ಬೆಂಗಳೂರು ಗ್ರಾಮಾಂತರ, ಸೆ.19: ವಿಶಾಲವಾದ ಕಲ್ಲಿನ ಕ್ವಾರಿ, ಸುತ್ತಲೂ ನಿಂತಿರುವ ಪೊಲೀಸರು ಹಾಗೂ ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿ. ಸತತ6 ಗಂಟೆ ಪ್ರಯತ್ನ ನಡೆಸಿದ ಅಗ್ನಿಶಾಮಕ ದಳದ ಅಧಿಕಾರಿಗಳು, 21 ವರ್ಷದ ಅಜ್ಮಲ್ ಎನ್ನುವ ಯುವಕನ ಮೃತ ದೇಹ ಹೊರತೆಗೆದಿದ್ದಾರೆ. ಹೌದು, ಈ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ (Bengaluru Rural)ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ಕ್ವಾರಿಯಲ್ಲಿ. ಹೆಲ್ಪರ್ ವೃತ್ತಿ ಮಾಡುತ್ತಾ ನೆಲಮಂಗಲದಲ್ಲಿ ವಾಸವಿದ್ದ ಮೃತ ಅಜ್ಮಲ್, ನಿನ್ನೆ(ಸೆ.18) ಸಂಜೆ ಈಜಲು ಕ್ವಾರಿಗೆ ಹೋಗಿ ಶವವಾಗಿ ಪತ್ತೆಯಾಗಿದ್ದಾನೆ.
ಮೃತ ಅಜ್ಮಲ್ಗೆ ನೀರು ಎಂದರೆ ಎಲ್ಲಿಲ್ಲದ ಪ್ರೀತಿ, ಅಲ್ಲದೆ ಈತ ಈಜು ಕೂಡ ಕಲಿತಿದ್ದ. ಹೀಗಿದ್ದಾಗ ಕ್ವಾರೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಈ ವೇಳೆ, ಆಳವನ್ನು ತಿಳಿಯದೆಯೇ ಕ್ವಾರೆ ನೀರಿಗೆ ಇಳಿದು ಮುಳುಗಿದ್ದಾನೆ. ಕೂಡಲೇ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ, 6 ಗಂಟೆಗಳ ಸತತ ಪ್ರಯತ್ನದ ಬಳಿಕ ಹಲವು ಸಲಕರಣೆಗಳನ್ನು ಬಳಸಿ ಮೃತ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ನೆಲಮಂಗಲ: ಡಿವೈಡರ್‌ಗೆ ಗುದ್ದಿದ ಕಾರು; 5ಜನ ಇಂಜಿನಿಯರ್ಗಳ ಪೈಕಿ ಮೂವರು ಸ್ಥಳದಲ್ಲೇ ಸಾವು
ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಇತ್ತ ದೂರದಿಂದ ಬಂದು, ಬದುಕು ಕಟ್ಟಿಕೊಂಡು ಕುಟುಂಬದ ಜವಾಬ್ದಾರಿ ಹೊತ್ತಿದ್ದವನು ನೀರು ಪಾಲಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ: ಕ್ಯಾಂಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ಹೊನ್ನೇನಹಳ್ಳಿಯ ಯುವಕ ಮಣಿ(27)ಮೃತ ಸವಾರ. ಸುರಿಯುವ ಮಳೆಯಲ್ಲಿ ದಾರಿ ಕಾಣದೆ ಕ್ಯಾಂಟರ್‌ಗೆ ಬೈಕ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ