ಡ್ರಗ್ಸ್ ಪೆಡ್ಲರ್ ಮನೆ ಮೇಲೆ ಸಿಸಿಬಿ ದಾಳಿ! ನೈಜೀರಿಯಾ ಪ್ರಜೆ ಸೆರೆ, 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಪೆಡ್ಲರ್ ಮನೆ ಮೇಲೆ ಸಿಸಿಬಿ ದಾಳಿ! ನೈಜೀರಿಯಾ ಪ್ರಜೆ ಸೆರೆ, 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ವಶಕ್ಕೆ ಪಡೆದ ಡ್ರಗ್ಸ್

ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಎಕ್ಸ್​ಟಸಿ ಮಾತ್ರೆ ಸೇರಿ ಸುಮಾರು 20 ಲಕ್ಷ ರೂ. ಮೌಲ್ಯದ ಡ್ರಗ್ಸ್​ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಸ್ನೇಹಿತನ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ.

TV9kannada Web Team

| Edited By: Apurva Kumar Balegere

Oct 27, 2021 | 9:39 AM

ಬೆಂಗಳೂರು: ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಪೆಡ್ಲರ್ ಮನೆ ಮೇಲೆ ದಾಳಿ ನಡೆಸಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಜೊತೆಗೆ ಸುಮಾರು 20 ಲಕ್ಷ ರೂ. ಮೌಲ್ಯದ ಡ್ರಗ್ಸ್​ನ ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ರಾಮಮೂರ್ತಿನಗರದ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದಾರೆ. ನೈಜೀರಿಯಾ ಪ್ರಜೆ ಪೋಲ್ಯಾಂಡ್ ಸೇರಿ ವಿವಿಧ ದೇಶಗಳಿಂದ ಡ್ರಗ್ಸ್ ತರಿಸುತ್ತಿದ್ದ. ಪೋಸ್ಟ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಗೋವಾಗೆ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿಗೆ ಸರಬರಾಜು ಆಗುತ್ತಿದ್ದ ಬಗ್ಗೆ ದಾಳಿ ವೇಳೆ ಮಾಹಿತಿ ಲಭ್ಯವಾಗಿದೆ.

ಎಂಡಿಎಂಎ ಕ್ರಿಸ್ಟಲ್, ಎಂಡಿಎಂಎ ಎಕ್ಸ್​ಟಸಿ ಮಾತ್ರೆ ಸೇರಿ ಸುಮಾರು 20 ಲಕ್ಷ ರೂ. ಮೌಲ್ಯದ ಡ್ರಗ್ಸ್​ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಸ್ನೇಹಿತನ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ ಐಟಿಬಿಟಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಸದ್ಯ ಸಿಸಿಬಿ ಅಧಿಕಾರಿಗಳು ನೈಜೀರಿಯಾ ಪ್ರಜೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರು ದರೋಡೆಕೋರರು ಅರೆಸ್ಟ್ ರಾಮನಗರದಲ್ಲಿ ಇಬ್ಬರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್, ಪುನೀತ್ ಎಂಬುವವರು ಬಂಧಿತ ಆರೋಪಿಗಳು. ಬಂಧಿತರಿಂದ ಎರಡು ಬೈಕ್, ಮೊಬೈಲ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇತ್ತೀಚಿಗೆ ಬಿಹಾರ ಮೂಲದ ಕಾರ್ಮಿಕರನ್ನ ಅಡ್ಡಗಟ್ಟಿ ಬೈಕ್ ಹಾಗೂ ಮೊಬೈಲ್ ಕಿತ್ತುಗೊಂಡು ಪರಾರಿಯಾಗಿದ್ದರು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

Otto Wichterle: ಕಾಂಟ್ಯಾಕ್ಟ್ ಲೆನ್ಸ್ ಸಂಶೋಧಕ ಒಟ್ಟೊ ವಿಚ್ಟರ್ಲೆ ಅವರಿಗೆ ವಿಶೇಷ ಡೂಡಲ್ ಮೂಲಕ ಗೌರವಿಸಿದ ಗೂಗಲ್

ಹೂವಿನಿಂದಲೂ ಗಾಯ ಆಗಬಹುದು; ನೆಚ್ಚಿನ ನಾಯಕನಿಗೆ ಪುಷ್ಪಾರ್ಚನೆ ಮಾಡುವ ಅಭಿಮಾನಿಗಳೆ ಎಚ್ಚರ

Follow us on

Related Stories

Most Read Stories

Click on your DTH Provider to Add TV9 Kannada