ಗಾಂಜಾ ಸೇದಲು ಬೆಂಕಿ ಪೊಟ್ಟಣ ನೀಡದಿದ್ದಕ್ಕೆ ಹಲ್ಲೆ; ಕುರಿಗಾಹಿಗಳನ್ನು ಮನಬಂದಂತೆ ಥಳಿಸಿದ ಪುಂಡರು

6 ಜನರ ಯುವಕರ ಗುಂಪೊಂದು ಕುರಿಗಾಹಿಗಳನ್ನು ನೂಕಿದ್ದು, ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಿಪಟೂರು ನಗರದ ಗಗನ್, ರಾಕೇಶ್, ಅರ್ಜುನ್, ಸ್ವರೂಪ್ ಸೆರಿದಂತೆ ಒಟ್ಟು 6 ಜನ ಸೇರಿ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಂಜಾ ಸೇದಲು ಬೆಂಕಿ ಪೊಟ್ಟಣ ನೀಡದಿದ್ದಕ್ಕೆ ಹಲ್ಲೆ; ಕುರಿಗಾಹಿಗಳನ್ನು ಮನಬಂದಂತೆ ಥಳಿಸಿದ ಪುಂಡರು
6 ಜನರ ಯುವಕರ ಗುಂಪಿನಿಂದ ಹಲ್ಲೆ
Follow us
TV9 Web
| Updated By: preethi shettigar

Updated on:Oct 04, 2021 | 9:31 AM

ತುಮಕೂರು: ಗಾಂಜಾ ಸೇದಲು ಬೆಂಕಿ ಪೊಟ್ಟಣ ಕೊಡದೇ ಇದ್ದಿದ್ದಕ್ಕೆ ಕುರಿಗಾಹಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿ‌ನ ಹುಚ್ಚನಹಟ್ಟಿ ಬಳಿ ನಡೆದಿದೆ. 6 ಜನರ ಯುವಕರ ಗುಂಪೊಂದು ಕುರಿಗಾಹಿಗಳನ್ನು ನೂಕಿದ್ದು, ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ತಿಪಟೂರು ನಗರದ ಗಗನ್, ರಾಕೇಶ್, ಅರ್ಜುನ್, ಸ್ವರೂಪ್ ಸೆರಿದಂತೆ ಒಟ್ಟು 6 ಜನ ಸೇರಿ ಕುರಿಗಾಹಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಕುರಿ ಮೇಯಿಸಲು ಬಂದಿದ್ದವರ ಮೇಲೆ ರಾಕ್ಷಸನಂತೆ ಎರಗಿದ ಗಗನ್, ಹಲ್ಲೆ ಮಾಡಿದ್ದಾನೆ. ಗಗನ್ ಈ ಹಿಂದೆ 9 ತಿಂಗಳುಗಳ ಕಾಲ ಜೈಲಿನಲ್ಲಿದ್ದ ಎನ್ನಲಾಗಿದೆ. ಸದ್ಯ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತಿಪಟೂರು ಗ್ರಾಮಾಂತರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತಿಬ್ಬರು ಪುಂಡರು ಪರಾರಿಯಾಗಿದ್ದಾರೆ.

ಮೈಸೂರು: ಸಹೋದರರ ಮೇಲೆ ಹಲ್ಲೆ; ಐವರ ಬಂಧನ ಮೈಸೂರಿನ ಹಂಚ್ಯಾ ಗ್ರಾಮದಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಗ್ರಾಮಾಂತರ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಶನಿವಾರ ಮಧ್ಯಾಹ್ನ ಚಾಕು, ಡ್ರ್ಯಾಗನ್, ಮಚ್ಚು, ಲಾಂಗ್‌ನಿಂದ ಸಹೋದರರಾದ ಕುಮಾರ್ ಮತ್ತು ನಂದೀಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆ ವೇಳೆ ಒಬ್ಬನನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದರು. ಆತ ನೀಡಿದ ಮಾಹಿತಿ ಆಧಾರಿಸಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರ ವಿವರ ಇನ್ನೂ ಲಭ್ಯವಾಗಿಲ್ಲ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದ್ಯ ಸೇವಿಸಿ ರಸ್ತೆಯಲ್ಲಿ ಮೋಜು ಮಸ್ತಿ; ಪ್ರಶ್ನೆ ಮಾಡಿದ ಭದ್ರಾ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಮೇಲೆ ಹಲ್ಲೆ

ಬೆಳಗಾವಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಕೈ, ಕಾಲು, ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆದ ಪತಿ

Published On - 7:29 am, Mon, 4 October 21