ಕರ್ನಾಟಕದಲ್ಲಿನ ವಿದ್ಯಮಾನ ಒಳ್ಳೆಯದಲ್ಲ: ಶಾಲಾ ಕಾಲೇಜುಗಳಲ್ಲಿ ಜಾತಿ ಮತ ಇರುವುದಿಲ್ಲ, ಎಲ್ಲರೂ ಒಂದೇ- ಸರ್ಜಾಪುರದಲ್ಲಿ ಉಪ ರಾಷ್ಟ್ರಪತಿ ನಾಯ್ಡು

| Updated By: preethi shettigar

Updated on: Feb 26, 2022 | 12:26 PM

ಪರಿಸರ ಕಾಳಜಿ, ಹವಾಮಾನ ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಧರ್ಮದ ಬಗ್ಗೆ ತಿಳಿಸಬೇಕು. ಎಲ್ಲಾ ಭಾಷೆಯನ್ನು ಕಲಿಯಬೇಕು, ಮಾತೃ ಭಾಷೆ ಮರೆಯಬಾರದು ಎಂದು ಬೆಂಗಳೂರಿನ ಸರ್ಜಾಪುರದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿನ ವಿದ್ಯಮಾನ ಒಳ್ಳೆಯದಲ್ಲ: ಶಾಲಾ ಕಾಲೇಜುಗಳಲ್ಲಿ ಜಾತಿ ಮತ ಇರುವುದಿಲ್ಲ, ಎಲ್ಲರೂ ಒಂದೇ- ಸರ್ಜಾಪುರದಲ್ಲಿ ಉಪ ರಾಷ್ಟ್ರಪತಿ ನಾಯ್ಡು
ವೆಂಕಯ್ಯ ನಾಯ್ಡು
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಶಾಲಾ- ಕಾಲೇಜುಗಳಲ್ಲಿ(School-College) ಜಾತಿ ಮತ ಇರುವುದಿಲ್ಲ. ಎಲ್ಲರೂ ಒಂದೇ. ನಾವೆಲ್ಲರೂ ಭಾರತೀಯರು. ಭಾರತೀಯತೆ ನಮ್ಮದಾಗಬೇಕು. ಶಾಲಾ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು. ಪರಿಸರ ಕಾಳಜಿ, ಹವಾಮಾನ ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಬೇಕು. ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ (Students) ಧರ್ಮದ ಬಗ್ಗೆ ತಿಳಿಸಬೇಕು. ಎಲ್ಲಾ ಭಾಷೆಯನ್ನು ಕಲಿಯಬೇಕು, ಮಾತೃ ಭಾಷೆ ಮರೆಯಬಾರದು ಎಂದು ಬೆಂಗಳೂರಿನ ಸರ್ಜಾಪುರದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah naidu) ಹೇಳಿಕೆ ನೀಡಿದ್ದಾರೆ.

ಶಾಲಾ- ಕಾಲೇಜುಗಳಲ್ಲಿ ಯಾವುದೇ ವಿವಾದ ಬೇಡ. ಶಾಲೆಗಳು ಮಾಡಿರುವ ಕ್ರಮವನ್ನು ವಿದ್ಯಾರ್ಥಿ ಅಳವಡಿಸಕೊಳ್ಳಬೇಕು. ಇರುವೆಗಳಿಗೆ ಸಕ್ಕರೆ ಹಾಕಿ, ಹಾವಿಗೆ ಹಾಲೆರದು, ಪಶುಗಳಿಗೆ ಮೇವು ಹಾಕಿ, ತಿಲಕವಿಟ್ಟು ಗೌರವಿಸುವ ಸಂಸ್ಕಾರ ನಮ್ಮದು. ಎಲ್ಲಾ ಭಾಷೆಯನ್ನು ಕಲಿಯಬೇಕು ಆದರೆ ಮೊದಲು ನಿಮ್ಮ ಮಾತೃ ಭಾಷೆ ಕಲೀರಿ. ಮೊದಲು ಕನ್ನಡ ಕಲೀರಿ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಮಾತೃ ಭಾಷೆ ಕಣ್ಣು ಇದ್ದಂತೆ. ಇತರೆ ಭಾಷೆ ಕನ್ನಡಕ ಇದ್ದಂತೆ. ಕಣ್ಣೆ ಇಲ್ಲದಿದ್ದರೆ ರಿಬಾನ್ ಗ್ಲಾಸ್ ಹಾಕಿದ್ರೂ ಪ್ರಯೋಜನ ಇರಲ್ಲ ಎಂದು ಖಾಸಗಿ ಶಾಲೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಸರ್ಜಾಪುರಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಾಥ್ ನೀಡಿದ್ದಾರೆ. ಖಾಸಗೀ ಶಾಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿಯಾಗಿದ್ದಾರೆ.

ಇದನ್ನೂ ಓದಿ:

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಶಿವರಾಜ್​​ಕುಮಾರ್​; ಇಲ್ಲಿವೆ ಫೋಟೋಗಳು

Karnataka Hijab Hearing Highlights: ಹಿಜಾಬ್​ ವಿವಾದ! ವಾದಮಂಡನೆ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Published On - 12:13 pm, Sat, 26 February 22