ಮೈಸೂರಿನ ಶ್ರೀ ರಾಜ ಕಾರ್ಖಾನೆ ಮಾಲೀಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾವ ನಿಧನ

ಮೈಸೂರಿನ ಇಟ್ಟಿಗೆಗೂಡಿನ ನಿವಾಸಿಯಾಗಿರುವ ತಿಮ್ಮಯ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೈಸೂರಿನ ಶ್ರೀ ರಾಜ ಕಾರ್ಖಾನೆ ಮಾಲೀಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾವ ನಿಧನ
ಮೈಸೂರಿನ ಶ್ರೀ ರಾಜ ಕಾರ್ಖಾನೆ ಮಾಲೀಕ, ಡಿಕೆ ಶಿವಕುಮಾರ್ ಮಾವ ನಿಧನ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರವರ ಮಾವ ಆರ್. ತಿಮ್ಮಯ್ಯ ಅಲಿಯಾಸ್ ಸೀಗೆಕಾಯಿ ಪಾಪಣ್ಣ(83) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ನಿವಾಸಿಯಾಗಿರುವ ತಿಮ್ಮಯ್ಯ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೈಸೂರಿನ ಶ್ರೀ ರಾಜ ಸೋಪ್ ನೆಟ್ ಕಾರ್ಖಾನೆಯ(ಎಸ್ಆರ್ ಬ್ರ್ಯಾಂಡ್) ಮಾಲೀಕರಾಗಿದ್ದ ತಿಮ್ಮಯ್ಯ ಪತ್ನಿ ಲಕ್ಷ್ಮಿ, ಪುತ್ರ ಸತ್ಯನಾರಾಯಣ್, ಪುತ್ರಿಯರಾದ ಉಷಾ (ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಪತ್ನಿ), ಸುಮಾರನ್ನು ಅಗಲಿದ್ದಾರೆ. ಇಟ್ಟಿಗೆಗೂಡಿನ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದು ಮಧ್ಯಾಹ್ನ ಮೈಸೂರಿನಲ್ಲಿ ತಿಮ್ಮಯ್ಯನವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: Shiva Rajkumar: ಯಶ್​ರನ್ನು ಹಾಡಿಹೊಗಳಿದ ಶಿವಣ್ಣ; ವಿಡಿಯೋ ನೋಡಿ

ಚಿತ್ರದುರ್ಗ: ಸೂಕ್ತ ಶಾಲಾ ಕಟ್ಟಡ ಇಲ್ಲದೆ ವಿದ್ಯಾರ್ಥಿಗಳ ಪರದಾಟ; ಬಯಲಲ್ಲೇ ಪಾಠ ಕೇಳುವ ದುಸ್ಥಿತಿ

Click on your DTH Provider to Add TV9 Kannada