Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ; ವಿದ್ಯಾರ್ಥಿಗಳ ಆತಂಕ

ಕಟ್ಟಡವನ್ನು ನವೀಕರಣ ಮಾಡುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಶಿರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ; ವಿದ್ಯಾರ್ಥಿಗಳ ಆತಂಕ
ಶಿಥಿಲಕೊಂಡಿರುವ ಕಟ್ಟಡ
Follow us
TV9 Web
| Updated By: guruganesh bhat

Updated on:Oct 04, 2021 | 5:45 PM

ತುಮಕೂರು: ಶಿರಾ ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಕಟ್ಟಡ 1955ರಲ್ಲಿ ನಿರ್ಮಾಣವಾಗಿದ್ದು ಸಂಸ್ಥೆಯ ಪ್ರೌಢಶಾಲಾ ವಿಭಾಗವು ಸಹ ಇದೇ ಕಟ್ಟಡದಲ್ಲಿದೆ. ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. 8 ರಿಂದ10ನೇ ತರಗತಿಯವರಗೆ ಒಟ್ಟು 580 ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಟ್ಟಡ ಶಿಥಿಲಗೊಂಡಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕಟ್ಟಡವನ್ನು ನವೀಕರಣ ಮಾಡುವಂತೆ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

25 ವರ್ಷಗಳ ನಂತರ ಬೇಲೂರು ಪುರಸಭೆ ಕಾಂಗ್ರೆಸ್ ಪಾಲು ಹಾಸನ: 25 ವರ್ಷಗಳ ಬಳಿಕ ಬೇಲೂರು ಪುರಸಭೆ ಕಾಂಗ್ರೆಸ್ ಪಾಲಾಗಿದೆ. 23 ವಾರ್ಡ್ಗಳ ಪೈಕಿ 17 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಅಧ್ಯಕ್ಷರಾಗಿ ಚ.ನಾ.ದಾನಿ, ಉಪಾಧ್ಯಕ್ಷರಾಗಿ ರತ್ನಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಸಮುದ್ರದಲ್ಲಿ ಮುಳುಗುತ್ತಿದ್ದ 4 ಮಕ್ಕಳೂ ಸೇರಿ ಒಂದೇ ಕುಟುಂಬದ 6 ಜನರ ರಕ್ಷಣೆ ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಆರು ಮಕ್ಕಳನ್ನು ಲೈಫ್ ಗಾರ್ಡ್ ಹಾಗೂ ಟೂರಿಸ್ಟ್ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಪ್ರವಾಸಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 4 ಮಕ್ಕಳು ಸೇರಿ ಒಟ್ಟು ಆರು ಮಂದಿ ಕಡಲತೀರದಲ್ಲಿ ಆಟವಾಡುತ್ತಿದ್ದರು. ಆದರೆ ಒಮ್ಮೆಲೆ ಬಂದ ಅಲೆಯಿಂದ ಎಲ್ಲರೂ ಕೊಚ್ಚಿ ಹೋಗಿದ್ದಾರೆ. ತಕ್ಷಣ ಕುಟುಂಬಸ್ಥರು ಕೂಗಿಕೊಂಡಿದ್ದಾರೆ. ಬಳಿಕ ರಕ್ಷಣೆಗೆ ಧಾವಿಸಿದ ಲೈಫ್‌ಗಾರ್ಡ್ ಮತ್ತು ಟೂರಿಸ್ಟ್ ಮಿತ್ರ ಸಿಬ್ಬಂದಿ ಆರು ಜನರನ್ನೂ ರಕ್ಷಿಸಿದ್ದಾರೆ. ಮಕ್ಕಳು ನೀರು ಕುಡಿದಿದ್ದರಿಂದ ಪ್ರಜ್ಞೆ ತಪ್ಪಿದ್ದರು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಇದನ್ನೂ ಓದಿ: 

Oral Health: ನೀವು ಆರೋಗ್ಯವಾಗಿರಲು ಬಾಯಿ ಸ್ವಚ್ಛವಾಗಿರುವುದು ಏಕೆ ಮುಖ್ಯ? ಇಲ್ಲಿದೆ ಮಾಹಿತಿ

ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಬದಲಾಗಬಹುದು: ಬಸವರಾಜ ಬೊಮ್ಮಾಯಿ

Published On - 4:23 pm, Mon, 4 October 21