ದೊಡ್ಡಬಳ್ಳಾಪುರದಲ್ಲಿ ತಂಜಾವೂರು ದೇವಸ್ಥಾನದ ಸೆಟ್: ಸಾವಿರಾರು ವೃದ್ಧ ಜೋಡಿಗಳ ಅದ್ದೂರಿ ಮದುವೆ! ಸಂಭ್ರಮಿಸಿದ ಮಕ್ಕಳು ಮೊಮ್ಮಕ್ಕಳು ಸಚಿವರು

ಮದುವೆ ಮನೆಯಲ್ಲಿ ನಡೆಯುವಂತೆ ಬಂದವರಿಗೆ ಬಾಳೆ ಎಲೆಯಲ್ಲಿ ಬಗೆಬಗೆಯ ಊಟ ಸಹ ಮಾಡಿಸಿದ್ದು, ವಿಶೇಷ ಸಿಹಿ ಊಟವನ್ನ ತಿಂದು ಹಿರಿಯರ ವಿವಾಹವನ್ನ ನೋಡುವ ಮೂಲಕ ಸಂಭ್ರಮಿಸಿದ್ರು. ಜತೆಗೆ ಕಾರ್ಯಕ್ರಮಕ್ಕೆ ಸಚಿವರಾದ ಆರ್. ಅಶೋಕ್ ಮತ್ತು ಅಶ್ವಥ್ ನಾರಾಯಣ್ ಸಹ ಆಗಮಿಸಿ ಹಿರಿಯರಿಗೆ ಶುಭ ಕೋರಿದ್ರು.

ದೊಡ್ಡಬಳ್ಳಾಪುರದಲ್ಲಿ ತಂಜಾವೂರು ದೇವಸ್ಥಾನದ ಸೆಟ್: ಸಾವಿರಾರು ವೃದ್ಧ ಜೋಡಿಗಳ ಅದ್ದೂರಿ ಮದುವೆ! ಸಂಭ್ರಮಿಸಿದ ಮಕ್ಕಳು ಮೊಮ್ಮಕ್ಕಳು ಸಚಿವರು
ದೊಡ್ಡಬಳ್ಳಾಪುರದಲ್ಲಿ ತಂಜಾವೂರು ದೇವಸ್ಥಾನದ ಸೆಟ್: ಸಾವಿರಾರು ವೃದ್ಧ ಜೋಡಿಗಳ ಅದ್ದೂರಿ ಮದುವೆ!
Edited By:

Updated on: Jan 10, 2023 | 10:48 AM

ಇಷ್ಟುದಿನ ಸಾಮೂಹಿಕವಾಗಿ ಮಕ್ಕಳು ಮೊಮ್ಮಕ್ಕಳ ಮದುವೆಯನ್ನ ಸಾರ್ವಜನಿಕವಾಗಿ ಮಾಡೋದನ್ನ ನಾವೆಲ್ಲ ನೋಡಿದ್ವಿ. ಆದ್ರೆ ಇಲ್ಲೊಂದು ಕಡೆ ಮಾತ್ರ ಇಂದು ಮಕ್ಕಳು ಮೊಮ್ಮಕ್ಕಳೆ ಮುಂದೆ ನಿಂತು ತಂದೆ ತಾಯಿ ಸೇರಿದಂತೆ ಅಜ್ಜ ಅಜ್ಜಿಗೆ ಸಾಮೂಹಿಕ 60ನೇ ವರ್ಷದ ವಿವಾಹವನ್ನ (Shashti Poorthi) ನೆರವೇರಿಸಿದ್ದು ಸಾವಿರಾರು ಜೋಡಿಗಳು ಇಳಿ ವಯಸ್ಸಿನಲ್ಲಿ ಮದುವೆ ಸಂಭ್ರಮವನ್ನ ಸಂಭ್ರಮಿಸಿದ್ರು. ದೇವಲೋಕವೆ ಧರೆಗಿಳಿದಂತೆ ಸೆಟ್ ನಿರ್ಮಾಣವಾಗಿರುವು ತಂಜಾವೂರಿನ ಶಿವ ಪಾರ್ವತಿ ದೇವಾಲಯದ ಮಂಟಪ, ಸಾಲು ಸಾಲಾಗಿ ಕುಳಿತು ಹೂಮಳೆಯ ಜೊತೆ 60 ನೇ ವರ್ಷದ ಮದುವೆ ಸಂಭ್ರಮವನ್ನಾಚರಿಸುತ್ತಿರುವ ಸಾವಿರಾರು ಸಂಖ್ಯೆಯ ವೃದ್ದ ಜೋಡಿ ಮತ್ತು ಸಚಿವರು, ಮತ್ತೊಂದೆಡೆ ಹಿರಿಯರ ಮದುವೆ ಷಷ್ಠಿಪೂರ್ತಿ ಜೊತೆಗೆ ಭರ್ಜರಿ ಬಾಳೆಎಲೆ ಊಟ ತಿಂದು ಸಂತಸದಲ್ಲಿರುವ ಜನರು. ಅಂದಹಾಗೆ ಇಂತಹ ಅಪರೂಪದ ಸಾಮೂಹಿಕ ವೃದ್ಧ ಜೋಡಿಗಳ (Mass Marriage) ಮದುವೆ ಸಂಭ್ರಮ ಮತ್ತು ಷಷ್ಠಿಪೂರ್ತಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ (Doddaballapur).

ಹೌದು ದೊಡ್ಡಬಳ್ಳಾಫುರ ನಗರದ ಧೀರಜ್ ಮುನಿರಾಜು ಎಂಬುವವರ ನಗರದಲ್ಲಿ ಸಾವಿರಾರು ಜೋಡಿಗಳಿಗಾಗಿ ಷಷ್ಠಿಪೂರ್ವ ಕಾರ್ಯಕ್ರಮವನ್ನ ಇತ್ತೀಚೆಗೆ (ಜನವರಿ 8 ಭಾನುವಾರ) ಆಯೋಜನೆ ಮಾಡಿದ್ದರು. ಹೀಗಾಗಿ ಬೆಳಗಿನಿಂದಲೆ ಕಾರ್ಯಕ್ರಮದತ್ತ ತಾಲೂಕಿನ ವಿವಿಧ ಮೂಲೆಗಳಿಂದ ಸಾವಿರಾರು ಜನ ವೃದ್ದ ಜೋಡಿಗಳು ಆಗಮಿಸಿದ್ರು. ಜತೆಗೆ ಷಷ್ಠಿಪೂರ್ತಿ ಮಾಡಲು ತಮಿಳುನಾಡಿನ ತಂಜಾವೂರಿಗೆ ಹೋಗಲು ಆಗದ ಕಾರಣ ಇಲ್ಲೆ ತಂಜಾವೂರಿನ ಶಿವಪಾರ್ವತಿ ಸೆಟ್ ಅನ್ನ ಹಾಕಿಸಿ ಅದರಲ್ಲಿ ಷಷ್ಠಿಪೂರ್ತಿ ಕಾರ್ಯಕ್ರಮವನ್ನ ನಡೆಸಿದ್ರು. ಅಲ್ಲದೆ ಪೂಜೆ ಮಾಡಿದ ನಂತರ ಸಾಮೂಹಿಕವಾಗಿ ಪತ್ನಿಗೆ ಮಾಂಗಲ್ಯ ಧಾರಣೆಯನ್ನ ಮಾಡುವ ಮೂಲಕ 60 ನೇ ವರ್ಷದ ಮದುವೆಯನ್ನ ಸಾವಿರಾರು ಜನರ ಸಮ್ಮುಖದಲ್ಲಿ ಆಚರಿಸಿಕೊಂಡು ಖುಷಿಪಟ್ರು.

ಮನುಷ್ಯ 60 ನೇ ವರ್ಷದಲ್ಲಿ ಷಷ್ಠಿಪೂರ್ತಿ ಶಾಂತಿ ಮಾಡಿ ಪತ್ನಿಗೆ ಮಾಂಗಲ್ಯ ಧಾರಣೆ ಮಾಡಿದ್ರೆ ಗಂಡಾಂತರ ಕಳೆದು ಮತ್ತಷ್ಟು ಸುಖ ಸಮೃದ್ದಿ ಸಿಗುತ್ತೆ ಅನ್ನೂ ನಂಬಿಕೆ ಇದೆ. ಜತೆಗೆ ಈ ಷಷ್ಠಿಪೂರ್ತಿ ಶಾಂತಿ ಮಾಡಲು ಜನರು ತಂಜಾವೂರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಹೋಗಿ ಮಾಡಲು ಸಾಧ್ಯವಾಗದೆ ಹಾಗೆಯೇ ಉಳಿಯುತ್ತಾರೆ. ಹೀಗಾಗಿ ಇಂದು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೃದ್ದ ದಂಪತಿ ಮತ್ತು ಕುಟುಂಬಸ್ಥರು ವಿಶೇಷ ಅಪರೂಪದ ಮದುವೆಯನ್ನ ಕಂಡು ಸಂತಸಪಟ್ರು.

ಜತೆಗೆ ಕಾರ್ಯಕ್ರಮದಲ್ಲಿ ಮದುವೆ ಮನೆಯಲ್ಲಿ ನಡೆಯುವಂತೆ ಬಂದವರಿಗೆ ಬಾಳೆ ಎಲೆಯಲ್ಲಿ ಬಗೆಬಗೆಯ ಊಟ ಸಹ ಮಾಡಿಸಿದ್ದು, ವಿಶೇಷ ಸಿಹಿ ಊಟವನ್ನ ತಿಂದು ಹಿರಿಯರ ವಿವಾಹವನ್ನ ನೋಡುವ ಮೂಲಕ ಸಂಭ್ರಮಿಸಿದ್ರು. ಜತೆಗೆ ಕಾರ್ಯಕ್ರಮಕ್ಕೆ ಸಚಿವರಾದ ಆರ್. ಅಶೋಕ್ ಮತ್ತು ಅಶ್ವಥ್ ನಾರಾಯಣ್ ಸಹ ಆಗಮಿಸಿ ಹಿರಿಯರಿಗೆ ಶುಭ ಕೋರಿದ್ರು. ಈ ವಿಶೇಷ ಕಾರ್ಯಕ್ರಮಕ್ಕೆ ಘಾಟಿ ಸುಬ್ರಮಣ್ಯದಿಂದ 50 ಕ್ಕೂ ಅಧಿಕ ಪಂಡಿತರು ಆಗಮಿಸಿ ಷಷ್ಠಿಪೂರ್ತಿ ಶಾಂತಿಯನ್ನ ಮಾಡಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಒಟ್ಟಾರೆ ವೃದ್ದ ವಯಸ್ಸಿನಲ್ಲಿ ಮಕ್ಕಳೆ ನೋಡದೆ ದೂರ ತಳ್ಳುವ ಈ ಕಾಲದಲ್ಲಿ ವೃದ್ದ ದಂಪತಿಗಳಿಗೆ ವಿಶೇಷ ವಿವಾಹ ಕಾರ್ಯಕ್ರಮವನ್ನ ಆಯೋಜಿಸುವ ಮೂಲಕ ಮಾದರಿಯಾದರು.

ವರದಿ: ನವೀನ್, ಟಿವಿ 9, ದೇವನಹಳ್ಳಿ