ವರದಕ್ಷಿಣೆ ಕಾಟ, ಗರ್ಭಪಾತ ಮಾಡಿಸಿಕೊಳ್ಳಲು ಕಿರುಕುಳ ಆರೋಪ: ಗರ್ಭಿಣಿ ನೇಣಿಗೆ ಶರಣು
ನೆಲಮಂಗಲ: ಸಮಾಜ ಎಷ್ಟೆ ಬದಲಾವಣೆ ಆಗುತ್ತಿದೆ ಅಂದ್ರು ಈ ವರದಕ್ಷಿಣೆ ಅನ್ನೋ ಸಾಮಾಜಿಕ ಪಿಡುಗು ಮಾತ್ರ ಇಂದಿಗೂ ನಿಂತಿಲ್ಲ, ವರದಕ್ಷಿಣೆ ಕಿರುಕುಳದೊಂದಿಗೆ ಭ್ರೂಣ ಹತ್ಯೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಭ್ರೂಣ ಹತ್ಯೆ ಕಿರುಕುಳಕ್ಕೆ ಎರಡೂವರೆ ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಈ ಫೋಟೋದಲ್ಲಿ ಸುಂದರ ಮೊಗದ ಚೆಲುವೆಯಂತೆ ಕಾಣುತ್ತಿರುವ ಈಕೆಯ ಹೆಸರು ರಮ್ಯ. ಬೆಂಗಳೂರಿನ ಜಿಂದಾಲ್ ನಗರದ ನಿವಾಸಿ 23 ವರ್ಷದ ರಮ್ಯ ಕಳೆದ […]
ನೆಲಮಂಗಲ: ಸಮಾಜ ಎಷ್ಟೆ ಬದಲಾವಣೆ ಆಗುತ್ತಿದೆ ಅಂದ್ರು ಈ ವರದಕ್ಷಿಣೆ ಅನ್ನೋ ಸಾಮಾಜಿಕ ಪಿಡುಗು ಮಾತ್ರ ಇಂದಿಗೂ ನಿಂತಿಲ್ಲ, ವರದಕ್ಷಿಣೆ ಕಿರುಕುಳದೊಂದಿಗೆ ಭ್ರೂಣ ಹತ್ಯೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಇಂತಹ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಭ್ರೂಣ ಹತ್ಯೆ ಕಿರುಕುಳಕ್ಕೆ ಎರಡೂವರೆ ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.
ಈ ಫೋಟೋದಲ್ಲಿ ಸುಂದರ ಮೊಗದ ಚೆಲುವೆಯಂತೆ ಕಾಣುತ್ತಿರುವ ಈಕೆಯ ಹೆಸರು ರಮ್ಯ. ಬೆಂಗಳೂರಿನ ಜಿಂದಾಲ್ ನಗರದ ನಿವಾಸಿ 23 ವರ್ಷದ ರಮ್ಯ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಚಿಕ್ಕಬಿದುರಕಲ್ಲು ನಿವಾಸಿ ಅರುಣ್‌ನೊಂದಿಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತೆ ಅಂದವಾದ ಹೆಣ್ಣು ಮಗುವೂ ಆಯ್ತು. ಆದ್ರೆ ದಿನ ಕಳೆದಂತೆ ಸುಖಸಂಸಾರದಲ್ಲಿ ವರದಕ್ಷಿಣೆ ಎನ್ನೋ ಭೂತ ಕಾಡಲು ಶುರುವಾಗುತ್ತೆ. ಮದುವೆಗೆ ಮೊದಲು ಜಿಂದಾಲ್‌ನಲ್ಲಿ ಸೈಟ್ ಕೊಡುವುದಾಗಿ ರಮ್ಯ ಪೋಷಕರು ತಿಳಿಸಿದ್ದರಂತೆ. ಆದ್ರೆ ಈಗ ರಮ್ಯ ತಂಗಿಗೆ ಮದುವೆ ನಿಶ್ಚಯವಾಗಿದ್ದು ಸೈಟ್ ಮಾರಲು ಹೊರಟಿದ್ದರು ಎನ್ನಲಾಗಿದೆ. ಹಾಗಾಗಿ ದಿನದಿಂದ ದಿನಕ್ಕೆ ಕಿರುಕುಳ ಹೆಚ್ಚಾಗಿ ರಮ್ಯ ಬಹಳಷ್ಟು ನೊಂದು ತನ್ನ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು ಎಂದು ಮೃತಳ ಸಂಬಂಧಿ ವರಲಕ್ಷ್ಮಿ ಅನ್ನೋರು ಅರೋಪ ಮಾಡಿದ್ದಾರೆ.
Published On - 2:24 pm, Thu, 11 June 20