ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನ; ಲಕ್ಷಾಂತರ ರೂ. ಬೆಲೆ ಬಾಳುವ ಕಾಪರ್ ವಸ್ತು, ಸಿಸಿ ಟಿವಿ ದೂಚಿದ ಖದೀಮರು

ನೆಲಮಂಗಲ ತಾಲೂಕಿನ ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನವಾಗಿದೆ. 30 ಲಕ್ಷ ಬೆಲೆ ಬಾಳುವ 2 ಸಾವಿರಕ್ಕೂ ಹೆಚ್ಚು ಕೆಜಿಯಷ್ಟು ತೂಕವಿರುವ ಕಾಪರ್ ವಸ್ತುಗಳನ್ನು ಕಳಪು ಮಾಡಲಾಗಿದ್ದು ಈ ವೇಳೆ ಕಂಪನಿಯ ಸಿಸಿ ಕ್ಯಾಮರಾ, ಡಿವಿಆರ್ ಕೂಡ ಕಳ್ಳತನ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ನಿದ್ರೆಯಲ್ಲಿದ್ದ ವೇಳೆ ಘಟನೆ ನಡೆದಿದೆ.

ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನ; ಲಕ್ಷಾಂತರ ರೂ. ಬೆಲೆ ಬಾಳುವ ಕಾಪರ್ ವಸ್ತು, ಸಿಸಿ ಟಿವಿ ದೂಚಿದ ಖದೀಮರು
ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನ
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on: Aug 24, 2023 | 11:16 AM

ನೆಲಮಂಗಲ, ಆ.24: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರಿನ ಎಲೆಕ್ಟ್ರಿಕ್ ಪ್ರಾಡಕ್ಟ್ಸ್ ಪಿವಿಟಿ ಲಿಮಿಟೆಡ್​ನಲ್ಲಿ ಕಳ್ಳತನವಾಗಿದೆ(Theft). ಗೋಡಾನ್ ರೋಲಿಂಗ್ ಶೆಟರ್ ತೆಗೆದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾಪರ್ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ನಿದ್ರೆಯಲ್ಲಿದ್ದ ವೇಳೆ  30 ಲಕ್ಷ ಬೆಲೆ ಬಾಳುವ 2 ಸಾವಿರಕ್ಕೂ ಹೆಚ್ಚು ಕೆಜಿಯಷ್ಟು ತೂಕವಿರುವ ಕಾಪರ್ ವಸ್ತುಗಳನ್ನು ಕಳಪು ಮಾಡಲಾಗಿದ್ದು ಈ ವೇಳೆ ಕಂಪನಿಯ ಸಿಸಿ ಕ್ಯಾಮರಾ, ಡಿವಿಆರ್ ಕೂಡ ಕಳ್ಳತನ ಮಾಡಲಾಗಿದೆ. ಗೂಡ್ಸ್ ವಾಹನದಲ್ಲಿ ಮಾಲು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಕಂಪನಿಯ ಮ್ಯಾನೇಜರ್ ಲೋಕೇಶ್ ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಟೋ ಕದಿಯುತ್ತಿದ್ದ ಖದೀಮ ಅರೆಸ್ಟ್

ನಂಬಿಕೆ ಗಳಿಸಿ ಅಟೋಗಳನ್ನ ಕದ್ದಿಯುತ್ತಿದ್ದ ಆರೋಪಿಯನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದಾರೆ. ಹಾಸನದ ವಿಷ್ಣು(24) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 2 ಆಟೋ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆಗಸ್ಟ್ 17 ರಂದು ವಿಜಯಕುಮಾರ್ ಎಂಬುವವರಿಗೆ ಸರಾಯಿ ಕೊಡಿಸಿ ಹಳೆಯ ಆಟೋದಲ್ಲಿ ಮಲಗಿಸಿ ಹೊಸ ಅಟೋ ಕದ್ದಿದ್ದ ವಿಷ್ಣುವಿನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಸಿಸಿ ಟಿವಿ ಹಾಗೂ ಮೊಬೈಲ್ ಟವರ್ ಅಧಾರದ ಮೇಲೆ ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Karnataka Breaking Kannada News Live: ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ-ಹಣ್ಣು ದರ ಏರಿಕೆ

ಖರ್ಚಿಗೆ ಹಣ ಇಲ್ಲ ಅಂದರೆ ಕಳ್ಳತನಕ್ಕೆ ಇಳಿಯುತ್ತಿದ್ದ ವಿಷ್ಣು, ಉಳಿದಂತೆ ಕೆಂಗೇರಿ ಅಂಬೂರ್ ಬಿರಿಯಾನಿ ಹೋಟೆಲ್ ನಲ್ಲಿ ಅಡುಗೆ ಭಟ್ಟನಾಗಿದ್ದ. ಮಾದನಾಯಕನಹಳ್ಳಿ, ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಹಾಗೂ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದಾನೆ. ಅತಿಯಾದ ಕಳವು ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆ ಪೋಷಕಎಉ ಈತನನ್ನು ಮನೆಯಿಂದ ಹೊರ ಹಾಕಿದ್ದರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ