ಬೆಂಗಳೂರು, (ನವೆಂಬರ್ 17): ನಗರದ ಸಂಚಾರದ ದಟ್ಟಣೆ ಕಡಿಮೆ ಮಾಡುವ, ಸರಕು ಸಾಗಣೆ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್ನ ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ (Doddaballapur-Hoskote )ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಆರಂಭಗೊಂಡು ಹೊಸಕೋಟೆ ವರೆಗಿನ ನಾಲ್ಕು ಪಥ ರಸ್ತೆಯ 47 ಕಿ.ಮಿ.ನಿಂದ 76.150 ಕಿ.ಮಿ ವರೆಗೆ ಬಳಕೆದಾರರಿಗೆ ನಲ್ಲೂರು ದೇವನಹಳ್ಳಿ ಸುಂಕ ವಸೂಲಾತಿ ಕೇಂದ್ರದಲ್ಲಿ ಇಂದಿನಿಂದ (ವೆಂಬರ್ 17) ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಇದು 2024ರ ಮಾರ್ಚ್31 ರವರೆಗೆ ಜಾರಿಯಲ್ಲಿರಲಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ( NHAI) ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ, ಯಾವೆಲ್ಲಾ ವಾಹನಗಳಿಗೆ ಎಷ್ಟೆಷ್ಟು ಶುಲ್ಕ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಅನ್ನು ಬೆಂಗಳೂರನ್ನು ನೆರೆಯ ಪಟ್ಟಣಗಳಾದ ದಾಬಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ ಮತ್ತು ರಾಮನಗರದೊಂದಿಗೆ ಸಂಪರ್ಕಿಸಲು ನಿರ್ಮಾಣ ಮಾಡಲಾಗುತ್ತದೆ. ಒಮ್ಮೆ ಸಂಪೂರ್ಣವಾಗಿ ಸಿದ್ಧವಾದ ನಂತರ ದೂರದ ವಾಣಿಜ್ಯ ವಾಹನಗಳು ಬೆಂಗಳೂರನ್ನು ಪ್ರವೇಶಿಸುವ ಅಗತ್ಯವನ್ನು ತಪ್ಪಿಸುತ್ತದೆ. ಸ್ಯಾಟಲೈಟ್ ಟೌನ್‌ಗಳ ನಡುವೆ ಚಲಿಸುವ ಸಂಚಾರವು ನಗರವನ್ನು ಬೈಪಾಸ್ ಮಾಡಲು ಸಾಧ್ಯವಾಗುತ್ತದೆ.
17,000 ಕೋಟಿ ರೂಪಾಯಿಗಳ ಯೋಜನೆಯನ್ನು 10 ಪ್ಯಾಕೇಜ್‌ಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಭಿವೃದ್ಧಿಪಡಿಸುತ್ತಿದೆ. 10 ಪ್ಯಾಕೇಜ್‌ಗಳಲ್ಲಿ ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ಭಾಗ (34.15 ಕಿ.ಮೀ) ಪೂರ್ಣಗೊಂಡಿದೆ. ಇದು ಗಂಟೆಗೆ 10,000 ಪ್ಯಾಸೆಂಜರ್ ಕಾರ್ ಯುನಿಟ್ (PCU) ನೊಂದಿಗೆ ನಾಲ್ಕು ಲೇನ್‌ಗಳನ್ನು ಹೊಂದಿದೆ.
ಈ ರಸ್ತೆ ಪೂರ್ಣಗೊಂಡರೆ ಬೇರೆ-ಬೇರೆ ಪ್ರದೇಶಗಳಿಗೆ ತೆರಳುವ ವಾಣಿಜ್ಯ ವಾಹನಗಳು ಬೆಂಗಳೂರು ನಗರ ಪ್ರವೇಶಿದೇ ಹೊರವಲಯದ ಮೂಲಕ ಸಂಚರಿಸಬಹುದಾಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು, ವಾನಹಗಳು ನಿಗದಿತ ಸ್ಥಳವನ್ನು ತ್ವರಿತವಾಗಿ ತಲುಪಲು ಈ ಮಾರ್ಗ ಅನುಕೂಲವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ