ಆನೇಕಲ್​​​ನಲ್ಲಿ ಒತ್ತುವರಿ ಸರ್ಕಾರಿ ಜಾಗ ತೆರವು ಕಾರ್ಯ; ಒಂದು ಗಂಟೆಯೊಳಗೆ ಜಾಗ ಖಾಲಿ ಮಾಡಲು ಸೂಚನೆ

| Updated By: preethi shettigar

Updated on: Jul 31, 2021 | 12:08 PM

ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೇ ಅಂಗಡಿ ಮುಗ್ಗಟ್ಟು ನಿರ್ಮಾಣ ಮಾಡಿದವರಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್, ಒಂದು ತಾಸು ಸಮ ನೀಡುತ್ತೇನೆ ಅಷ್ಟರಲ್ಲಿ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾರೆ.

ಆನೇಕಲ್​​​ನಲ್ಲಿ ಒತ್ತುವರಿ ಸರ್ಕಾರಿ ಜಾಗ ತೆರವು ಕಾರ್ಯ; ಒಂದು ಗಂಟೆಯೊಳಗೆ ಜಾಗ ಖಾಲಿ ಮಾಡಲು ಸೂಚನೆ
ಬೊಲ್ಡೋಜರ್​ ಮೂಲಕ ತೆರವು ಕಾರ್ಯ
Follow us on

ಬೆಂಗಳೂರು: ಅಕ್ರಮವಾಗಿ ಒತ್ತುವರಿ ಮಾಡಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆನೇಕಲ್ ತಾಲೂಕಿನ ಹುಲಿಮಂಗಲಕ್ಕೆ ಬೊಲ್ಡೋಜರ್ ಸಮೇತ ಆಗಮಿಸಿದ, ತಹಶೀಲ್ದಾರ್ ದಿನೇಶ್, ಡಿವೈಎಸ್​ಪಿ ರಮೇಶ್, ಎಸಿ ಶಿವಣ್ಣ, ಸರ್ಕಾರಿ ಜಾಗ ತೆರವು ಕಾರ್ಯಕ್ಕೆ ಕೈ ಹಾಕಿದ್ದಾರೆ.

ಸರ್ಕಾರಿ ಜಾಗದಲ್ಲಿ ಅನುಮತಿ ಪಡೆಯದೇ ಅಂಗಡಿ ಮುಗ್ಗಟ್ಟು ನಿರ್ಮಾಣ ಮಾಡಿದವರಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್, ಒಂದು ತಾಸು ಸಮ ನೀಡುತ್ತೇನೆ ಅಷ್ಟರಲ್ಲಿ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾರೆ. ಆ ಮೂಲಕ ಒಂದು ಗಂಟೆಯೊಳಗೆ ಅಂಗಡಿ ಮಾಲೀಕರು ಸಾಮಾನು ತೆಗೆದುಕೊಂಡು ಹೋಗಲು ಅವಕಾಶ ನೀಡಿದ್ದಾರೆ. ಒಟ್ಟಾರೆ ಕೋಟ್ಯಾಂತರ ರೂಪಾಯಿ ಬಾಳುವ ಜಮೀನು ಕಬಳಿಕೆಯ ಯೋಜನೆಗೆ ಇಂದು ಅಧಿಕಾರಿಗಳು ತಡವೊಡ್ಡಿದ್ದಾರೆ.

ಸರ್ವೆ ನಡೆಸುತ್ತಿರುವ ಅಧಿಕಾರಿಗಳು

ಕಳೆದ‌ 6 ವರ್ಷದಲ್ಲಿಯೇ ಮೊದಲ ಬಾರಿಗೆ ಅತಿ ದೊಡ್ಡ ಜೆಸಿಬಿ ಆಪರೇಷನ್
15 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಕಬಳಿಸಲು ಪ್ರಯತ್ನಿಸಿದವರಿಗೆ ಸರ್ಕಾರ ಶಾಕ್ ನೀಡಿದೆ. ಸರಕಾರಿ ಗೋಮಾಳಕ್ಕೆ ಸೇರಿದ 5 ಎಕರೆ ಜಮೀನು ವಶಕ್ಕೆ ಪಡೆದ ಅಧಿಕಾರಿಗಳು ಆನೇಕಲ್ ತಾಲೂಕಿನ ಹುಲಿಮಂಗಲ ಸರ್ವೆ ನಂಬರ್ 155, 156ರಲ್ಲಿ ಜೆಸಿಬಿ ಮೂಲಕ ಜಾಗವನ್ನು ತೆರವುಗೊಳಿಸಿದ್ದಾರೆ. ಜಾಗ ಖಾಲಿ ಮಾಡಲು 24 ತಾಸು ಸಮಯ ಕೊಟ್ಟಿದ್ದರೂ ಕದಲದ ಹಿನ್ನೆಲೆಯಲ್ಲಿ ತಹಶೀಲ್ದಾರ್ ದಿನೇಶ್, ಡಿವೈಎಸ್ಪಿ ರಮೇಶ್, ಎಸಿ ಶಿವಣ್ಣ ಸ್ಥಳಕ್ಕೆ ಆಗಮಿಸಿದ್ದು, ಒಂದು ತಾಸು ಸಮಯ ಕೊಟ್ಟು ಜೆಸಿಪಿ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಜೆಸಿಪಿ ಕಾರ್ಯಾಚರಣೆ

ಇದನ್ನೂ ಓದಿ:
ನಿರ್ಮಾಣ ಹಂತದ ಮನೆ ತೆರವು ಕಾರ್ಯಾಚರಣೆಗೆ ಆಕ್ರೋಶ, ಅಣ್ಣನ ವಿರುದ್ಧವೇ ಪ್ರತಿಭಟನಾ ರ್ಯಾಲಿ ನಡೆಸಿದ ಮಧು ಬಂಗಾರಪ್ಪ

ತೆರಿಗೆ ಪಾವತಿಸದ 6 ಐಷಾರಾಮಿ ಬಸ್‌ಗಳು ಜಪ್ತಿ, ನಂಜನಗೂಡು RTO ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ

 

Published On - 11:42 am, Sat, 31 July 21