ನೀನು ನನಗೆ ಬೇಕು ಅಷ್ಟೇ, ನೆಲಮಂಗಲದ ಮಹಿಳಾ ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ

| Updated By: ವಿವೇಕ ಬಿರಾದಾರ

Updated on: Nov 15, 2023 | 12:38 PM

ನನ್ನ ಜೋತೆ ಸಹಕರಿಸದಿದ್ದರೆ ನಿನ್ನ ಪತಿಯನ್ನು ಕೊಲ್ಲುವೆ. ನನ್ನ ಜೋತೆ ಚೆನ್ನಾಗಿರು, ನಿನ್ನ ಪತಿಯನ್ನು ಕೊಲೆ ಮಾಡುವೆ ಎಂದು ನೆಲಮಂಗಲದ ಮಹಿಳಾ ಟೆಲಿಕಾಲರ್ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ನೀನು ನನಗೆ ಬೇಕು ಅಷ್ಟೇ, ನೆಲಮಂಗಲದ ಮಹಿಳಾ ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ
ನೆಲಮಂಗಲ ಪೊಲೀಸ್ ಠಾಣೆ
Follow us on

ನೆಲಮಂಗಲ ನ.15: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ ಮಹಿಳಾ ಟೆಲಿಕಾಲರ್​​ಗೆ​​ (Tele caller) ಲೈಂಗಿಕ ಕಿರುಕುಳ (Harassment) ನೀಡಿರುವ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಾಲೂಕಿನ ಹಿಂಡಸಗೇರೆ ಗ್ರಾಮದ ನಿವಾಸಿ ಶಿವರಾಮ್ ಲೈಂಗಿಕ ಕಿರುಕುಳ ನೀಡಿರುವ ಆರೋಪಿ. ಶಿವರಾಮ್​​ ಟೆಲಿಕಾಲರ್ ಜ್ಯೋತಿ ಅವರಿಗೆ “ನನ್ನ ಜೋತೆ ಸಹಕರಿಸದಿದ್ದರೆ ನಿನ್ನ ಪತಿಯನ್ನು ಕೊಲ್ಲುವೆ. ನನ್ನ ಜೋತೆ ಚೆನ್ನಾಗಿರು, ನಿನ್ನ ಪತಿಯನ್ನು ಕೊಲೆ ಮಾಡುವೆ. ನಿನ್ನ (ಜ್ಯೋತಿ) ಪತಿಯನ್ನು ಕೊಂದ ಮೇಲೆ ಸೂಸೈಡ್ ಮಾಡಿಕೊಳ್ಳಬೇಡ” ಎಂದು ಸಂದೇಶ ಕಳುಹಿಸಿದ್ದಾನೆ.

ಅಲ್ಲದೇ ಜ್ಯೋತಿ ಅವರ ಮನೆಗೆ ನುಗ್ಗಿ “ನೀನು ನನಗೆ ಬೇಕು ಅಷ್ಟೇ, ನಿನ್ನನ್ನು ನಾನು ಇಷ್ಟ ಪಡುತ್ತಿದ್ದೇನೆ. ನೀನು ಬರಬೇಕು ಎಂದು ಆರೋಪಿ ಶಿವರಾಮ್​ ದಾಂದಲೆ ಮಾಡಿದ್ದಾನೆ. ಇದೀಗ ಟೆಲಿಕಾಲರ್ ಜ್ಯೋತಿ ನೆಲಮಂಗಲ ಟೌನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್​ 354(ಎ),354(ಬಿ),354(ಸಿ),323,324, 448,504, 506 ಅಡಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ