ಬೆಂಗಳೂರು: ಹೊಸ ವರ್ಷಾಚರಣೆ ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣು

ಬೆಂಗಳೂರು ಹೊರವಲಯದಲ್ಲಿ ಹೊಸವರ್ಷಾಚರಣೆ ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗದಂತೆ ಕಣ್ಗಾವಲಿಡಲಾಗಿದ್ದು, ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಲಿದ್ದಾರೆ

ಬೆಂಗಳೂರು: ಹೊಸ ವರ್ಷಾಚರಣೆ ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣು
ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್​
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 23, 2022 | 8:11 PM

ಬೆಂಗಳೂರು: ಚೀನಾದಲ್ಲೇ ಹುಟ್ಟಿ ಜಗತ್ತನ್ನೇ ಆಕ್ರಮಿಸಿದ್ದ ಕ್ರೂರಿ ಕೊರೊನಾ (Coronavirus) ಮತ್ತೆ ಚೀನಾದಿಂದಲೇ ಆರ್ಭಟ ಆರಂಭಿಸಿದೆ. ರೂಪಾಂತರಿ ಕೊರೊನಾ ಭಾರತದಲ್ಲೂ ದಾಂಗುಡಿ ಇಡುತ್ತಾ ಭಾರತದತ್ತ ದಂಡೆತ್ತಿ ಬರ್ತಿದೆ. ಇದರ ಮಧ್ಯೆ ಕ್ರಿಸ್​ಮಸ್ ಹಾಗೂ ಹೊಸ ವರ್ಷ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅಲರ್ಟ್ ಆಗಿದೆ. ಅದರಲ್ಲೂ ಬೆಂಗಳೂರು ಹೊರವಲಯದಲ್ಲಿ ಹೊಸವರ್ಷಾಚರಣೆ (New Year Celebration) ಮೇಲೆ ಪೊಲೀಸ್​ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಇದನ್ನೂ ಓದಿ: Covid19 Guidelines: ಕರ್ನಾಟಕದಲ್ಲಿ ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ

ಹೊಸ ವರ್ಷಾಚರಣೆ ನೆಪದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಹೊರಹೊಲಯದಲ್ಲಿರುವ ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಈ ವರ್ಷ ಇವುಗಳಿಗೆ ಬ್ರೇಕ್​ ಹಾಕಲು ಪೊಲೀಸ್​ ಇಲಾಖೆ ಮುಂದಾಗಿದ್ದು, ಹೊಸ ವರ್ಷ ಆಚರಣೆ ಪಾರ್ಟ್​ ಆಯೋಜಕರಿಗೆ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದೆ.

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು(ಡಿಸೆಂಬರ್ 23) ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್​ ಮಾಧ್ಯಮಗಳ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬೆಂಗಳೂರು ಹೊರವಲಯದಲ್ಲಿ ಹೊಸವರ್ಷಾಚರಣೆ ಮೇಲೆ ನಿಗಾ ವಹಿಸುತ್ತೇವೆ. ಪ್ರತ್ಯೇಕವಾಗಿ ಪಾರ್ಟಿ ಆಯೋಜನೆ ಮಾಡುವ ಸ್ಥಳ ಪರಿಶೀಲಿಸುತ್ತೇವೆ. ಪಾರ್ಟಿ ಆಯೋಜಕರು, ಭಾಗಿಯಾಗುವವರ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.

ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆಯಾಗದಂತೆ ಕಣ್ಗಾವಲಿಡಲಾಗಿದ್ದು, ಯಾವುದೇ ಮಾದಕ ವಸ್ತು ಸರಬರಾಜು ಆಗದಂತೆ ನಿಗಾ ವಹಿಸಿದ್ದೇವವೆ. ಅಲ್ಲದೇ ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಬಿಎಂಟಿಸಿ, ಕೆಎಸ್ಆರ್​​ಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಬಿದ್ದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ