ನೆಲಮಂಗಲ: ಬ್ರೇಕ್ ಫೇಲ್‌ ಆದ ಕಂಟೇನರ್ ನಿಂದ ಸರಣಿ ಅಪಘಾತ, ತಪ್ಪಿದ ಭಾರಿ ದುರಂತ

| Updated By: ವಿವೇಕ ಬಿರಾದಾರ

Updated on: Dec 03, 2022 | 5:09 PM

ಬೆಂಗಳೂರಿನ ನೆಲಮಂಗಲ ಸಮೀಪ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿ 48ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತ ತಪ್ಪಿದೆ.

ನೆಲಮಂಗಲ: ಬ್ರೇಕ್ ಫೇಲ್‌ ಆದ ಕಂಟೇನರ್ ನಿಂದ ಸರಣಿ ಅಪಘಾತ, ತಪ್ಪಿದ ಭಾರಿ ದುರಂತ
ನೆಲಮಂಗಲದಲ್ಲಿ ಸರಣಿ ಅಪಘಾತ
Follow us on

ಬೆಂಗಳೂರು: ನೆಲಮಂಗಲ ಸಮೀಪ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ (National Highway 48) ಸರಣಿ ಅಪಘಾತ (Serial accident) ಸಂಭವಿಸಿದೆ. ತಮೀಳುನಾಡು ಪಾಸಿಂಗ್​ನ ಸರಕು ತುಂಬಿದ್ದ ಕಂಟೇನರ್ ಬೆಂಗಳೂರಿಂದ ತುಮಕೂರು ಕಡೆ ತೆರಳುತ್ತಿತ್ತು. ಕಂಟೇನರ್​ ನೆಲಮಂಗಲದ ಟೋಲ್ ಸಮೀಪಿಸುತ್ತಿದ್ದಂತೆ ಬ್ರೇಕ್​ ಫೇಲ್​ ಆಗಿದೆ. ಇದರಿಂದ 3 ಕಂಟೇನರ್, 1ಐಶ್ಚರ್ ವಾಹನ, 3 ಕಾರು, 2 ಬೈಕ್ ಹಾಗೂ ರಸ್ತೆ ಪಕ್ಕದಲ್ಲಿ ಸೌತೆಕಾಯಿ ಮಾರಾಟ ಮಾಡುತ್ತಿದ್ದ ತಳ್ಳುವ ಗಾಡಿಗೆ ಕಂಟೇನರ್​ ಗುದ್ದಿದೆ.

ಚಿಶ್ಚರ್ ವಾಹನಕ್ಕೆ ಕಂಟೇನರ್​ ಡಿಕ್ಕಿ ಹೊಡೆದ ಪರಿಣಾಮ ಕಟ್ಟಿಗೆ ತುಂಡು ತುಂಬಿಕೊಂಡು ಹೋಗುತ್ತಿದ್ದ ಐಶ್ಚರ್ ವಾಹನ ಪಲ್ಟಿಯಾಗಿದೆ. ಪಲ್ಟಿಯಾದ ಐಶ್ಚರ್ ವಾಹನ ಬೈಕ್ ಸವಾರನ ಮೇಲೆ ಬಿದ್ದು ಗಂಭೀರ ಗಾಯಗಳಾಗಿವೆ. ಬೈಕ್​ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಕಳೆದ ಅರ್ಧ ಗಂಟೆಯಿಂದ ಬೆಂಗಳೂರಿನಿಂದ ತುಮಕೂರು ಕಡೆಗಿನ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 48 ವಾಹನಗಳು ಜಖಂ

ಪುಣೆ: ಮಹಾರಾಷ್ಟ್ರದ ಪುಣೆ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಿಲೆ ಬ್ರಿಡ್ಜ್‌ ಬಳಿ ಸರಣಿ ಅಪಘಾತ ಸಂಭವಿಸಿದ್ದು, 48 ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಚಾಲಕ ಟ್ಯಾಂಕರ್​​ನ್ನು ಅಡ್ಡಾದಿಡ್ಡಿ ಚಾಲಾಯಿಸಿದ್ದಾನೆ. ಇದರಿಂದ ಟ್ಯಾಂಕರ್​ ಐಷಾರಾಮಿ ಕಾರುಗಳು ಸೇರಿ ಬರೋಬ್ಬರಿ 48 ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಟ್ಯಾಂಕರ್‌ ಬ್ರೇಕ್ ಫೈಲ್ ಆಗಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಅಪಘಾತದ ನಂತರ ತೈಲವು ರಸ್ತೆಯ ಮೇಲೆ ಚೆಲ್ಲಿದ ಪರಿಣಾಮ ಹೆಚ್ಚಿದ ಘರ್ಷಣೆಗಳಿಗೆ ಕಾರಣವಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆ ನಂತರ ಮುಂಬೈ ರಸ್ತೆಗಳಲ್ಲಿ 2 ಕಿ.ಮೀ. ಉದ್ದಕ್ಕೂ ಟ್ರಾಫಿಕ್ ಜಾಮ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Sat, 3 December 22