Telia Bhola Fish: ಬಲೆಗೆ ಸಿಕ್ಕ 75 ಕೆಜಿ ದೈತ್ಯ ಮೀನು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟ; ಮೀನುಗಾರರು ಫುಲ್ ಖುಷ್
ನದಿಯಲ್ಲಿ ಬಲೆಯಲ್ಲಿ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ. ಸುಮಾರು 36 ಲಕ್ಷ ರೂಪಾಯಿಗೆ ಮೀನು ಮಾರಾಟವಾಗಿದೆ.
ಮೀನುಗಾರರು ನದಿಯಲ್ಲಿ ಬಲೆ ಹಾಕಿದರೆ ಸಾಕು ಗುಂಪು ಗುಂಪು ಮೀನುಗಳು ಬಲೆಗೆ ಬಿದ್ದಿರುತ್ತಿತ್ತು. ಆದರೆ ಅಂದು ಮಾತ್ರ ಮೀನುಗಾರರ ಅದೃಷ್ಟವೇ ಬದಲಾಗುವ ದಿನವಾಗಿತ್ತು. ಎಲ್ಲಾ ದಿನದಂತೆಯೇ ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಿದ್ದಾನೆ. ಬಲೆಗೆ ಸಿಕ್ಕಿದ ದೈತ್ಯ ಮೀನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು. ಅದರಲ್ಲಿಯೂ ಬಲೆಗೆ ಸಿಕ್ಕ ಟೆಲಿಯಾ ಭೋಲಾ ಮೀನಿನಿಂದ ಮೀನುಗಾರರ ಅದೃಷ್ಟವೇ ಬದಲಾಗಿದೆ.
ಪಶ್ಚಿಮ ಬಂಗಾಳದ ಸುಂದರ್ಬನ್ ನದಿಯಲ್ಲಿ ಸುಮಾರು 7 ಅಡಿ ಉದ್ದ ಮತ್ತು 78.4 ಕಿಲೋ ತೂಕದ ದೈತ್ಯಾಕಾರದ ಟೆಲಿಯಾ ಭೋಲಾ ಮೀನನ್ನು ಕಂಡ ನೀನುಗಾರರ ಗುಂಪು ಆಶ್ಚರ್ಯಗೊಂಡರು. ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ದೈತ್ಯಾಕಾರದ ಮೀನನ್ನು ಎಳೆದು ತರಲು ಮೀನುಗಾರರು ಹರಸಾಹವೇ ಪಡೆಬೇಕಾಯಿತು. ಮನುಷ್ಯನ ಸಾಮಾನ್ಯ ಎತ್ತರದಷ್ಟೇ ಇದ್ದ ಆ ಮೀನು ಕಂಡು ಮೀನುಗಾರರಿಗೆ ಅಚ್ಚರಿಯಾಗಿದೆ. ಅಪರೂಪದ ಮೀನನ್ನು ನೋಡಲು ಸ್ಥಳೀಯರು ಮುಗಿ ಬಿದ್ದಿದ್ದು, ಇದರ ಮಾರಾಟದಿಂದ ಮೀನುಗಾರರು 36 ಲಕ್ಷ ರೂಪಾಯಿ ಗಳಿಸಿಕೊಂಡಿದ್ದಾರೆ.
ಕಳೆದ ಶನಿವಾರ ದೈತ್ಯ ಮೀನನ್ನು ಮಾರಾಟ ಮಾಡಲಾಯಿತು. ಇದೇ ಮೊದಲಿಗೆ ಇಷ್ಟೊಂದು ಬೃಹತ್ ಗಾತ್ರದ ಮೀನನ್ನು ನೋಡಿ ಜನರು ಆಶ್ಚರ್ಯಗೊಂಡರು. ಈ ಮೀನನ್ನು ಸುಮಾರು 36 ಲಕ್ಷ ರೂಪಾಯಿಗೆ ಹರಾಜು ಮಾಡಲಾಗಿದ್ದು, ಕೋಲ್ಕತ್ತಾ ಮೂಲದ ಮೀನು ವ್ಯಾಪಾರ ಕಂಪನಿ ಇದನ್ನು ಖರೀದಿಸಿತು ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಈ ಮಾರುಕಟ್ಟೆಯಲ್ಲಿ ನಾವು ಇಷ್ಟು ದೈತ್ಯ ಮೀನನ್ನು ಎಂದೂ ನೋಡಿರಲಿಲ್ಲ. ಹರಾಜಿನಲ್ಲಿ ಪ್ರತಿ ಕಿಲೋಗೆ 47,880 ರೂಪಾಯಿಗೆ ಮೀನನ್ನು ಮಾರಾಟ ಮಾಡಲಾಗಿದೆ. ಆಡುಮಾತಿನಲ್ಲಿ ಟೆಲಿಬಾ ಭೋಲಾ ಎಂದು ಕರೆಯಲ್ಪಡುವ ದೈತ್ಯ ಮೀನು ಅಪಾರ ಔಷಧೀಯ ಗುಣಗಳನ್ನು ಹೊಂದಿದೆ. ಮೀನಿನ ಮಾಂಸದಲ್ಲಿ ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿದೆ. ಇದು ತುಂಬಾ ದುಬಾರಿ ಮೀನು ಎಂದು ಮೀನುಗಾರರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್
Viral Video: ಮನಿಕೆ ಮಗೆ ಹಿತೆ ಹಾಡಿಗೆ ಯುವತಿಯ ಬೆಲ್ಲಿ ಡಾನ್ಸ್; ನೆಟ್ಟಿಗರೆಲ್ಲಾ ಫಿದಾ
Published On - 11:06 am, Wed, 27 October 21