ನೆಲಮಂಗಲ (Nelamangala): ಆ ಗ್ಯಾಂಗ್ ದಾರಿ ಹೋಕರ ಸೋಗಿನಲ್ಲಿ ಸಾಗುತ್ತಾ, ಜೊತೆಗೆ ಅಲ್ಲಲ್ಲಿ ಭಿಕ್ಷೆ ಬೇಡುತ್ತ ಕೆಲ ಏರಿಯಾಗಳಲ್ಲಿ ಅಲೆದಾಡುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನ ನೋಡಿ ಮನೆಗೆ ನುಗ್ಗಿ ಹಣ ಎಗರಿಸುತ್ತಿದ್ದ ವೇಳೆ (dacoit) ತಗ್ಲಾಕಿಕೊಂಡು ಗ್ಯಾಂಗ್‌ನ ಓರ್ವ ಮಹಿಳೆ ಧರ್ಮದೇಟು ತಿಂದು ಪೊಲೀಸರ ಅತಿಥಿಯಾಗಿದ್ದಾಳೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದ್ರು ಎಲ್ಲಿ ಅಂತಿರಾ ? ಆ ಕುರಿತಾದ ವರದಿ ಇಲ್ಲಿದೆ. ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಚಿಕ್ಕ ಬಿದರಕಲ್ಲು ಗ್ರಾಮದಲ್ಲಿ. ಚಿಕ್ಕ ಬಿದರಕಲ್ಲು ಗ್ರಾಮದ ಕವಿತಾ (woman) ಎನ್ನುವವರು ನಿನ್ನೆ ಮಧ್ಯಾಹ್ನ ಪಕ್ಕದ ಮನೆಗೆ ಹೋಗಿದ್ದಾಗ ಆರು ಜನರ ಗ್ಯಾಂಗ್ ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಇದ್ದ ಪರ್ಸ್‌ನಲ್ಲಿ 1 ಲಕ್ಷದ 90 ಸಾವಿರ ಹಣವಿತ್ತು. ಅದರಲ್ಲಿ 50 ಸಾವಿರ ಹಣಕ್ಕೆ ಕೈಹಾಕಿ ಪರಾರಿಯಾಗ್ತಾ ಇದ್ರು, ಈ ವೇಳೆ ಆರು ಜನರಲ್ಲಿ ಓರ್ವ ಮಹಿಳೆ ಸಿಕ್ಕಿಬಿದ್ದಿದ್ದು ಅವಳಿಗೆ ಧರ್ಮದೇಟು ಕೊಟ್ಟಿದ್ದಾರೆ (localites).
ಇನ್ನು ಈ ಆರು ಜನರ ಗ್ಯಾಂಗ್ ಮಹಾರಾಷ್ಟ್ರದ ಪುಣೆ ಮೂಲದವರು ಎನ್ನಲಾಗಿದ್ದು, ಸಿಕ್ಕಿಬಿದ್ದ ಮಹಿಳೆಯನ್ನ ಸೋನು ಎಂದು ಗುರುತಿಸಲಾಗಿದೆ. ಆರು ಜನರ ಗ್ಯಾಂಗ್ ಮಕ್ಕಳನ್ನ ಕಂಕಳಿನಲ್ಲಿ ಎತ್ತಿಕೊಂಡು ಏರಿಯಾಗಳಲ್ಲಿ ತಿರುಗಾಡುತ್ತಾ, ಮನೆಯಲ್ಲಿ ಯಾರೂ ಇರದ ವೇಳೆ ದಾಳಿ ನಡೆಸಿ, ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಆರು ಜನರಲ್ಲಿ ಇನ್ನುಳಿದವರು ಪರಾರಿಯಾಗಿ ಓಡಿಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ
Published On - 5:50 pm, Wed, 18 January 23