ನೆಲಮಂಗಲದ ನರಸೀಪುರ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಕಾಟ- ಜಲ್ಲಿ, ಧೂಳಿನಿಂದ ಬೇಸತ್ತಿದ್ದಾರೆ ಗ್ರಾಮಸ್ಥರು, ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಕಿಡಿ
Nelamangala Stone Crushing: ನರಸೀಪುರ ಆಸುಪಾಸಿನಲ್ಲಿ 10ಕ್ಕೂ ಹೆಚ್ಚು ಕ್ರಷರ್‌ಗಳಿದ್ದು ಪ್ರತಿನಿತ್ಯ ನೂರಕ್ಕೂ ಹೆಚ್ಚು ಲಾರಿಗಳು ಜಲ್ಲಿ, ಎಂ ಸ್ಯಾಂಡ್ ತುಂಬಿಕೊಂಡು ಓಡಾಡುತ್ತವೆ. ಲಾರಿಗಳು ವೇಗ ದಿಂದ ಸಂಚರಿಸುವುದರಿಂದ ಜಲ್ಲಿಯನ್ನು ರಸ್ತೆಗೆ ಚೆಲ್ಲುತ್ತವೆ. ಇದರಿಂದ ಇತ್ತೀಚೆಗೆ ಅನೇಕ ಅಪಘಾತಗಳೂ ಸಂಭವಿವೆ.
ಆ ಗ್ರಾಮದ ಕೂಗಳತೆ ಅಂತರದಲ್ಲಿ ಕಲ್ಲು ಗಣಿಗಾರಿಕೆ (Stone crushing) ನಡೆಯುತ್ತಿದೆ. ಅಲ್ಲಿಂದ ಪ್ರತಿನಿತ್ಯ ಜಲ್ಲಿ ಹೊತ್ತು ಬರುವ ಲಾರಿಗಳ ಆರ್ಭಟದಿಂದ (Jelly Crusher) ಜನರು ರೋಸಿ ಹೋಗಿದ್ದಾರೆ. ಒಂದು ಕಡೆ ಲಾರಿಗಳಿಂದ ಉತ್ಪತ್ತಿಯಾಗುವ ಧೂಳು ಮಣ್ಣಿನಿಂದ ಬೇಸತ್ತಿದ್ದರೆ, ಇನ್ನೊಂದೆಡೆ ರಸ್ತೆಯಲ್ಲಿ ಬೀಳುವ ಜಲ್ಲಿ ಕಲ್ಲಿನಿಂದ ನಡೆಯುವ ಅಪಘಾತದಿಂದ ಬೆದರಿ ರಸ್ತೆಗಿಳಿದು ಲಾರಿಗಳನ್ನ (Lorry) ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯುದ್ದಕ್ಕೂ ಚೆಲ್ಲಿರುವ ಜಲ್ಲಿ ಕಲ್ಲು, ರಸ್ತೆ ತುಂಬೆಲ್ಲ ಜಲ್ಲಿ ಪುಡಿಯ ಧೂಳು, ದೊಡ್ಡ ದೊಡ್ಡ ಟಿಪ್ಪರ್ ಲಾರಿಗಳನ್ನ ತಡೆದು ನಿಲ್ಲಿಸಿರುವ ಗ್ರಾಮಸ್ಥರು – ಈ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ತಾಲೂಕಿನ ನರಸೀಪುರ ಗ್ರಾಮದಲ್ಲಿ. ಹೌದು ಜಲ್ಲಿ ಲಾರಿಗಳಿಂದ ಬೇಸತ್ತ ನರಸೀಪುರ (narasipura village) ಹಾಗೂ ಸುತ್ತಮುತ್ತಲ ಗ್ರಾಮಸ್ಥರು 50ಕ್ಕೂ ಹೆಚ್ಚು ಲಾರಿಗಳನ್ನ ತಡೆದು ಆಕ್ರೋಶ ಹೊರಹಾಕಿದ್ದಾರೆ.
ನರಸೀಪುರ ಆಸುಪಾಸಿನಲ್ಲಿ 10ಕ್ಕೂ ಹೆಚ್ಚು ಕ್ರಷರ್‌ಗಳಿದ್ದು ಪ್ರತಿನಿತ್ಯ ನೂರಕ್ಕೂ ಹೆಚ್ಚು ಲಾರಿಗಳು ಜಲ್ಲಿ ಎಂ ಸ್ಯಾಂಡ್ ತುಂಬಿಕೊಂಡು ಓಡಾಡುತ್ತವೆ. ಲಾರಿಗಳ ವೇಗದ ಚಲನೆಯಿಂದ ಜಲ್ಲಿಯನ್ನು ರಸ್ತೆಗೆ ಚೆಲ್ಲುತ್ತದೆ, ಅಲ್ಲದೆ ಅದರಿಂದ ಇತ್ತೀಚೆಗೆ ಅನೇಕ ಅಪಘಾತಗಳೂ ಸಂಭವಿದೆಯಂತೆ. ಈಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಗಣಿಸಬೇಕು ಅಂತಾರೆ.
ಇನ್ನು ತುಮಕೂರು ಜಿಲ್ಲೆಯ ಮಧುಗಿರಿ, ಪಾವಗಡ, ದೇವರಾಯನದುರ್ಗ, ಗೊರವನಹಳ್ಳಿ ಪುಣ್ಯ ಕ್ಷೇತ್ರಗಳಿದ್ದು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಓಡಾಡುತ್ತಾರೆ. ಪ್ರತಿನಿತ್ಯ ನೂರಾರು ಟಿಪ್ಪರ್ ಲಾರಿ ಸಂಚಾರದಿಂದಾಗಿ ಆ್ಯಕ್ಸಿಡೆಂಟ್‌ಗಳ ಸಂಖ್ಯೆ ಹೆಚ್ಚಾಗಿದ್ದು ದಾರಿಹೋಕರು ಜೀವ ಭಯದಲ್ಲೆ ಓಡಾಡಬೇಕಾದ ಪರಸ್ಥಿತಿ ಇದೆ. ಜಲ್ಲಿ, ಎಂ ಸ್ಯಾಂಡ್ ಓವರ್ ಲೋಡ್ ತುಂಬಿಕೊಂಡು ಬರುವ ಲಾರಿಗಳಿಂದ ಇಷ್ಟೆಲ್ಲ ಸಮಸ್ಯೆಯಾಗುತ್ತಿದೆ.
ಇನ್ನೊಂದೆಡೆ ಗ್ರಾಮದ 2-3 ಕಿಲೋಮೀಟರ್ ಅಂತರದಲ್ಲಿ ದೊಡ್ಡಬಳ್ಳಾಪುರ ರಸ್ತೆ ಅಗಲೀಕರಣಕ್ಕೆ ಎಸ್‌ಎಸ್‌ಸಿ ಕಂಪನಿಯವರು ಬಂಡೆ ಸ್ಪೋಟ ಮಾಡುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ರೈತರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಾಕ್ಷಷ್ಟು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಇದಕ್ಕೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಸದ್ಯ ಗ್ರಾಮಸ್ಥರು ಓವರ್ ಲೋಡ್ ತುಂಬಿದ ಜಲ್ಲಿ ಹಾಗೂ ಎಂ ಸ್ಯಾಂಡ್ ಟಿಪ್ಪರ್‌ಗಳಿಂದ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರಿದರೆ ರಸ್ತೆ ತಡೆ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದು, ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುತ್ತಾರಾ? ಕಾದು ನೋಡಬೇಕಿದೆ.
ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ