ದೇವನಹಳ್ಳಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ CD ಬಹಿರಂಗ ಕೇಸ್ಗೆ ಸಂಬಂಧಿಸಿ ಎಸ್‌ಐಟಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದೆ ಎಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ರೀತಿ ವಿಷಯಗಳಲ್ಲಿ ಪೊಲೀಸರ ತನಿಖೆಗೆ ಸಹಕರಿಸಬೇಕು. ಇದು ಎಲ್ಲರ ಕರ್ತವ್ಯ ಎಂದು ಹೇಳಿದ್ರು.
ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕು ಯಾರನ್ನು ಬಿಡಬೇಕು ಅದು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಸರ್ಕಾರ ಕೊಟ್ಟಿದೆ. ಗೃಹ ಮಂತ್ರಿಗಳ ಜತೆಯು ಚರ್ಚೆ ಮಾಡಿದ್ದೇನೆ, ಈ ತರಹದ ವಿಷಯಗಳಿಗೆ ಪೊಲೀಸರಿಗೆ ತನಿಖೆಗೆ ಸಹಕಾರ ಕೊಡೋದು ಎಲ್ಲರ ಕರ್ತವ್ಯ. ಸರ್ಕಾರ ಈ ತನಿಖೆಗೆ ಎಸ್ಐಟಿಗೆ ಫುಲ್ ಸ್ವಾತಂತ್ರ್ಯ ನೀಡಿದೆ ಅದರಲ್ಲಿ ಗೊಂದಲ ಬೇಡ. ಆದ್ರೆ ಈ ಪ್ರಕರಣಕ್ಕೆ ಸಂಬಂಧಿಸಿದವರು ಬಂದು ದೂರು ನೀಡುವವರೆಗೆ ಯಾರನ್ನ ಬಂಧಿಸಲು ಆಗುತ್ತೆ? ಪ್ರಕರಣದಲ್ಲಿ ಸಂತ್ರಸ್ಥೆ ಬಂದು ದೂರು ನೀಡುವವರೆಗೆ ಯಾರನ್ನೂ ಬಂಧಿಸಲು ಆಗುವುದಿಲ್ಲ. ಇದರಲ್ಲಿ ಡಿ.ಕೆ.ಶಿವಕುಮಾರ್ ಹೆಸರೂ ತಳುಕು ಹಾಕಿಕೊಂಡಿದೆ. ಆದ್ರೆ ಎಸ್‌ಐಟಿ ಯಾರನ್ನೂ ಬಂಧಿಸಿಲ್ಲ, ವಿಚಾರಣೆ ಮಾಡುತ್ತಿದೆ. ತನಿಖೆಗೂ ಮೊದಲೇ ಬಂಧಿಸಲು ಒತ್ತಾಯಿಸುವುದು ಸರಿಯಲ್ಲ. ಯುವತಿ ದೂರು ನೀಡಿದ್ರೆ ಎಲ್ಲವೂ ಸರಿಯಾಗಿ ತನಿಖೆಯಾಗುತ್ತೆ ಎಂದು ಕೆಐಎಬಿಯಲ್ಲಿ ಪ್ರಹ್ಲಾದ್ ಜೋಶಿ ತಿಳಿಸಿದ್ರು.
ಇನ್ನು ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ದಾಳಿ ನಡೆದಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿಯವರು ಯಾರೇ ಆಗಲಿ ಹಲ್ಲೆ ಮಾಡಲು ಮುಂದಾಗುವುದು ಸರಿಯಲ್ಲ. ಡಿಕೆಶಿಯಾಗಲಿ, ಇನ್ಯಾರ ಮೇಲಾದ್ರೂ ಆಗಲಿ ಈ ರೀತಿಯಾಗಿ ಮಾಡೋದು ಬಿಜೆಪಿ ಹಾಗೂ ಸರ್ಕಾರ ಒಪ್ಪೋದಿಲ್ಲ. ನಿನ್ನೆ ಈ ಘಟನೆ ನಡೆದಿರೋ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಎಲ್ಲರಿಗೂ ವಿನಂತಿ ಮಾಡುತ್ತೇನೆ ಬಿಜೆಪಿ ಕಾರ್ಯಕರ್ತರಾಗಲಿ, ಕಾಂಗ್ರೆಸ್ ಕಾರ್ಯಕರ್ತರಾಗಲಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಈ ರೀತಿ ಮಾಡಬಾರದು. ಸರಿಯಾದ ರೀತಿಯಲ್ಲಿ ತನಿಖೆಗೆ ಸಹಕಾರ ಕೊಟ್ಟು ತಪ್ಪಿತಸ್ಥರು ಯಾರೇ ಇರಲಿ, ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ರು.
ಇದನ್ನೂ ಓದಿ: ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿದ ಸಚಿವ ಮುರುಗೇಶ್ ನಿರಾಣಿ: ಮಹತ್ವದ ವಿಚಾರ ಚರ್ಚೆ