ಬನ್ನೇರುಘಟ್ಟ ಪಾರ್ಕ್​​ನಲ್ಲಿ ದುರ್ಘಟನೆ, ಸಿಬ್ಬಂದಿ ಸಾವು

  • TV9 Web Team
  • Published On - 17:15 PM, 29 Nov 2019
ಬನ್ನೇರುಘಟ್ಟ ಪಾರ್ಕ್​​ನಲ್ಲಿ ದುರ್ಘಟನೆ, ಸಿಬ್ಬಂದಿ ಸಾವು

ಆನೇಕಲ್: ಬನ್ನೇರುಘಟ್ಟ ಪಾರ್ಕ್​​ನಲ್ಲಿ ಸೋಲಾರ್ ವಿದ್ಯುತ್ ತಂತಿ ಪರಿಶೀಲನೆ ವೇಳೆ ಸಿಬ್ಬಂದಿಯೊಬ್ಬರು ಗೋಡೆಯಿಂದ‌ ಬಿದ್ದು ಸಾವನ್ನಪ್ಪಿದ್ದಾರೆ. ಸಸ್ಯಹಾರಿ ಪ್ರಾಣಿ ಸಫಾರಿ ಆವರಣದಲ್ಲಿ ಈ ದುರ್ಘಟನೆ ನಡೆದಿದ್ದು, ದೊಡ್ಡಯ್ಯ(45) ಸಾವನ್ನಪ್ಪಿದ ದುರ್ದೈವಿ. ಇವರು ಬನ್ನೇರುಘಟ್ಟದ ಬೈರಪ್ಪನಹಳ್ಳಿ ಮೂಲದವರು. ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು.

ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸೋಲಾರ್ ವಿದ್ಯುತ್ ತಂತಿ ಪರಿಶೀಲನೆ ನಡೆಸಲಾಗುತ್ತಿತ್ತು. ಆ ವೇಳೆ ಆಯತಪ್ಪಿ, 15 ಅಡಿ‌ ಎತ್ತರದ‌ ಗೋಡೆಯ ಮೇಲಿಂದ ಕಳಗೆ ಬಿದ್ದಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.