ಪ್ರೆಸಿಡೆನ್ಸಿ ಕಾಲೇಜ್​ನಲ್ಲಿ ಯುವತಿ ಕೊಲೆ ಪ್ರಕರಣ: ಘಟನೆಯಾಗಿ ಮೂರು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ ಆಡಳಿತ ಮಂಡಳಿ

ಯಲಹಂಕ ಬಳಿಯ ಪ್ರೆಸಿಡೆನ್ಸಿ ಕಾಲೇಜು‌ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಘಟನೆಯಾಗಿ ಮೂರು ದಿನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.

ಪ್ರೆಸಿಡೆನ್ಸಿ ಕಾಲೇಜ್​ನಲ್ಲಿ ಯುವತಿ ಕೊಲೆ ಪ್ರಕರಣ: ಘಟನೆಯಾಗಿ ಮೂರು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ ಆಡಳಿತ ಮಂಡಳಿ
ಪವನ್‌ ಕಲ್ಯಾಣ, ಲಯಸ್ಮಿತಾ
Follow us
| Updated By: ಆಯೇಷಾ ಬಾನು

Updated on: Jan 05, 2023 | 3:47 PM

ದೇವನಹಳ್ಳಿ: ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿ ಇರುವ ಪ್ರೆಸಿಡೆನ್ಸಿ ಕಾಲೇಜ್​ನಲ್ಲಿ ಸೋಮವಾರ(ಜ.02) ನೂರಾರು ವಿದ್ಯಾರ್ಥಿಗಳ ಎದುರೇ ಬರ್ಬರ ಕೃತ್ಯ ನಡೆದಿತ್ತು. ಪ್ರೇಯಸಿ ಲಯಸ್ಮಿತಳನ್ನ ಹುಡುಕಿಕೊಂಡು ಪ್ರೆಸಿಡೆನ್ಸಿ ಕಾಲೇಜ್‌ಗೆ ಬಂದಿದ್ದ ಪವನ್‌ ಕಲ್ಯಾಣ ಎಂಬ ಪಾಗಲ್‌ ಪ್ರೇಮಿ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಈ ಘಟನೆ ಸಂಬಂಧ ಇದೇ ಮೊದಲ ಬಾರಿಗೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.

ಯಲಹಂಕ ಬಳಿಯ ಪ್ರೆಸಿಡೆನ್ಸಿ ಕಾಲೇಜು‌ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಂತೆ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಘಟನೆಯಾಗಿ ಮೂರು ದಿನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ಕಾಲೇಜಿನ ನಿರ್ದೇಶಕರಾದ ಮನ್ಮರ್ ಮಾತನಾಡಿದ್ದು, ನಮ್ಮ ವಿಶ್ವವಿದ್ಯಾಲಯದಲ್ಲಿ ಕೊಲೆಯಾಗಿದ್ದು ತುಂಬಾ ಆಘಾತವಾಗಿದೆ. ಅದು ನಮ್ಮ ಮಗು ಎನ್ನುವಷ್ಟು ನೋವನ್ನ ತರುತ್ತಿದೆ, ಶಾಕ್ ನಲ್ಲೇ ನಾವು ಇದ್ದೇವೆ. ಭದ್ರತಾ ವ್ಯವಸ್ಥೆಯಲ್ಲಿ 79 ಜನ ಸೆಕ್ಯೂರಿಟಿ ಗಾರ್ಡ್ ಗಳಿದ್ದಾರೆ, ನಾಲ್ಕೈದು ಸುಪರ್ವೈಸರ್ ಗಳಿದ್ದಾರೆ. ಬ್ರಿಗೆಡಿಯರ್ ಇದ್ದಾರೆ ಹೀಗೆಲ್ಲಾ ಇರಬೇಕಾದರೆ ಒಳಗೆ ನುಗ್ಗಿ ಕೊಲೆ ಮಾಡಿರೋದು ಶಾಕ್ ಆಗಿದೆ. ಆ ಮಗು ನಮ್ಮ ಮಗು. ಆ ನೋವನ್ನು ನಮಗೂ ತಡೆಯೊಕೆ ಆಗ್ತಿಲ್ಲ. ಅವರ ತಂದೆ ತಾಯಿಗೆ ಘಟನೆಯಾಗುತ್ತಿದ್ದಂತೆ ತಕ್ಷಣ ತಿಳಿಸಿದ್ವಿ ಯುವತಿಯನ್ನ ಆಸ್ಪತ್ರೆಗೆ ಸೇರಿಸಿದ್ವಿ. ಹೇಗೆ ಈ ಘಟನೆ ಆಯ್ತು ಅಂತಾ ಗೊತ್ತಾಗ್ತಿಲ್ಲ. ಕಾನೂನು ಇದರ ಬಗ್ಗೆ ತನಿಖೆ ಮಾಡುತ್ತೆ ಎಂದು ತಿಳಿಸಿದ್ದಾರೆ.

ಕೊಲೆ ನಂತರ ಎಚ್ಚೆತ್ತ ವಿವಿ ಆಡಳಿತ ಮಂಡಳಿ

ಒಂದು ಕೊಲೆಯ ಬಳಿಕ ಎಚ್ಚೆತ್ತ ಆಡಳಿತ ಮಂಡಳಿ, ವಿವಿಗೆ ಆಗಮಿಸುವ ವಿದ್ಯಾರ್ಥಿಗಳ ಐಡಿ ಕಾರ್ಡ್ ಪರಿಶೀಲನೆ ಕಡ್ಡಾಯ ಮಾಡಿದೆ. ವಿವಿ ಒಳಭಾಗಕ್ಕೆ ಎಂಟ್ರಿಯಾಗುವ ಮುನ್ನವೆ ಐಡಿ ಕಾರ್ಡ್ ಚೆಕಿಂಗ್ ಮಾಡಲು ಸೆಕ್ಯೂರಿಟಿ ಗಾರ್ಡ್ ಗಳಿಗೆ ಆದೇಶಿಸಿದೆ. ಐಡಿ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೊರ ಭಾಗದ ಗೇಟ್ ಬಳಿ ಐಡಿ ಕಾರ್ಡ್ ಪರಿಶೀಲನೆಗೆ ಹತ್ತಾರು ಜನ‌ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸೆಕ್ಯೂರಿಟಿ ಸಿಬ್ಬಂದಿಯನ್ನ ಹೆಚ್ಚಳ ಮಾಡಿ ಪರಿಶೀಲನೆಗೆ ಮುಂದಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್

ಘಟನೆ ಹಿನ್ನೆಲೆ

ಪ್ರೆಸಿಡೆನ್ಸಿ ಕಾಲೇಜ್‌ನಲ್ಲಿ ಓದುತ್ತಿದ್ದ ಲಯಸ್ಮಿತ ಹಾಗೂ ನೃಪತುಂಗ ವಿವಿಯಲ್ಲಿ ಓದುತ್ತಿದ್ದ ಪವನ್‌ ಕಲ್ಯಾಣ ಸಂಬಂಧಿಕರು. ಇಬ್ಬರ ನಡುವೆ ಲವ್‌ ಆಗಿದ್ದು, ಆಕೆಯನ್ನ ಮನಸಾರೆ ಪ್ರೀತಿಸುತ್ತಿದ್ದ ಪವನ್‌, ಆಕೆಯ ಹೆಸರನ್ನೇ ಎದೆ ಮೇಲೆ ಹಚ್ಚೆಹಾಕಿಸಿಕೊಂಡಿದ್ದ. ಅಷ್ಟೇ ಅಲ್ಲ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಡಿಪಿಗೆ ಆಕೆಯ ಫೋಟೊವನ್ನೇ ಹಾಕಿದ್ದ. ಇದನ್ನ ನೋಡಿ ಕೆರಳಿದ್ದ ಲಯಸ್ಮಿತ, ಅವನ ನಂಬರ್‌ ಬ್ಲಾಕ್‌ ಮಾಡಿದ್ಲು. ಇದ್ರಿಂದ ಕೋಪಗೊಂಡ ಪವನ್‌ ಆಕೆಯ ಪಾಠ ಕಲಿಸಬೇಕು ಎಂದು ಆಕೆಯ ಕಾಲೇಜಿಗೆ ನುಗ್ಗಿದ್ದ.

ಯಾವಾಗ ತನ್ನ ನಂಬರ್‌ ಬ್ಲಾಕ್‌ ಆಯ್ತೋ ಆಕೆಯನ್ನ ಹುಡುಕಿಕೊಂಡು ಪ್ರೆಸಿಡೆನ್ಸಿ ಕಾಲೇಜ್‌ಗೆ ಬಂದಿದ್ದ. ಆಕೆಗಾಗಿ ಕಾಲೇಜ್‌ ಮುಂದೆಯೇ 40 ನಿಮಿಷ ಕಾದವನು, ಒಳಗೆ ನುಸುಳಲು ಯತ್ನಿಸಿದ್ದ. ವಿಷ್ಯ ಅಂದ್ರೆ ಇಲ್ಲಿ ಐಡಿ ಕಾರ್ಡ್‌ ಇದ್ದವರನ್ನ ಮಾತ್ರ ಒಳಗೆ ಬಿಡಲಾಗುತ್ತೆ . ಹೀಗಾಗಿ ಅದೇ ಕಾಲೇಜ್‌ನ ವಿದ್ಯಾರ್ಥಿಯೊಬ್ಬನ ಐಡಿ ಕಾರ್ಡ್‌ ಪಡೆದು ಒಳಗೆ ಎಂಟ್ರಿಯಾಗಿದ್ದ. ಆಕೆಯ ಕ್ಲಾಸ್‌ ರೂಮ್‌ ಬಳಿಯೇ ಹೋದವನು, ಆಕೆ ಜತೆ 15 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ್ದಾನೆ. ಆದ್ರೆ ಆಕೆ ಮಾತ್ರ ಈತನ ಮಾತಿಗೆ ಬಗ್ಗಿಲ್ಲ. ಬಳಿಕ ಪವನ್‌ ಆಕೆಯ ಕತ್ತಿಗೆ ಚಾಕು ಹಾಕಿ ಎದೆಯನ್ನೂ ಇರಿದು ಕೊಂದು ಹಾಕಿದ್ದ. ಬಳಿಕ ತಾನೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಪವನ್‌ ಚೇತರಿಸಿಕೊಂಡಿದ್ದು ಆತನ ಮೇಲೆ ಕೊಲೆ ಕೇಸ್‌ ದಾಖಲಾಗಿದೆ.

ಲಕ್ಷಾಂತರ ರೂಪಾಯಿ ಫೀಸ್‌ ವಸೂಲಿ ಮಾಡಿ ಆಡ್ಮಿಷನ್‌ ಮಾಡಿಕೊಂಡಿರೋ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ವಾ ಅಂತಾ ಲಯಸ್ಮಿತ ಪೋಷಕರು ಪ್ರಶ್ನಿಸುತ್ತಿದ್ದಾರೆ. ಪಾಗಲ್‌ ಪವನ್‌, ಕಾಲೇಜ್‌ನ ಲ್ಯಾಬ್‌ನಿಂದಲೇ ಚಾಕು ಪಡೆದಿರೋ ಆರೋಪ ಇದ್ದು, ಈ ಮರ್ಡರ್‌ಗೆ ಕಾಲೇಜ್‌ನ ನಿರ್ಲಕ್ಷ್ಯವೇ ಕಾರಣ ಅಂತಾ ಯುವತಿ ಹೆತ್ತಮ್ಮ ಆರೋಪಿಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ