ನೆಲಮಂಗಲ: ತರಬನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ; ಕೆಲಸ ನಿಲ್ಲಿಸದಿದ್ದರೆ ಒಂದು ಲಕ್ಷ ಜನರೊಂದಿಗೆ ಧರಣಿ ನಡೆಸುವ ಎಚ್ಚರಿಕೆ

| Updated By: ಆಯೇಷಾ ಬಾನು

Updated on: Mar 07, 2022 | 5:56 PM

ಕಸ ಘಟಕ ಅರಂಭಿಸಿದ್ರೆ ದುರ್ನಾಥ, ಸಾಂಕ್ರಾಮಿಕ ರೋಗ ಬರುತ್ತೆ. ಹಾಗಾಗಿ ಸ್ಥಳೀಯರು ಕಸ ವಿಲೇವಾರಿ ಘಟಕ ಮಾಡಲು ಬಿಡುವುದಿಲ್ಲ. ಗ್ರಾಮಕ್ಕೆ ನೀರಿನ ಸಂಪರ್ಕ ಇಲ್ಲಿಂದಲೇ ಒದಗಿಸಲಾಗಿದೆ. ಅರ್ಕಾವತಿ ನದಿ ನೀರು ವರ್ಷ ಪೂರ್ತಿ ಇಲ್ಲಿ ತುಂಬಿ ಹರಿಯುತ್ತೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ನೆಲಮಂಗಲ: ತರಬನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ; ಕೆಲಸ ನಿಲ್ಲಿಸದಿದ್ದರೆ ಒಂದು ಲಕ್ಷ ಜನರೊಂದಿಗೆ ಧರಣಿ ನಡೆಸುವ ಎಚ್ಚರಿಕೆ
ನೆಲಮಂಗಲ: ತರಬನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ; ಕೆಲಸ ನಿಲ್ಲಿಸದಿದ್ದರೆ ಒಂದು ಲಕ್ಷ ಜನರೊಂದಿಗೆ ಧರಣಿ ನಡೆಸುವ ಎಚ್ಚರಿಕೆ
Follow us on

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ತರಬನಹಳ್ಳಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕಕ್ಕೆ(Garbage Disposal Unit) ಸ್ಥಳೀಯ ನಿವಾಸಿಗಳ ವಿರೋಧ ವ್ಯಕ್ತವಾಗಿದೆ. ಕಸ ವಿಲೇವಾರಿ ಘಟಕದಿಂದ ಆರೋಗ್ಯ ಸಮಸ್ಯೆಗಳು ಎದುರಾಗಿವೆ ಎಂದ ತರಬನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಸ ವಿಲೇವಾರಿ ಘಟಕ ನಿಲ್ಲಿಸಿ, ಗ್ರಾಮಸ್ಥರನ್ನ ಉಳಿಸಿರೆಂದು ಸ್ಥಳದಲ್ಲಿ ಧರಣಿ ನಡೆಸಿದ್ದಾರೆ.

ಕಸ ಘಟಕ ಅರಂಭಿಸಿದ್ರೆ ದುರ್ನಾಥ, ಸಾಂಕ್ರಾಮಿಕ ರೋಗ ಬರುತ್ತೆ. ಹಾಗಾಗಿ ಸ್ಥಳೀಯರು ಕಸ ವಿಲೇವಾರಿ ಘಟಕ ಮಾಡಲು ಬಿಡುವುದಿಲ್ಲ. ಗ್ರಾಮಕ್ಕೆ ನೀರಿನ ಸಂಪರ್ಕ ಇಲ್ಲಿಂದಲೇ ಒದಗಿಸಲಾಗಿದೆ. ಅರ್ಕಾವತಿ ನದಿ ನೀರು ವರ್ಷ ಪೂರ್ತಿ ಇಲ್ಲಿ ತುಂಬಿ ಹರಿಯುತ್ತೆ. ಅವೈಜ್ಞಾನಿಕವಾಗಿ ಶಾಸಕ ಎಸ್.ಆರ್.ವಿಶ್ವನಾಥ್ ಇಲ್ಲಿ ಘಟಕ ಸ್ಥಾಪಿಸಲು ಅನುಮತಿ ಕೊಟ್ಟಿದ್ದಾರೆ. ಸ್ಥಳೀಯ ವಾಸ್ತವ ಮಾಹಿತಿ ಬಚ್ಚಿಟ್ಟು ಡಿಪಿಆರ್ ಮಾಡಿದ್ದಾರೆ ಅಧಿಕಾರಿಗಳು ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ರು ಪ್ರಯೋಜನ ಆಗಿಲ್ಲ. ನಾವು ಪ್ರತಿಭಟನೆಗೆ ಬಂದ ಕೂಡಲೇ ಕೆಲಸಗಾರರು ಜೆಸಿಬಿ ಸಮೇತವಾಗಿ ಓಡುತ್ತಿದ್ದಾರೆ. ಶಾಸಕರು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಅಂತಿದ್ದಾರೆ. ಕೂಡಲೇ ಕಾಮಗಾರಿ ನಿಲ್ಲಿಸದಿದ್ದರೆ ಒಂದು ಲಕ್ಷ ಜನ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Watch: ಸ್ಥಳಾಂತರಿಸುವ ಮುನ್ನ ಉಕ್ರೇನ್​​ನಲ್ಲಿ ಗಾಯಗೊಂಡ ಭಾರತೀಯ ವಿದ್ಯಾರ್ಥಿಗೆ ಸಚಿವ ವಿಕೆ ಸಿಂಗ್ ಭರವಸೆ

ಎರಡನೇ ಕೇಸಿನಲ್ಲಿಯೂ ಜಾಮೀನು ಮಂಜೂರು, ವಕೀಲ ಜಗದೀಶ್ ಜೈಲಿನಿಂದ ಶೀಘ್ರದಲ್ಲೇ ಬಿಡುಗಡೆ