
ದೇವನಹಳ್ಳಿ, ಡಿಸೆಂಬರ್ 13: ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮ ಪಂಚಾಯತಿ ಹುದ್ದೆಗೆ ಕಾಂಗ್ರೆಸ್ (Congress) ಮತ್ತು ಬಿಜೆಪಿ ನಡುವೆ ಗಾದಿಗಾಗಿ ಹೋರಾಟವೇ ನಡೆಯುತ್ತಿದೆ. ಹಾಲಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ಒಂದು ಕಡೆಯಾದರೆ, ಹೊಸದಾಗಿ ಅಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿರುವ ಬಿಜೆಪಿ ಮತ್ತೊಂದು ಕಡೆ. ಈ ಹಿಂದೆ ಪಂಚಾಯತಿ ಚುನಾವಣೆಯಲ್ಲಿ 17 ಜನ ಕಾಂಗ್ರೆಸ್ ಬೆಂಬಲಿತರು, 6 ಜನ ಬಿಜೆಪಿ ಹಾಗೂ ಮೂವರು ಜೆಡಿಎಸ್ ಸದಸ್ಯರು ಗೆದ್ದಿದ್ದರು.
ಗೆದ್ದ ಕಾಂಗ್ರೆಸ್ ಸದಸ್ಯರನ್ನ ರೆಸಾರ್ಟ್ಗೆ ಕರೆದುಕೊಂಡು ಹೋಗಿದ್ದ ಬಿಜೆಪಿ ಬೆಂಬಲಿತರು ಆಪರೇಷನ್ ಮಾಡಲು ಹೊರಟಿದ್ದರು. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಮುನೇಗೌಡ ವಿರುದ್ದ ಸದಸ್ಯರು ಅವಿಶ್ವಾಸ ಮಂಡನೆ ನಿರ್ಣಯ ಮಾಡಿದ್ದರು. ಜೊತೆಗೆ ಬಿಜೆಪಿ ಬೆಂಬಲಿತ ಸದಸ್ಯನಿಗೆ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಸದಸ್ಯರು ಆಪರೇಷನ್ ಮಾಡಿದ್ದರು. ಆಪರೇಷನ್ ಕಮಲಕ್ಕೆ ಒಳಗಾದ ಕಾಂಗ್ರೆಸ್ ಸದಸ್ಯರು ಪಬ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಇದನ್ನೂ ಓದಿ: Puthila Parivar : ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲೂ ಪುತ್ತಿಲ ಪರಿವಾರ ಕಮಾಲ್, ಬಿಜೆಪಿಗೆ ಮುಖಭಂಗ
ಆದರೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಆಯ್ಕೆಗೆ ಕಾಂಗ್ರೆಸ್ ಮುಖಂಡರು ಕೋರ್ಟ್ನಿಂದ ಸ್ಟೇ ತಂದಿದ್ದರು. ಹಾಗಾಗಿ ತಾತ್ಕಾಲಿಕವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಯ್ಕೆಯನ್ನು ಮುಂದೂಡಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ PDO ವೆಂಕಟೇಶ ಅಮಾನತು-ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಆದೇಶ
ಪಂಚಾಯತಿಗೆ ಆದಾಯ ಹೆಚ್ಚಾಗಿರುವ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಟ್ ಶುರುವಾಗಿದೆ. ಆಯ್ಕೆ ಮುಂದೂಡಿಕೆಯಾದ ಕಾರಣ ಹೂವಿನ ಹಾರ ಹಾಕಿಕೊಂಡು ಕಾಂಗ್ರೆಸ್ ಸದಸ್ಯರು ಸಂಭ್ರಮಿಸಿದ್ದರು. ಸದ್ಯ ಬಾಗಲೂರು ಗ್ರಾಮ ಪಂಚಾಯಿತಿ ಕಂದಾಯ ಸಚಿವ ಕೃಷ್ಣಬೈರೆಗೌಡಗೆ ಪ್ರತಿಷ್ಠೆಯ ಕಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:19 pm, Wed, 13 December 23