ಗಾಂಜಾ ಮತ್ತಿನಲ್ಲಿ ನಾಯಿಯನ್ನು ಕೊಂದ ಪುಂಡರು; ಅಮಾನವೀಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕರ್ಕಶ ಶಬ್ದದೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಕಂಡು ನಾಯಿ ಬೊಗಳಿದೆ. ಹೀಗಾಗಿ ನಶೆಯಲ್ಲಿದ್ದ ಯುವಕರು ನಾಯಿಯನ್ನು ಕೊಂದಿದ್ದಾರೆ. ನಾಯಿ ಸಾಯಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗಾಂಜಾ ಮತ್ತಿನಲ್ಲಿ ನಾಯಿಯನ್ನು ಕೊಂದ ಪುಂಡರು; ಅಮಾನವೀಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on:Oct 26, 2021 | 9:56 AM

ಬೆಂಗಳೂರು: ಒಂದರ ನಂತರ ಮತ್ತೊಂದರಂತೆ ಗಾಂಜಾ ಮತ್ತಿನ ಕೃತ್ಯ ಬಯಲಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಗಾಂಜಾ ಮತ್ತಿನಲ್ಲಿ ಯುವಕರು ನಾಯಿಯನ್ನು ಕೊಂದ ಘಟನೆ ಬೆಂಗಳೂರಿನ ದೇವಸಂದ್ರ ವಾರ್ಡ್‌ನ ಕಾಮದೇನು ಲೇಔಟ್​ನಲ್ಲಿ ನಡೆದಿದೆ. ಕರ್ಕಶ ಶಬ್ದದೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದ ಯುವಕರನ್ನು ಕಂಡು ನಾಯಿ ಬೊಗಳಿದೆ. ಹೀಗಾಗಿ ನಶೆಯಲ್ಲಿದ್ದ ಯುವಕರು ನಾಯಿಯನ್ನು ಕೊಂದಿದ್ದಾರೆ. ನಾಯಿ ಸಾಯಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೈಕ್‌ಗಳ ಕರ್ಕಶ ಶಬ್ದಕ್ಕೆ ನಾಯಿ ಬೊಗಳಿದ ಹಿನ್ನೆಲೆ, ಅದೇ ರಸ್ತೆಯ ಕನ್ಟ್ರಕ್ಷನ್ ಬಿಲ್ಡಿಂಗ್​ನಿಂದ ರಾಡ್ ತಂದ ಸವರಾರು, ರಾಡ್‌ನಿಂದ ಹೊಡೆದು ನಾಯಿಯನ್ನು ಸಾಯಿಸಿದ್ದಾರೆ. ಬೈಕ್​ನಲ್ಲಿ ಹೋಗುತ್ತಿದ್ದಂತೆ ನಾಯಿ ಮೇಲೆ ರಾಡ್ ಬೀಸಿ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಸ್ಥಳದಲ್ಲೇ ಶ್ವಾನ ಸಾವನ್ನಪ್ಪಿದೆ.

ಇತ್ತಿಚಿಗೆ ಗಾಂಜಾ ಅಡ್ಡೆಯಾಗಿ ಈ ಸ್ಥಳ ಬದಲಾಗಿದೆ. ಆರೋಪಕ್ಕೆ ಪುಷ್ಟಿ ನೀಡುವಂತೆ ಒಂದರ ನಂತರ ಮತ್ತೊಂದು ಘಟನೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ನಾಯಿಯ ಮೇಲೆ ನಡೆದ ಭೀಕರ ಹಲ್ಲೆ ವಿಡಿಯೋ ಸಹ ವೈರಲ್ ಆಗಿದೆ.

ಸಿಲಿಕಾನ್ ಸಿಟಿಯ ಚರ್ಚ್​ಗಳಲ್ಲಿ ಇನ್ನು ನಿಂತಿಲ್ಲ ಚಪ್ಪಲಿ ಕಳ್ಳರ ಕಾಟ ಸಿಲಿಕಾನ್ ಸಿಟಿಯ ಚರ್ಚ್​ಗಳಲ್ಲಿ ಇತ್ತೀಚೆಗೆ ಚಪ್ಪಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನ ಮತ್ತಿಕೆರೆಯಲ್ಲಿ ಸಿಸಿಟಿವಿ ಅಳವಡಿಸಿದರು ರಾಜಾರೋಷವಾಗಿ ಕಳ್ಳತನ ಮಾಡುತ್ತಿದ್ದಾರೆ. ಭಾನುವಾರ ಪಾರ್ಥನೆಗೆಂದು ತೆರಳಿದ ವ್ಯಕ್ತಿಯೋರ್ವರ ಚಪ್ಪಲಿಯನ್ನು ಕಳ್ಳ ಕದ್ದಿದ್ದಾನೆ. ಸೆಂಟ್ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ಭಾನುವಾರ ಬೆಳಗಿನ ಜಾವ 7 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ.

ಇದನ್ನೂ ಓದಿ: ಗಾಂಜಾ ಸೇದಲು ಬೆಂಕಿ ಪೊಟ್ಟಣ ನೀಡದಿದ್ದಕ್ಕೆ ಹಲ್ಲೆ; ಕುರಿಗಾಹಿಗಳನ್ನು ಮನಬಂದಂತೆ ಥಳಿಸಿದ ಪುಂಡರು

ಗೃಹ ಸಚಿವರ ಜಿಲ್ಲೆ ಶಿವಮೊಗ್ಗದಲ್ಲಿ ಗಾಂಜಾ ಹಾವಳಿ; ಕಳೆದ ಒಂದು ತಿಂಗಳಿನಿಂದ ಕಾರ್, ಬೈಕ್, ಆಟೋದಲ್ಲಿ ಗಾಂಜಾ ಪತ್ತೆ

Published On - 8:03 am, Tue, 26 October 21

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು