ದೊಡ್ಡಬಳ್ಳಾಪುರ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಬಂಡಾಯ; ಮುಂದಿನ ದಾರಿ ನೋಡುತ್ತೇವೆ ಎಂದ ಬಿ.ಸಿ.ಆನಂದ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 06, 2023 | 3:00 PM

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಘಟಕದಲ್ಲಿ ಬಂಡಾಯ ಭುಗಿಲೆದ್ದಿದ್ದು, ಟಿಕೆಟ್​ ಕೋರಂ ಸಭೆಗೆ ಕರೆದು ತೇಜೋವಧೆ ಮಾಡಿದ್ದಾರೆ ಎಂದು ಕೆಎಂಎಫ್​​​ ನಿರ್ದೇಶಕ, ಕಾಂಗ್ರೆಸ್ ನಾಯಕ ಬಿ.ಸಿ.ಆನಂದ್ ಆರೋಪ ಮಾಡಿದ್ದಾರೆ.

ದೊಡ್ಡಬಳ್ಳಾಪುರ ಕಾಂಗ್ರೆಸ್ ಘಟಕದಲ್ಲಿ ಭುಗಿಲೆದ್ದ ಬಂಡಾಯ; ಮುಂದಿನ ದಾರಿ ನೋಡುತ್ತೇವೆ ಎಂದ ಬಿ.ಸಿ.ಆನಂದ್
ಬಿ.ಸಿ ಆನಂದ್​
Follow us on

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಘಟಕದಲ್ಲಿ ಬಿ.ಸಿ ಆನಂದ್ ನೇತೃತ್ವದಲ್ಲಿ ಬಂಡಾಯ ಭುಗಿಲೆದ್ದಿದೆ. ಕ್ಷೇತ್ರದಲ್ಲಿ ಯಾರ ಮೇಲೆ ಒಲವಿದೆ ಅನ್ನೂದಕ್ಕಿಂತ ನನ್ನ ಬಳಿ ಹಣ ಎಷ್ಟಿದೆ ಎಂದು ‘ಕೈ’ ನಾಯಕರು ನೋಡುತ್ತಿದ್ದಾರೆ ಹೊರತು ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಶಾಸಕರು ಗೌರವ ನೀಡುತ್ತಿಲ್ಲ. ಅಭ್ಯರ್ಥಿ ಬದಲಾವಣೆ ಬಗ್ಗೆ ಕೆಪಿಪಿಸಿ ಅಧ್ಯಕ್ಷರು ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಮುಂದಿನ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್​​ ನಾಯಕ ಬಿ.ಸಿ.ಆನಂದ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಈಗಲೇ 150 ಸ್ಥಾನ ಗೆದ್ದವರ ರೀತಿ ಆಡ್ತಿದ್ದಾರೆ. ಕೈ ನಾಯಕರಿಗೆ ದುಡ್ಡು ಎಷ್ಟಿದೆ ಎನ್ನುವುದು ಮುಖ್ಯವಾಗಿದೆ. ನಾನು ಹಣವನ್ನೆ ನಂಬಿಕೊಂಡಿದ್ದರೆ ಇಲ್ಲಿಯವರೆಗೂ ಬರಲು ಆಗುತ್ತಿರಲಿಲ್ಲ. ಕಾಂಗ್ರೆಸ್ ಸೇರಿದಂತೆ ಮೂರು ಪಕ್ಷಗಳಲ್ಲೂ ಇದೇ ಪರಿಸ್ಥಿತಿ ಇದೆ. ಬೇರೆ ಪಕ್ಷದವರು ನಮ್ಮ ಪಕ್ಷಕ್ಕೆ ಬರ್ತಿರಾ ಎಂದು ಕೇಳುತ್ತಿದ್ದಾರೆ.
ಡಿ.ಕೆ ಶಿವಕುಮಾರ್​ ಅಂತಿಮ ತೀರ್ಮಾನ ನೋಡಿಕೊಂಡು ಹೇಳುತ್ತೇನೆ ಎಂದಿದ್ದೇನೆ.

ಇದನ್ನೂ ಓದಿ:Siddaramaiah: ರಾಜ್ಯ ರಾಜಕಾರಣದಲ್ಲಿ ಡಾಗ್​ಫೈಟ್, ನಾನು ನಾಯಿಮರಿ ಎಂದು ಹೇಳಿಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ

ಈ ತಿಂಗಳ 20 ರೊಳಗಾಗಿ ಕೆಪಿಸಿಸಿ ಅಭ್ಯರ್ಥಿ ಬದಲಾವಣೆ ತೀರ್ಮಾನ ತೆಗೆದುಕೊಳ್ಳಲಿಲ್ಲ ಎಂದರೆ ಜ.20 ರ ನಂತರ ನಮ್ಮ ತೀರ್ಮಾನ ಹೇಳುತ್ತೇವೆ. ಎನ್ನುವ ಮೂಲಕ ಕೆಪಿಸಿಸಿ ಹಾಗೂ ಕೈ ನಾಯಕರಿಗೆ ದೊಡ್ಡಬಳ್ಳಾಪುರ ಕ್ಷೇತ್ರದ ಕೈ ಮುಖಂಡರು ಡೆಡ್ ಲೈನ್​ ನೀಡಿದ್ದಾರೆ. ಸ್ವಾಭಿಮಾನಿ ಕಾಂಗ್ರೆಸ್ ಮುಖಂಡರ ಶಕ್ತಿ ಇಲ್ಲದೆ ಯಾವುದೇ ಅಭ್ಯರ್ಥಿ ಇಲ್ಲಿ ಗೆಲ್ಲುವುದಿಲ್ಲ. ದುಡ್ಡನ್ನ ಮೀರಿಸಿದ್ದು ವಿಶ್ವಾಸ, ನಂಬಿಕೆ ಮತ್ತು ಸ್ವಾಭಿಮಾನ ಎಂದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ