ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಅಜ್ಜಿ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನಗಳ ಹುತ್ತ
ಬೆಳಗ್ಗೆ ಅಜ್ಜಿ ಹೂ ಮಾರಲು ಹೋಗಿ ಬರುವಷ್ಟರಲ್ಲೇ ಮೊಮ್ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಾವುನ ಸುತ್ತ ಹಲವು ಅನುಮಾನಗಳು ಮೂಡಿವೆ.
ಬೆಂಗಳೂರು,(ಆಗಸ್ಟ್ 22): ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ (Student) ಶವ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಶಂಕೆಗಳು ವ್ಯಕ್ತವಾಗಿವೆ. ಬೆಂಗಳೂರು ಗ್ರಾಮಾಂತರ (Bangalore Rural)ಜಿಲ್ಲೆಯ ಹೊಸಕೋಟೆ (Hoskote)ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ದ್ವಿತೀಯ ಪಿಯುಸಿ(PUC) ವಿದ್ಯಾರ್ಥಿನಿ ಹಿಮಾ (18) ಶವ ನೇಣು ಬಿಗಿದ ಸ್ಥಿತಿ ಪತ್ತೆಯಾಗಿದ್ದು, ಈ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮೂಲತಃ ಹಿಮಾ ಮುಳವಾಗಿಲು ತಾಲೂಕಿನ ನಂಗಲಿಯವಳಾಗಿದ್ದು, ಹೊಸಕೋಟೆಯಲ್ಲಿರುವ ಅಜ್ಜಿಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ಅಜ್ಜಿ ಬೆಳಿಗ್ಗೆ ಹೂ ಮಾರಟಕ್ಕೆ ಹೋದಾಗ ಈ ಘಟನೆ ನಡೆದಿದೆ ಎಂದು ಎಂದು ತಿಳಿದುಬಂದಿದೆ.
ಅಜ್ಜಿ ಫೋನ್ ಮಾಡಿದಾಗ ಹಿಮಾ ಸ್ವೀಕರಿಸಲಿಲ್ಲ ಎಂದು, ಪಕ್ಕದ ಮನೆಯವರನ್ನು ಕಳುಹಿಸಿ ನೋಡಿದಾಗ ಹಿಮಾ ಸಾವನ್ನಪ್ಪಿರುವ ಘಟನೆ ತಿಳಿದು ಬಂದಿದೆ. ಮಗಳ ಸಾವಿಗೆ ತಂದೆಯ ಆಕ್ರಂದನ ಮುಗಿಲುಮುಟ್ಟಿದ್ದು, ಈ ವಿದ್ಯಾರ್ಥಿನಿ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೈಲು ಸೇರಿದ ತಂದೆ, ಮಗ; ಮನನೊಂದು ತಾಯಿ ಆತ್ಮಹತ್ಯೆ, ಜೈಲಿನಲ್ಲೇ ಪತಿಗೆ ಹೃದಯಾಘಾತ
ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರೈತ
ಬೀದರ್, (ಆಗಸ್ಟ್ 22): ಸಾಲಕ್ಕೆ ಅಂಜಿ ರೈತ ( Farmer) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ( Bidar) ನಲ್ಲಿ ನಡೆದಿದೆ. ಬಸವಕಲ್ಯಾಣ ತಾಲೂಕಿನ ಧನ್ನೂರ್ ಗ್ರಾಮದ ವೈಜೀನಾಥ್ ಪರೀಟ್ (74) ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಎಸ್ ಬಿ ಐ ಬ್ಯಾಂಕ್ನಲ್ಲಿ 2ಲಕ್ಷ ಸಾಲ ತೆಗೆದುಕೊಂಡಿದ್ದರು. ಸಕಾಲಕ್ಕೆ ಮಳೆಯಾಗದೇ ಇದ್ದರಿಂದ ಮನನೊಂದಿದ್ದ ವೈಜೀನಾಥ್, ಸ್ವಂತ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಡಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:37 pm, Tue, 22 August 23