Viral Video: ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್
Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಗೆ ಸೆಲ್ಯೂಟ್ ಮಾಡುವ ಪುಟ್ಟ ಹುಡುಗನ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಅವನೊಬ್ಬ ಪುಟ್ಟ ಬಾಲಕ. ಅಪ್ಪನ ಕೈ ಹಿಡಿದುಕೊಂಡು ಹೋಗುತ್ತಿದ್ದ ಆತನ ಪಕ್ಕದಲ್ಲಿ ಮಿಲಿಟರಿ ವಾಹನ ನಿಂತಿತ್ತು. ಅದನ್ನು ನೋಡಿದವನೇ ಥಟ್ಟನೆ ನಿಂತ ಆ ಬಾಲಕ ಮಿಲಿಟರಿ ವಾಹನದಲ್ಲಿದ್ದ ಸೈನಿಕರಿಗೆ ಸೆಲ್ಯೂಟ್ ಮಾಡಿದ. ಈ ಘಟನೆ ನಡೆದಿದ್ದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಗೆ ಸೆಲ್ಯೂಟ್ ಮಾಡುವ ಪುಟ್ಟ ಹುಡುಗನ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನಾಲ್ಕು ವರ್ಷದ ವೀರ್ ಅರ್ಜುನ್ ತನ್ನ ತಂದೆಯ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಸೈನಿಕರನ್ನು ಗಮನಿಸಿದನು. ಚಿಕ್ಕ ಹುಡುಗ ಅಲ್ಲೇ ನಿಂತು ಸೈನಿಕರ ಕಡೆಗೆ ತಿರುಗಿ ಕೈ ಎತ್ತಿ ಸಲ್ಯೂಟ್ ಮಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮ ಕಾರ್ಯಕ್ರಮಗಳಲ್ಲಿ ವೈರಲ್ ಆಗಿವೆ.
At #Bengaluru airport – a young Indian snaps off a salute to our men in uniform. Respect n Patriotism is learnt young. #Respect #JaHind ??????
Video courtesy @MihirkJha ??
— Rajeev Chandrasekhar ?? (@Rajeev_GoI) October 24, 2021
ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಐಎಸ್‌ಎಫ್ ಸಿಬ್ಬಂದಿ, ವಾಹನದೊಳಗೆ ನಿಂತು ಸೆಲ್ಯೂಟ್ ಮಾಡಿದ್ದಾರೆ. ಅದನ್ನು ನೋಡಿದ ಹುಡುಗನ ಮುಖದಲ್ಲಿ ನಗು ಮೂಡಿದೆ. ವೀರ್ ಅವರ ತಂದೆ ಅರ್ಜುನ್ ಎಂಎಸ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಈ ವೀಡಿಯೊ ವೈರಲ್ ಆಗಿದೆ. ಅಕ್ಟೋಬರ್ 18ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ವಿಡಿಯೋವನ್ನು ಹುಡುಗನ ತಾಯಿ ಚಿತ್ರೀಕರಿಸಿದ್ದಾರೆ.
Overwhelming on so many levels. That kid awed before saluting, the uniformed man giving an absolutely respectful reply to the kid. The father showing appreciation as positive reinforcement to his kid. Watched a few times.
— TanRants (@LongIslandIcyT) October 24, 2021
ಈ ವಿಡಿಯೋವನ್ನು ನೋಡಿ ಖುಷಿಯಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು 4.3 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.
ಇದನ್ನೂ ಓದಿ: Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್