ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಬದಲಾಗಬಹುದು: ಬಸವರಾಜ ಬೊಮ್ಮಾಯಿ
Basavaraj Bommai: ತುಮಕೂರು ಬೆಂಗಳೂರಿನ ನಂತರ ಮುಂದುರೆಯುತ್ತಿರುವ ಜಿಲ್ಲೆ. ಶೈಕ್ಷಣಿಕ, ವಾಣಿಜ್ಯವಾಗಿ ಅತಿ ವೇಗವಾಗಿ ಬೆಳೆಯುತ್ತಿದೆ. ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಬದಲಾವಣೆ ಅಗಬಹುದು. ಈ ಸಂದರ್ಭದಲ್ಲಿ ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಬಂದಿರೋದು ಸೂಕ್ತವಾಗಿದೆ.
ತುಮಕೂರು: ಶೈಕ್ಷಣಿಕ, ವಾಣಿಜ್ಯ ಕ್ಷೇತ್ರದಲ್ಲಿ ತುಮಕೂರು ಬೆಳೆಯುತ್ತಿದೆ. ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಬದಲಾಗಬಹುದು ಎಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ತುಮಕೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಸೂಕ್ತವಾಗಿದೆ. ತಾಯಿ, ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ. ಕೊವಿಡ್ 3ನೇ ಅಲೆ ಹಿನ್ನೆಲೆ ಪೌಷ್ಟಿಕ ಆಹಾರದ ವ್ಯವಸ್ಥೆ ಆಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. 24 ಸಾವಿರ ಬೆಡ್, 4 ಸಾವಿರ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಒಂದೇ ವರ್ಷದಲ್ಲಿ ಇಷ್ಟು ಬೆಡ್‌ಗಳ ವ್ಯವಸ್ಥೆ ಮಾಡಿದ್ದೇವೆ ಎಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ತುಮಕೂರು ಬೆಂಗಳೂರಿನ ನಂತರ ಮುಂದುರೆಯುತ್ತಿರುವ ಜಿಲ್ಲೆ. ಶೈಕ್ಷಣಿಕ, ವಾಣಿಜ್ಯವಾಗಿ ಅತಿ ವೇಗವಾಗಿ ಬೆಳೆಯುತ್ತಿದೆ. ತುಮಕೂರು ಬೆಂಗಳೂರಿನ ಸ್ಯಾಟಲೈಟ್ ಟೌನ್ ಆಗಿ ಬದಲಾವಣೆ ಅಗಬಹುದು. ಈ ಸಂದರ್ಭದಲ್ಲಿ ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಬಂದಿರೋದು ಸೂಕ್ತವಾಗಿದೆ. ವೈದ್ಯರು, ನರ್ಸ, ಸೇರಿದಂತೆ ಎಲ್ಲರನ್ನೂ ಅಭಿನಂದಿಸುತ್ತೇನೆ. ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಸಚಿವ ಡಾ. ಸುಧಾಕರ ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. 24 ಸಾವಿರ ಬೆಡ್ ಹಾಗೂ 4 ಸಾವಿರ ಐಸಿಯು ಬೆಡ್ ಒಂದೇ ವರ್ಷದಲ್ಲಿ ಮಾಡಿದ್ದೇವೆ. ನಮ್ಮ ನಾಯಕರಾದ ಯಡಿಯೂರಪ್ಪ ಕೊವಿಡ್ ವೇಳೆ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಜನರ ಜೀವ ಉಳಿಸುವ ಈ ಮಾನವೀಯತೆ ಕಾರ್ಯದಲ್ಲಿ ನಾವು ಎಷ್ಟು ಸೂಕ್ಷ್ಮವಾಗಿ ಇರಬೇಕು ಅನ್ನೋದನ್ನು ನಾವು ಸಾಮಾಜಿಕ ಜೀವನದಲ್ಲಿ ಇರುವರು ಅರ್ಥಮಾಡಿಕೊಳ್ಳಬೇಕು. ಆರೋಗ್ಯ ಕ್ಷೇತ್ರದಲ್ಲಿ ನಾವು ಹೆಚ್ಚು ಗಮನ ಇಟ್ಟು ಕೆಲಸ ಮಾಡುತಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರವೂ ಕೊವಿಡ್ ಲಸಿಕೆ ನೀಡಬೇಕೆಂದು ಒತ್ತಾಯ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅದೊಂದು ಚಿಂತನೆ ನಡೆಯುತ್ತಿದೆ, ಕೆಲವು ವಲಯಗಳಿಂದ ನಮಗೂ ಬೇಡಿಕೆ ಬಂದಿದೆ. ಅದನ್ನು ಗಮನಿಸಿ ಅದಕ್ಕೊಂದು ನಿರ್ಣಯ ಮಾಡ್ತೇವೆ. ಭಾನುವಾರ ದಿನ ಜನರು ಜಾಸ್ತಿ ಫ್ರೀಯಾಗಿ ಇರ್ತಾರೆ. ಅವತ್ತು ವ್ಯಾಕ್ಸಿನೇಷನ್ಗೆ ಅನುಕೂಲ ಆಗುತ್ತೆ. ಡಾ. ಸುಧಾಕರ್ ಅದರ ಬಗ್ಗೆ ಆದಷ್ಟು ಬೇಗ ತೀರ್ಮಾನ ಮಾಡ್ತಾರೆ. ಅದೇ ದಿಕ್ಕಿನಲ್ಲಿ ನಮ್ಮ ಚಿಂತನೆ ಕೂಡ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಾಣಾಕ್ಯ ವಿವಿಗೆ ಜಮೀನು ಮಂಜೂರಿಗೆ ವಿರೋಧ ವಿಚಾರವಾಗಿ ಅವರು ಮಾತನಾಡಿದ್ದಾರೆ. ಕಾಂಗ್ರೆಸ್ನವರು ಬೇರೆ ಬೇರೆ ಉದ್ದೇಶಕ್ಕೆ ಎಷ್ಟು ಭೂಮಿ ನೀಡಿದ್ದಾರೆ ಅನ್ನೋ ಲಿಸ್ಟ್ ಇದೆ ನಮ್ಮಹತ್ರ. ಒಂದೊಳ್ಳೆ ಉದ್ದೇಶಕ್ಕೆ, ಶಿಕ್ಷಣಕ್ಕಾಗಿ ನಾವು ಕೊಡ್ತಿದ್ದೇವೆ. ರಾಜ್ಯದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹಿಂದಿನಿಂದಲೂ ಜಾಗ ಕೊಡುತ್ತಾ ಬಂದಿದೆ. ಅದೇ ರೀತಿ ಈಗಲೂ ಕೊಟ್ಟಿದೆ, ಅದರಲ್ಲಿ ವಿಶೇಷವೇನಿಲ್ಲ ಎಂದು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು ಮೆಡಿಕಲ್ ಕಾಲೇಜು ಬಗ್ಗೆ ವೇದಿಕೆ ಮೇಲೆ ತೀರ್ಮಾನ ಮಾಡೋಕಾಗಲ್ಲ. ಈ ಮುಂಚೆನೂ ಮಾಧುಸ್ವಾಮಿ ಅದರ ಬಗ್ಗೆ ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾಕೇಂದ್ರ ಬಿಟ್ಟು ಬೇರೆ ಕಡೆ ಕೊಡೋ ವ್ಯವಸ್ಥೆ ಬಂದರೆ ತುಮಕೂರಿಗೆ ಮೊದಲ ಪ್ರಾಶಸ್ತ ನೀಡ್ತೇವೆ ಎಂದು ತುಮಕೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ; ಬೆಳಗಾವಿಯಲ್ಲಿ ತಟ್ಟಲಿದೆ ರೈತರ ಪ್ರತಿಭಟನೆಯ ಬಿಸಿ!
ಇದನ್ನೂ ಓದಿ: 6ರಿಂದ ದ್ವಿತೀಯ ಪಿಯುಸಿವರೆಗೆ ಸಂಪೂರ್ಣ ಹಾಜರಾತಿಗೆ ಅವಕಾಶ, ವಾರದಲ್ಲಿ 5 ದಿನ ತರಗತಿ: ಸಿಎಂ ಬೊಮ್ಮಾಯಿ
Published On - 2:39 pm, Sat, 25 September 21