ನೆಲಮಂಗಲ, ಸೆ.4: ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿನ ಮೆಟಲ್ ವಿಷಯವಾಗಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ವೇಳೆ ಒಬ್ಬನಿಗೆ ಚಾಕು ಇರಿದ ಘಟನೆ ಬೆಂಗಳೂರಿನ (Bengaluru) ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಆಗಸ್ಟ್ 28 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿ ಮೆಟಲ್ ವಿಷಯವಾಗಿ ಗಲಾಟೆ ನಡೆದಿದೆ. ನಂತರ ಕಾಲೇಜಿನಿಂದ ಹೊರಬರುತ್ತಿದ್ದಂತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ವಿದ್ಯಾರ್ಥಿ ಪಾಸಿ ಮೊಹಮ್ಮದ್ (21) ಎಂಬಾತನಿಗೆ ವಿದ್ಯಾರ್ಥಿ ಬಾಲಕೃಷ್ಣಾರೆಡ್ಡಿ (21) ಸೇರಿದಂತೆ ಇಬ್ಬರು ಚಾಕುವಿನಿಂದ ಇರಿದಿದ್ದಾರೆ.
ಇದನ್ನೂ ಓದಿ: ಮಂಗಳೂರು: ಯುವಕನ ಮೇಲೆ ಹಲ್ಲೆ ಮಾಡಿ ಬೆನ್ನಿಗೆ ಚಾಕುನಿಂದ ಇರಿದ ದುಷ್ಕರ್ಮಿಗಳು
ಕೂಡಲೇ ಗಾಯಾಳು ವಿದ್ಯಾರ್ಥಿ ಪಾಸಿ ಮೊಹಮ್ಮದ್ನನ್ನು ರಾಜಲಕ್ಷ್ಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಲಾಟೆ ಸಂಬಂಧ ಇಬ್ಬರನ್ನು ಗಂಗಮ್ಮಗುಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ನೆಲಮಂಗಲ: ಕಂಟೈನರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಟಿ.ಬೇಗೂರು ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ. ತ್ಯಾಮಗೊಂಡ್ಲು ನಿವಾಸಿ ದೊರೆಸ್ವಾಮಿ (24) ಮೃತ ದುರ್ದೈವಿ. ಶಿವಗಂಗೆಯಲ್ಲಿ ಸ್ನೇಹಿತರನ್ನ ಬೇಟಿಯಾಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಬೈಕ್ ಹಿಂಬದಿ ಸವಾರ ಮಾದನಾಯಕನಹಳ್ಳಿ ಗ್ರಾಮದ ನರಸಿಂಹಮೂರ್ತಿ (30) ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕಂಟೇನರ್ ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು, ಕ್ಯಾಂಟರ್ ಹಾಗೂ ಚಾಲಕನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Mon, 4 September 23