ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಯುವಕ-ಯುವತಿಯರಿಗೆ ಕೋಟ್ಯಾಂತರ ರೂ ಮೋಸ, ನಾಲ್ವರು ಅರೆಸ್ಟ್

| Updated By: ಆಯೇಷಾ ಬಾನು

Updated on: Feb 26, 2024 | 12:06 PM

ವರ್ಕ್ ಇಂಡಿಯಾ ಆ್ಯಫ್ ಮುಖಾಂತರ ಯುವಕ-ಯುವತಿಯರ ನಂಬರ್‌ ಪಡೆದು ತಲಾ 60 ಸಾವಿರ ಹಣ ಪಡೆದು ಮೋಸ ಮಾಡಲಾಗಿದೆ. 'CYL FACTION MARKETING' ಎಂಬ ಕಂಪನಿಯೊಂದು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಲ್ಲಿ ವಂಚಿಸಿದೆ. ಸದ್ಯ ಈ ಘಟನೆ ಸಂಬಂಧ 4 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಯುವಕ-ಯುವತಿಯರಿಗೆ ಕೋಟ್ಯಾಂತರ ರೂ ಮೋಸ, ನಾಲ್ವರು ಅರೆಸ್ಟ್
ಮೋಸ ಹೋದ ಯುವಕ-ಯುವತಿಯರು
Follow us on

ನೆಲಮಂಗಲ, ಫೆ.26: ಎಸ್​ಎಸ್​ಎಲ್​ಸಿ (SSLC), ಪಿಯುಸಿ (PUC) ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿರುವ ಯುವಕರೇ ಕೆಲಸಕ್ಕೆ ಸೇರುವ ಮುನ್ನ ಇರಲಿ ಎಚ್ಚರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್​ನಲ್ಲಿ ನಕಲಿ ಚೈನ್ ಲಿಂಕ್ ಕಂಪನಿ ತಲೆ ಎತ್ತಿದೆ. SSLC, PUC ಮುಗಿಸಿರುವ ವಿದ್ಯಾರ್ಥಿಗಳೇ ಈ ಕಂಪನಿಯ ಮೈನ್ ಟಾರ್ಗೆಟ್. ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ನಿರುದ್ಯೋಗಿಗಳಿಗೆ ಗಾಳ ಹಾಕಿ ಮೋಸ ಮಾಡಲಾಗುತ್ತಿದೆ. ‘CYL FACTION MARKETING’ ಎಂಬ ಕಂಪನಿಯೊಂದು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಲ್ಲಿ ಕೆಲಸ ನೀಡಿ ಯುವಕ-ಯುವತಿಯರಿಗೆ ಮೋಸ ಮಾಡಿದೆ.

ವರ್ಕ್ ಇಂಡಿಯಾ ಆ್ಯಫ್ ಮುಖಾಂತರ ಯುವಕ-ಯುವತಿಯರ ನಂಬರ್‌ ಪಡೆದು ತಲಾ 60 ಸಾವಿರ ಹಣ ಪಡೆದು ನೂರಾರು ಯುವಕ ಯುವತಿಯರಿಗೆ ಲಕ್ಷಾಂತರ ರೂಪಾಯಿ ನಾಮ ಹಾಕಲಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಚೇರಿ ನಡೆಸುತ್ತಿದ್ದ 9 ಜನರ ಪೈಕಿ ಅಭಿಷೇಕ್(21),ಅದಿತ್ಯ(22), ಹೇಮಂತ್(26), ಜಗದೀಶ್(28)ನನ್ನು ಬಂಧಿಸಲಾಗಿದೆ. ತುಮಕೂರು, ನೆಲಮಂಗಲ, ಕೋಲಾರ, ಮೈಸೂರು ಸೇರಿದಂತೆ ಹಲವಾರು ಜಿಲ್ಲೆಯಲ್ಲಿ ತಲೆ ಎತ್ತಿರುವ ಫ್ರಾಂಡ್ ಕಂಪನಿ ವಿರುದ್ಧ ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ: ಮಂಡ್ಯ ನೂತನ ರೈಲು ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ: ಒಂದೇ ವೇದಿಕೆಯಲ್ಲಿ ಸುಮಲತಾ, ಚಲುವರಾಯಸ್ವಾಮಿ

ಸೀತಾ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಉಡುಪಿ‌‌ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆ ಬಳಿಯ ಸೀತಾ ನದಿಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಶೃಂಗೇರಿಯಲ್ಲಿ ವೈದ್ಯರಾಗಿದ್ದ ಡಾ. ದೀಪಕ್, ಶಿವಮೊಗ್ಗದಲ್ಲಿ ವ್ಯಾಪಾರಿಯಾಗಿದ್ದ ಶೈನು ಡೇನಿಯಲ್ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆಂದು ಮೂವರು ಗೆಳೆಯರ ತಂಡ ಬಂದಾಗ ದುರಂತ ನಡೆದಿದೆ. ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಪ್ರೀತ್ಸೆ.. ಪ್ರೀತ್ಸೆ.. ಅಂತಾ ಕಾಟ, ಬಾಲಕಿ ಸೂಸೈಡ್

ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿಯಲ್ಲಿ ಘಟನೆ ನಡೆದಿದ್ದು, 16 ವರ್ಷದ ವರ್ಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೀತಿಸುವಂತೆ ಬಾಲಕಿಗೆ ತ್ಯಾಗರಾಜ್ ಕಿರುಕುಳ ನೀಡ್ತಿದ್ದ. 2 ತಿಂಗಳ ಹಿಂದೆ ಬಾಲಕಿ ಪೋಷಕರು ಎಚ್ಚರಿಕೆ ನೀಡಿದ್ರೂ ತ್ಯಾಗರಾಜ್​ ಮತ್ತೆ ಕಾಟ ಕೊಡಲು ಆರಂಭಿಸಿದ್ದ. ಯುವಕನ ಕಾಟ ತಾಳಲಾರದೆ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ