Otto Wichterle: ಕಾಂಟ್ಯಾಕ್ಟ್ ಲೆನ್ಸ್ ಸಂಶೋಧಕ ಒಟ್ಟೊ ವಿಚ್ಟರ್ಲೆ ಅವರಿಗೆ ವಿಶೇಷ ಡೂಡಲ್ ಮೂಲಕ ಗೌರವಿಸಿದ ಗೂಗಲ್
Google Doodles: ಕಾಂಟ್ಯಾಕ್ಟ್ ಲೆನ್ಸ್ ಸಂಶೋಧಕ ಒಟ್ಟೊ ವಿಚ್ಟರ್ಲೆ ಅವರಿಗೆ ಗೂಗಲ್ ತನ್ನ ಡೂಡಲ್ ಮೂಲಕ ಇಂದು ಬುಧವಾರ ವಿಶೇಷ ಗೌರವ ಸಲ್ಲಿಸಿದೆ.
ಪ್ರಪಂಚದಾದ್ಯಂತ ಲಕ್ಷಾಂತರ ಜನರ ಜೀವನದಲ್ಲಿ ಅಳವಡಿಕೆಯಾಗುವಂತಹ ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ಅನ್ನು (ಸಂಪರ್ಕ ಮಸೂರ) ಕಂಡು ಹಿಡಿದ ಖ್ಯಾತ ರಸಾಯನಶಾಸ್ತ್ರಜ್ಞ ಒಟ್ಟೊ ವಿಚ್ಟರ್ಲೆ ಅವರನ್ನು ಗೂಗಲ್ ತನ್ನ ಡೂಡಲ್ ಮೂಲಕ ಗೌರವಿಸಿದೆ. ವಿಚ್ಟರ್ಲೆ ಅವರು 1913 ರಲ್ಲಿ ಜೆಕ್ ರಿಪಬ್ಲಿಕ್ (ಆಗ ಆಸ್ಟ್ರಿಯಾ-ಹಂಗೇರಿ) ಪ್ರೊಸ್ಟೆಜೊವ್ನಲ್ಲಿ ಜನಿಸಿದರು. ತಮ್ಮ ಶಿಕ್ಷಣದಲ್ಲಿ ಹೈಸ್ಕೂಲ್ ಮುಗಿಸಿದ ಬಳಿಕ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರು. ಬಳಿಕ ಸಂಶೋಧಕರಾಗಿ ಜನರಿಗೆ ಅವಶ್ಯವಿರುವ ಕಾಂಟ್ಯಾಕ್ಟ್ ಲೆನ್ಸ್ಅನ್ನು ಪರಿಚಯಿಸಿದರು.
ಅವರು ಜೆಕ್ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿರುವಾಗ ರಸಾಯನ ಮತ್ತು ತಾಂತ್ರಿಕ ವಿಭಾಗದಲ್ಲಿ ಅಧ್ಯಯನ ಮಾಡಲು ಪ್ರಾರಂಭಿಸಿದರು. ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಅವರು 1936 ರಲ್ಲಿ ಪದವಿ ಪಡೆದರು. ನಂತರ 1936ರಲ್ಲಿ ಪ್ರಾಗ್ ಇನ್ಸಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಿಂದ (ITC) ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು.
ವಿಚ್ಟರ್ಲೆ ಅವರು, 1950 ರಲ್ಲಿ ಅವರು ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಆ ಸಮಯದಲ್ಲಿಯೇ ದೃಷ್ಟಿಗೆ ಸಂಬಂಧಿಸಿದಂತೆ ಸಂಶೋಧನೆಯನ್ನು ಆರಂಭಿಸಿದ್ದರು. ಸ್ವತಃ ತಾವು ಕನ್ನಡಕವನ್ನು ಧರಿಸಿ, ಮೊದಲಿಗೆ ಮೃದುವಾದ ಕಾಂಟೆಕ್ಟ್ ಲೆನ್ಸ್ಗಳನ್ನು ತಯಾರಿಸಿದರು. ಬೈಸಿಕಲ್ ಲೈಟ್ ಬ್ಯಾಟರಿ, ಫೋನೊಗ್ರಾಫ್ ಮೋಟಾರ್ ಮತ್ತು ಮನೆಯಲ್ಲಿ ತಯಾರಿಸಿದ ಗಾಜಿನ ಕೊಳವೆಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡರು. ನಂತರ 1993ರಲ್ಲಿ ಕ್ಷುದ್ರಗ್ರಹಕ್ಕೆ ಅವರ ಹೆಸರಿಡಲಾಯಿತು. ಇದಲ್ಲದೆ ಜೆಕ್ನ ಹೈಸ್ಕೂಲ್ಗೆ 2006 ಸೆಪ್ಟೆಂಬರ್ 1ರಂದು ಇವರ ಹೆಸರನ್ನಿಡಲಾಗಿದೆ.
ವಿಚ್ಟರ್ಲೆ ಕಾಂಟ್ಯಾಕ್ಟ್ ಲೆನ್ಸ್ಗಳ ಸಂಶೋಧಕ ಎಂದು ಹೆಚ್ಚು ಪ್ರಸಿದ್ಧರಾಗಿದ್ದರೂ, ಅವರ ಆವಿಷ್ಕಾರಗಳು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳಾದ ಸ್ಮಾರ್ಟ್ ಬಯೋಮೆಟೀರಿಯಲ್ಗಳ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟವು. ಮಾನವ ಸಂಯೋಜಕ ಅಂಗಾಂಶಗಳನ್ನು ಮರುಸ್ಥಾಪಿಸಿ, ಔಷಧಕ್ಕೆ ಸಂಬಂಧಿಸಿದಂತೆ ಕೆಲವು ಹೊಸ ಮಾನದಂಡಗಳನ್ನು ಪ್ರೇರೇಪಿಸಿದೆ ಎಂದು ಗೂಗಲ್ ಡೂಡಲ್ ಪುಟವು ವಿವರಿಸುತ್ತಿದೆ.
ಇದನ್ನೂ ಓದಿ:
Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ
Shirley Temple: ಶಿರ್ಲೆ ಟೆಂಪಲ್ ಅವರಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್