ಚಾಕಲೇಟ್ ಕವರ್​ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ನಾಲ್ವರು ಅರೆಸ್ಟ್!

ಬಂಧಿತರು ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಬೇಕಾದವರಿಂದ ಮೊದಲೇ ಆನ್​ಲೈನ್​ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು.

ಚಾಕಲೇಟ್ ಕವರ್​ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ನಾಲ್ವರು ಅರೆಸ್ಟ್!
ಡ್ರಗ್ಸ್​ ಮಾರುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ
Edited By:

Updated on: Jul 06, 2022 | 10:34 AM

ದೇವನಹಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ (Students) ಡ್ರಗ್ಸ್ (Drugs) ಮಾರುತ್ತಿದ್ದ ಆರೋಪಿಗಳನ್ನ ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಆನ್​ಲೈನ್​ ಮೂಲಕ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆನ್​ಲೈನ್​ನಲ್ಲೇ ವಿದೇಶದಿಂದ ಡ್ರಗ್ಸ್ ಖರೀದಿಸುತ್ತಿದ್ದರು. ಆರೋಪಿಗಳಾದ ಮೊಹಮ್ಮದ್ ಹರ್ಸಲಾಂ, ಮೊಹಮ್ಮದ್ ನದೀಂ, ಸಚಿಂದರ್ನ್, ಮೋಸಿನ್ ಅರೆಸ್ಟ್ ಆಗಿದ್ದಾರೆ. ಪೊಲೀಸರು ಬಂಧಿತರಿಂದ 8 ಗ್ರಾಂ ಎಂಡಿಎಂಎ ಮಾತ್ರೆ, ನಾಲ್ಕು ಮೊಬೈಲ್ಗಳು ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 6 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

ಬಂಧಿತರು ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಬೇಕಾದವರಿಂದ ಮೊದಲೇ ಆನ್​ಲೈನ್​ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಹಣ ಬಂದ ಬಳಿಕ ನಂತರ ರಸ್ತೆ ಬದಿಯಲ್ಲಿ ಡ್ರಗ್ಸ್ ಖದೀಮರು ಹಾಕುತ್ತಿದ್ದರು. ಚಾಕಲೇಟ್ ಪ್ಯಾಕೆಟ್​ನಲ್ಲಿ ಹಾಕಿ ಹಣ ನೀಡಿದವರಿಗೆ ವಾಟ್ಸಾಪ್​ನಲ್ಲಿ ಪೊಟೋ ಮತ್ತು ಲೊಕೇಷನ್ ಕಳಿಸುತ್ತಿದ್ದರು.

ಇದನ್ನೂ ಓದಿ: ನೂಪುರ್ ಹತ್ಯೆಗೈದವರಿಗೆ ಬಹುಮಾನ ಘೋಷಿಸಿದ್ದ ಅಜ್ಮೇರ್ ಧಾರ್ಮಿಕ ಮುಖಂಡನ ಬಂಧನ

ಇದನ್ನೂ ಓದಿ
International Kissing Day 2022: ಇಂದು ವಿಶ್ವ ಚುಂಬನ ದಿನ; ಮುದ್ದಿಸಿ, ಮುದ್ದು ಮಾಡಿಸಿಕೊಳ್ಳಿ, ಸುಖವಾಗಿರಿ
Chandrashekhar Guruji Murder: ಗುರೂಜಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದ ಹಂತಕ ಮಹಾಂತೇಶ್ ಪತ್ನಿ ವನಜಾಕ್ಷಿ
Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ
Amavasya: ಅಮಾವಾಸ್ಯೆ ದಿನ ಚಂದ್ರ ಮತ್ತು ಸೂರ್ಯ ಒಂದೇ ವೇಳೆಯಲ್ಲಿ ಉದಯಿಸುತ್ತಾರೆ, ಹೀಗಾಗಿ ಈ ದಿನ ಅನಾಹುತಗಳು ಹೆಚ್ಚು

ಹಲವು ದಿನಗಳಿಂದ ಇದೇ ರೀತಿ ಮಾಡಿ ಆರೋಪಿಗಳು ಹಣಗಳಿಸುತ್ತಿದ್ದಾರೆ. ಕೆಆರ್ ಪುರಂ, ಆವಲಹಳ್ಳಿ ಮತ್ತು ಹೊಸಕೋಟೆ ಸುತ್ತಮುತ್ತಲಿನ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳೇ ಇವರ ಟಾರ್ಗೆಟ್. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಡ್ರಗ್ಸ್ ಮತ್ತು ಡ್ರಗ್ಸ್ ಕಳಿಸುತ್ತಿದ್ದ ವಿದೇಶಿ ಪ್ರಜೆಯ ಬಂಧನಕ್ಕೆ ಶೋಧ ನಡೆಯುತ್ತಿದೆ.

ಎಣ್ಣೆ ಕಳ್ಳರ ಬಂಧನ:
ದಾವಣಗೆರೆ: ಮದ್ಯಪಾನ ಕದಿಯುತ್ತಿದ್ದ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.35 ಲಕ್ಷ ರೂ. ಹಾಗೂ‌ ಏಳು ಲಕ್ಷ ಬೆಲೆ ಬಾಳುವ ಬುಲೆರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಹರಿಹರ ಹಾಗೂ ದಾವಣಗೆರೆ ‌ನಗರದ ವೈನ್ ಶಾಪ್​ಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಈಗಾಗಲೇ ಐದು ವೈನ್ ಶಾಪ್​ಗಳಲ್ಲಿ ಕಳ್ಳತನ ಎಸಗಿದ್ದಾರೆ.

Published On - 10:15 am, Wed, 6 July 22