ದೇವನಹಳ್ಳಿ: 69 ಲಕ್ಷ ಬೆಲೆ ಬಾಳುವ ಚಪ್ಪಲಿ ಹಾಕಿಕೊಂಡು ಬಂದು ಕೆಜಿ ಕೆಜಿ ಬಂಗಾರದ ಜೊತೆ ಏರ್​​ಪೋರ್ಟ್​​​ನಲ್ಲಿ ಲಾಕ್ ಆದ ಸಿಂಪಲ್ ಪ್ರಯಾಣಿಕ!

| Updated By: ಸಾಧು ಶ್ರೀನಾಥ್​

Updated on: Mar 16, 2023 | 5:41 AM

Gold Smuggling: ವಿದೇಶಗಳಿಂದ ಚಿನ್ನ ಸಾಗಿಸಲು ಸ್ಮಗ್ಲರ್ಸ್ಗಳ ಖತರ್ನಾಕ್ ಪ್ಲಾನ್, ಚಪ್ಪಲಿಯೊಳಗಿದ್ದ 69 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ ಅಧಿಕಾರಿಗಳು, ಏರ್​​ಪೋರ್ಟ್​​​ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸ್ಮಗ್ಲಿಂಗ್ ದಂದೆ

ದೇವನಹಳ್ಳಿ: 69 ಲಕ್ಷ ಬೆಲೆ ಬಾಳುವ ಚಪ್ಪಲಿ ಹಾಕಿಕೊಂಡು ಬಂದು ಕೆಜಿ ಕೆಜಿ ಬಂಗಾರದ ಜೊತೆ ಏರ್​​ಪೋರ್ಟ್​​​ನಲ್ಲಿ ಲಾಕ್ ಆದ ಸಿಂಪಲ್ ಪ್ರಯಾಣಿಕ!
ಕೆಜಿ ಕೆಜಿ ಬಂಗಾರದ ಜೊತೆ ಏರ್​​ಪೋರ್ಟ್​​​ನಲ್ಲಿ ಲಾಕ್ ಆದ ಸಿಂಪಲ್ ಪ್ರಯಾಣಿಕ!
Follow us on

ಏರ್​​ಪೋರ್ಟ್ ಅಂದ್ರೇನೆ ಅದು ಹೈ ಫೈ ದುನಿಯಾ ಹೈ ಫೈ ಜನರ ಒಡಾಟವೆ ಹೆಚ್ಚಾಗಿರುವ ಏರ್​​ಪೋರ್ಟ್ ಗಳಲ್ಲಿ (Devanahalli Airport) ಕ್ಲಾಸ್ಟ್ಲಿ ಬಟ್ಟೆ ಶೂ ಧರಿಸಿ ಓಡಾಡುವುದು ಸಹಜ. ಆದ್ರೆ ಇಲ್ಲೊಬ್ಬ ಪ್ರಯಾಣಿಕ (Passenger) ಇದೇ ರೀತಿ ನೋಡೋಕ್ಕೆ ಸಿಂಪಲ್ ಆಗ್ ಇದ್ದರೂ 69 ಲಕ್ಷ ಬೆಲೆ ಬಾಳುವ ಚಪ್ಪಲಿ ಜೊತೆ ಬಂದು ಇದೀಗ ಕೆಜಿ ಕೆಜಿ ಬಂಗಾರದ ಜೊತೆ ಲಾಕ್ ಆಗಿದ್ದಾನೆ. ಮೇಲೆ ಕೆಳಗಡೆ ಆ ಕಡೆ ಈ ಕಡೆ ಅಂತೆಲ್ಲ ಸುತ್ತಾಮುತ್ತ ಎಷ್ಟೇ ನೋಡಿದರೂ ಇದು ಹಾಫ್ ರೇಟ್ ಚೀಪ್ ರೇಟ್ ಚಪ್ಪಲಿ (Slippers) ತರಾನೆ ಕಾಣ್ತಿದೆ. ದೇವಸ್ಥಾನ ಅಂಗಡಿ ಮುಂಗಟ್ಟುಗಳ ಮುಂದೆ ಬಿಟ್ಟು ಹೋದ್ರು ಯಾರೂಬ್ಬರೂ ಈ ಚಪ್ಪಲಿಯತ್ತ ತಿರುಗಿಯೂ ನೋಡಲ್ಲ ಅನ್ನೂ ರೀತಿ ಈ ಚಪ್ಪಲಿ ಇದೆ. ಆದ್ರೆ ಇದೇ ಚಪ್ಪಲಿಯ ಒಳ ಭಾಗವನ್ನ ಬಗೆದು ನೋಡಿದಾಗಲೆ ಹೊರಗೆ ಬಂದಿದ್ದು ಕೇಜಿ ಕೇಜಿ ಚಿನ್ನ (Gold Smuggling).

ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ಬಿಸ್ಕತ್ ರೂಪದಲ್ಲಿ ಚಪ್ಪಲಿಯಲ್ಲಿ ಚಿನ್ನ

ಅಂದಹಾಗೆ ಈ ರೀತಿ ಚಪ್ಪಲಿಯಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಬಂದು ಅಧಿಕಾರಿಗಳ ಕೈಗೆ ಕಾಲ್ ಆಗಿರುವುದು ನಮ್ಮದೆ ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ. ಹೌದು ಬ್ಯಾಂಕಾಕ್ ನಿಂದ ಪ್ರಯಾಣಿಕನೋರ್ವ 6ಇ 076 ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದು ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ ಲ್ಯಾಂಡ್ ಆಗಿದ್ದ.

ಹೀಗಾಗಿ ಅಂತಾರಾಷ್ಟ್ರಿಯ ಪ್ರಯಾಣಿಕನಾಗಿದ್ದ ಕಾರಣ ಅಧಿಕಾರಿಗಳು ಸಹಜವಾಗಿಯೆ ಕಸ್ಟಮ್ಸ್ ಇಮಿಗ್ರೇಷನ್ ನಲ್ಲಿ ತಪಾಸಣೆಗೊಳಪಡಿಸಿದಾಗ ಪ್ರಯಾಣಿಕ ಅನುಮಾನಾಸ್ವದ ರೀತಿಯಲ್ಲಿ ವರ್ತಿಸಿದ್ದು ಆತನನ್ನ ಪಕಕ್ಕೆ ಕರೆದುಕೊಂಡು ಹೋದ ಅಧಿಕಾರಿಗಳು ಸೂಕ್ಷ್ಮವಾಗಿ ಬಟ್ಟೆ ಲಗೇಜ್ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆದ್ರೆ ಈ ವೇಳೆ ಎಲ್ಲೂ ಏನೂ ಸಿಗದಿದ್ದಾಗ ಸಾಮಾನ್ಯ ಚಪ್ಪಲಿಗಳನ್ನ ತೆಗೆಸಿ ಪರಿಶೀಲನೆ ನಡೆಸಿದ್ದು ಈ ವೇಳೆ ಲಕ್ಷ ಲಕ್ಷ ಮೌಲ್ಯದ ಚಿನ್ನ ಚಪ್ಪಲಿಯ ಒಳಭಾಗದಲ್ಲಿರುವುದು ಕಂಡು ಬಂದಿದೆ.

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಚಪ್ಪಲಿಯನ್ನ ತೆಗೆಸಿ ಕಿತ್ತು ನೋಡಿದಾಗ ಚಪ್ಪಲಿಯ ಒಳ ಭಾಗದಲ್ಲಿ ಬಿಸ್ಕತ್ ರೂಪದಲ್ಲಿ ನಾಲ್ಕು ಚಿನ್ನದ ಬಿಸ್ಕತ್ ಗಳು ಸಿಕ್ಕಿವೆ. ಅವೆಲ್ಲವನ್ನೂ ವಶಕ್ಕೆ ಪಡೆದು ತೂಕ ಮಾಡಿದಾಗ ಚಪ್ಪಲಿಯಲ್ಲಿ 1 ಕೆಜಿ 205 ಗ್ರಾಂ ತೂಕದ ಚಿನ್ನ ಸಿಕ್ಕಿದ್ದು ಇದರ ಮಾರುಕಟ್ಟೆ ಮೌಲ್ಯ 69 ಲಕ್ಷ ಅನ್ನೂದು ಗೊತ್ತಾಗಿದೆ.

ಇನ್ನೂ ಇದೇ ರೀತಿ ಕಳೆದ ಜನವರಿಯಲ್ಲಿ ಚಿನ್ನದ ಜೊತೆಗೆ ಕೆಲವರು ಅಪರೂಪದ ಅನಕೊಂಡ ಹಾವು, ಅಮೇಜಾನ್ ಗಿಳಿ ಸೇರಿದಂತೆ ಹಲವು ಪ್ರಾಣಿಗಳನ್ನ ಲಗೇಜ್ ನಲ್ಲಿ ಸ್ಮಗ್ಲಿಂಗ್ ಮಾಡುವ ವೇಳೆ ಸಿಕ್ಕಿ ಬಿದ್ದಿದ್ರು. ಹೀಗಾಗಿ ಇತ್ತೀಚೆಗೆ ಏರ್ಪೋಟ್ ನಲ್ಲಿ ಚಿನ್ನದ ಸ್ಮಗ್ಲಿಂಗ್ ಜೊತೆಗೆ ಹಣ ಮಾಡಲು ಇತರೆ ಚಟುವಟಿಕೆಗಳಿಗೆ ಕೆಲ ಪ್ರಯಾಣಿಕರು ಮುಂದಾಗ್ತಿದ್ದು ಅಂತಾರಾಷ್ಟ್ರಿಯ ಪ್ರಯಾಣಿಕರ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಒಟ್ಟಾರೆ ಹೈ ಫೈ ಜನರು ಓಡಾಡುವ ಪ್ರದೇಶ ದಲ್ಲಿ ಸುಲಭವಾಗಿ ಸ್ಮಗ್ಲಿಂಗ್ ಮಾಡಿ ಲಕ್ಷ ಲಕ್ಷ ಹಣ ಮಾಡಬಹುದು ಅಂತ ಸ್ಮಗ್ಲರ್​​ಗಳು ಚಾಪೆ ಕೆಳಗೆ ನುಗ್ಗಿ ಸ್ಮಗ್ಲಿಂಗ್ ಮಾಡಲು ಮುಂದಾದ್ರೆ ಇತ್ತ ಅಧಿಕಾರಿಗಳು ರಂಗೋಲಿ ಕೆಳಗಡೆ ನುಗ್ಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ನವೀನ್ ಟಿವಿ 9 ದೇವನಹಳ್ಳಿ