ಖಾಸಗಿ ಫೋಟೋ ವೈರಲ್​​: ಆರೋಪಿಗಳ ಬಂಧನವಾಗಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪಂಚಾಯತಿ ಸದಸ್ಯೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 10, 2023 | 6:37 PM

ಖಾಸಗಿ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿಲ್ಲವೆಂದು ಆರೋಪಿಸಿ ಪಂಚಾಯತಿ ಸದಸ್ಯೆ ಒಬ್ಬರು ಆತ್ಮಹತ್ಯಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರುನಲ್ಲಿ ನಡೆದಿದೆ.ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಸೆ. 7 ರಂದು ದೂರು ದಾಖಲಾಗಿ 3 ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ ಎಂದು ಆರೋಪಿಸಲಾಗಿದೆ.

ಖಾಸಗಿ ಫೋಟೋ ವೈರಲ್​​: ಆರೋಪಿಗಳ ಬಂಧನವಾಗಿಲ್ಲವೆಂದು ಆತ್ಮಹತ್ಯೆಗೆ ಯತ್ನಿಸಿದ ಪಂಚಾಯತಿ ಸದಸ್ಯೆ
ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಪುಷ್ಪರನ್ನು ರವಾನೆ
Follow us on

ನೆಲಮಂಗಲ, ಸೆಪ್ಟೆಂಬರ್​ 10: ಖಾಸಗಿ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿಲ್ಲವೆಂದು ಆರೋಪಿಸಿ ಪಂಚಾಯತಿ ಸದಸ್ಯೆ (panchayat member) ಒಬ್ಬರು ಆತ್ಮಹತ್ಯಗೆ ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರುನಲ್ಲಿ ನಡೆದಿದೆ. ಪುಪ್ಪ, ಹೆಚ್ಚಿನ ಪ್ರಮಾಣದ ಥೈರಾಯ್ಡ್ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಪಂಚಾಯತಿ ಸದಸ್ಯೆ. ನೆಲಮಂಗಲ ತಾಲೂಕಿನ ಬೇಗೂರು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪುಷ್ಪರನ್ನ ಸದಸ್ಯರಾದ ಮುನಿರಾಜು ಮತ್ತು ವಸಂತ್ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸದಸ್ಯೆ ದೂರಿನ ಆಧಾರದ ಮೇಲೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಮುನಿರಾಜು, ವಸಂತ ಮೇಲೆ ಎಫ್​ಐಆರ್​​ ದಾಖಲಾಗಿತ್ತು. ದೂರನ್ನ ಹಿಂಪಡೆಯುವ ಸಲುವಾಗಿ ಮತ್ತೊಬ್ಬ ಸದಸ್ಯ ಮಂಜುನಾಥ್​​ನ ಜೊತೆ ವಿಡಿಯೋ ಕಾಲ್​ನಲ್ಲಿ ಸದಸ್ಯೆ ನಗ್ನವಾಗಿದ್ದ ಫೋಟೋ ಇಟ್ಟುಕೊಂಡು ಮುನಿರಾಜು, ವಸಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಅಪರಾಧ ಪ್ರಕರಣಗಳ ಇತ್ಯರ್ಥಕ್ಕಾಗಿ ಹಣ ಬೇಕೆಂದು ಕಿಡ್ನ್ಯಾಪ್ ಮಾಡಿದ ಮೂವರು ಆರೋಪಿಗಳು ಅರೆಸ್ಟ್

ಪುಷ್ಪ ಅವರದ್ದು ಎನ್ನಲಾದ ಒಂದಷ್ಟು ಫೋಟೋಗಳು ಇಗಾಗಲೇ ವೈರಲ್ ಆಗಿವೆ. ಈ ಸಂಬಂಧ ಸದಸ್ಯರಾದ ಮುನಿರಾಜು, ವಸಂತ, ಮಂಜುನಾಥ್ ವಿರುದ್ಧ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಸೆ. 7 ರಂದು ದೂರು ದಾಖಲಾಗಿ 3 ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ. ಅಸ್ವಸ್ಥ ಸದಸ್ಯೆ ಪುಪ್ಪಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತ ಆರೋಪಿಗಳ ಪತ್ನಿಯರು ಮನೆಯಲ್ಲಿ ಗಂಡಂದಿರಿಲ್ಲವೆಂದು ಕಣ್ಣೀರು ಹಾಕಿದ್ದಾರೆ.

ಹೈವೇಯಲ್ಲಿ ಕಾರ್​ಗೆ ಆಕಸ್ಮಿಕ ಬೆಂಕಿ

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಧಗ ಧಗನೆ ಹೊತ್ತು ಉರಿದಿರುವಂತಹ ಘಟನೆ ಶಿವಮೊಗ್ಗ ತಾಲೂಕಿನ ಹೊರವಲಯದಲ್ಲಿರುವ ಮುದ್ದಿನಕೊಪ್ಪದ ಬಳಿ ನಡೆದಿದೆ. ಭದ್ರಾವತಿಯ ಸಿದ್ದಾಪುರದ ಕಿರಣ್ ಕುಮಾರ್ ಎಂಬುವರ ಕೆಎ 25 ಎಂಎ 1169 ಕ್ರಮ ಸಂಖ್ಯೆಯ ಡಸ್ಟರ್ ಕಾರಿನಲ್ಲಿ ಮುಂದಿನ ಎಂಜಿನ್​ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ರಸ್ತೆ ಬದಿಗೆ ನಿಲ್ಲಿಸಿದ ಕಿರಣ್ ಕುಮಾರ್ ಮುಂದಿನ ಬ್ಯಾನೆಟ್ ತೆಗೆದಿದ್ದಾರೆ. ಬ್ಯಾನೆಟ್ತೆಗೆಯುತ್ತಿದ್ದಂತೆ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿಕೊಂಡಿದೆ. ಕಿರಣ್ ಕುಮಾರ್ ಭದ್ರಾವತಿಯಿಂದ ಆಯನೂರು ಕಡೆಗೆ ಹೊರಟಿದ್ದರು. ಶಿವಮೊಗ್ಗದ ಮುದ್ದಿನಕೊಪ್ಪದ ಬಳಿ ಹೊಗೆ ಕಾಣಿಸಿಕೊಂಡು ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನ ನಂದಿಸಿದೆ. ಬೆಂಕಿಗೆ ಕಾರು ಸುಟ್ಟು ಕರಕಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:25 pm, Sun, 10 September 23