂಭವವಿದೆಯೆಂದೂ ಗೊತ್ತಿದ್ದರೂ ಸಹ, ಸರ್ಕಾರಿ ಸ್ವಾಮ್ಯದ ಇಂಡೇನ್ ಗ್ಯಾಸ್ ಸಿಲಿಂಡರ್ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು ರಿಫೀಲಿಂಗ್ ಮಾಡುತ್ತಾ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದಾಗಿ ನಮ್ಮ ಸಿಸಿಬಿ ದಳದ ಎ.ಸಿ.ಪಿ ಸಾಹೇಬರಿಗೆ ಮಾಹಿತಿ ಬಂದಿದೆ.
ಅದರಂತೆ ಸದರಿ ಮಾಹಿತಿಯನ್ನು ಪರಿಶೀಲಿಸಿ ನೈಜತೆಯಿಂದ ಕೂಡಿದ್ದಲ್ಲಿ ಕಾನೂನು ರೀತಾ ಕ್ರಮ ಜರಗುಸಿವಂತೆ ಸೂಚಿಸಿದ ಮೇರೆಗೆ, ಅದರಂತೆ ನಾನು ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳದ ಬಳಿ ಬಂದು ಭಾತ್ಮಿದಾರರ ಮಾಹಿತಿಯಂತೆ ಖುದ್ದಾಗಿ ಪರಿಶೀಲಿಸಲಾಗಿ ಮಹದೇವಸ್ವಾಮಿ ಬಿನ್ ಕಾಳಯ್ಯ, 49 ವರ್ಷ, ನಂ. 160, 1ನೇ ಮುಖ್ಯರಸ್ತೆ, ಕಲ್ಯಾಣನಗರ, ಟಿ.ದಾಸರಹಳ್ಳಿ, ಬೆಂಗಳೂರು ಎಂಬಾತನು ನಂ.170, ಸರ್ಕಾರಿ ಪ್ರೌಢಶಾಲೆ ರಸ್ತೆ, ಮಾಡೆಲ್ ಕಾಲೋನಿ, ಟಿ.ದಾಸರಹಳ್ಳಿ, ಬೆಂಗಳೂರು ಇಲ್ಲಿ ಕಟ್ಟಡವನ್ನು ಬಾಡಿಗೆಗೆ ಪಡೆದು ಗ್ಯಾಸ್ ಸಿಲಿಂಡರ್ಗಳನ್ನು ದಾಸ್ತಾನು ಮಾಡಿಕೊಂಡು ರೀಫಿಲಿಂಗ್ ಮಿಷಿನ್ ಇಟ್ಟುಕೊಂಡು ಕಾಪರ್ ರಾಂಡ್ಗಳ ಮೂಲಕ ಸಣ್ಣ ಸಣ್ಣ ಸಿಲಿಂಡರ್ಗಳಿಗೆ ರೀಫಿಲಿಂಗ್ ಮಾಡುತ್ತ, ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವುದು ಕಂಡುಬಂದ ಮೇರೆಗೆ ಮಹದೇವಸ್ವಾಮಿ ರವರ ವಿರುದ್ಧ ಕಲಂ,3 (1) (a) (b) (c), (2) (3) (4), 4(1) (a) (b) (c) & (d), 7 (1) (a) (b) (c) Liqufied Petroleaum Gas (Regulation of supply and Distributin) Order-2000 285 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸುವಂತೆ ಕೊಟ್ಟ ದೂರನ್ನು ಸ್ವೀಕರಿಸಿ ಮೇಲ್ಕಂಡ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿರುತ್ತದೆ.
ಡ್ರಗ್ಸ್ ಪೆಡ್ಲರ್ ಮನೆ ಮೇಲೆ ಸಿಸಿಬಿ ದಾಳಿ! ನೈಜೀರಿಯಾ ಪ್ರಜೆ ಸೆರೆ, 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ
Published On - 9:37 am, Sun, 28 November 21