ಕಾರು ಕದ್ದ ಮೇಲೆ, ಹಿಂಬಾಲಿಸಿ ಬಂದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕಳ್ಳರು: ನೆಲಮಂಗಲದ ರೈಲ್ವೆ ನಿಲ್ದಾಣ ಬಳಿ ಬೊಲೆರೊ ಕಾರು ಪತ್ತೆ

ರಾಕೇಶ್ ತಮ್ಮ ಹರೀಶ್ ಸ್ನೇಹಿತ ನಂದಕಿಶೋರ್, ಹ್ಯಾರಿಸ್‌ ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ. ಈ ವೇಳೆ ಕಳ್ಳರು ಗನ್ ತೋರಿಸಿ ಹೆದರಿಸಿದ್ದು ಸಂದಿ-ಗೋಂದಿಯಲ್ಲಿ ತೋರಿಸಿ ಎಸ್ಕೇಪ್ ಆಗಿದ್ದು ಸದ್ಯ ಕಾರು ಪತ್ತೆಯಾಗಿದೆ.

ಕಾರು ಕದ್ದ ಮೇಲೆ, ಹಿಂಬಾಲಿಸಿ ಬಂದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕಳ್ಳರು: ನೆಲಮಂಗಲದ ರೈಲ್ವೆ ನಿಲ್ದಾಣ ಬಳಿ ಬೊಲೆರೊ ಕಾರು ಪತ್ತೆ
ಬೊಲೆರೊ ಕಾರು
Follow us
TV9 Web
| Updated By: ಆಯೇಷಾ ಬಾನು

Updated on: Nov 03, 2021 | 1:07 PM

ನೆಲಮಂಗಲ: ಕಾರು ಕದ್ದು ಹಿಂಬಾಲಿಸಿದವರಿಗೆ ಗನ್ ತೋರಿಸಿ ಎಸ್ಕೇಪ್ ಆದ ಕೇಸ್ಗೆ ಸಂಬಂಧಿಸಿ ಸದ್ಯ ಈಗ ನೆಲಮಂಗಲದ ರೈಲ್ವೆ ನಿಲ್ದಾಣದ ಬಳಿ ಬೊಲೆರೊ ಕಾರು ಪತ್ತೆಯಾಗಿದೆ. ತಮಿಳುನಾಡಿನ ಹೊಸೂರಿನ ರಾಕೇಶ್ ಎಂಬುವವರಿಗೆ ಸೇರಿದ ಕಾರು ಪತ್ತೆಯಾಗಿದೆ.

ಘಟನೆ ವಿವರ ಕಳೆದ ತಿಂಗಳ 25ರಂದು ರಾಕೇಶ್ ಎಂಬುವವರು ಎಸ್.ಮುದ್ಗಾನಪಲ್ಲಿಯ ತಮ್ಮ ಮನೆಯ ಬಳಿ ಎಂದಿನಂತೆ ಬೊಲೆರೊ ಕಾರು ಪಾರ್ಕ್ ಮಾಡಿದ್ದರು. ಆ ದಿನ ರಾತ್ರಿ ಕಳೆದ ಬೆಳಕಾಗುವಷ್ಟರಲ್ಲಿ ಬೊಲೆರೊ ನಾಪತ್ತೆಯಾಗಿತ್ತು. ಕಾರನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದರು. ಈ ಬಗ್ಗೆ ರಾಕೇಶ್ ಹೊಸೂರಿನ ಮತ್ತಿಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ ತಮ್ಮ ಕಾರು ಕಳ್ಳತನವಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಾರ್ ಫೋಟೋ ಸಮೇತ ಫೋನ್ ನಂಬರ್ ಹಾಕಿ ಮಾಹಿತಿ ಹಂಚಿಕೊಂಡಿದ್ದರು.

ಅಕ್ಟೋಬರ್ 27ರಂದು ರಾಕೇಶ್ ಸ್ನೇಹಿತ ಕರೆ ಮಾಡಿ ಕಳೆದೋದ ಬೊಲೆರೊ ಕಾರನ್ನು ನೋಡಿರುವುದಾಗಿ ಅದು ಹಾಸನ ಕಡೆಯಿಂದ ನೆಲಮಂಗಲ ಕಡೆಗೆ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದ. ಈ ವೇಳೆ ರಾಕೇಶ್ ಠಾಣೆಯಲ್ಲಿದ್ದ ಕಾರಣ ತಕ್ಷಣ ತನ್ನ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಈ ಮಾಹಿತಿ ನೀಡಿ ನೆಲಮಂಗಲ ಟೋಲ್ ಗೇಟ್ ಬಳಿ ಕಾಯಲು ತಿಳಿಸಿದ್ದಾನೆ. ಈ ವೇಳೆ ರಾಕೇಶ್ ಸಂಬಂಧಿ ನೆಲಮಂಗಲ ಟೋಲ್ ಗೇಟ್ ಬಳಿ ತೆರಳಿ ಅಲ್ಲಿನ ಸಿಬ್ಬಂದಿಗೆ ಈ ವಿಷಯ ತಿಳಿಸಿ ಕಾರಿಗಾಗಿ ಕಾದಿದ್ದಾರೆ.

ಬಳಿಕ ಕೆಲ ಹೊತ್ತಿನ ಬಳಿಕ ಬೊಲೆರೊ ಕಾರೊಂದು ಬಂದಿದ್ದು ಅದರಲ್ಲಿ 7 ಜನ ಗಂಡಸರು ಕೂತಿದ್ದರು ಇದನ್ನು ಕಂಡ ರಾಕೇಶ್ ಸಂಬಂಧಿ ಕಾರಿನ ಪರಿಶೀಲನೆ ಮಾಡಿದ್ದಾರೆ. ಬಳಿಕ ಆ ಕಾರು ಅವರದೇ ಎಂದು ಪಕ್ಕಾ ಆಗುತ್ತಿದ್ದಂತೆ ಟೋಲ್ ಸಿಬ್ಬಂದಿಗೆ ಕಳ್ಳರನ್ನು ಹಿಡಿಯುವಂತೆ ಕೂಗಿದ್ದಾರೆ. ಆಗ ಟೋಲ್ ಗೇಟ್ ಮುಚ್ಚಿದರೂ ಕಳ್ಳರು ಕಾರನ್ನು ಓಡಿಸಿಕೊಂಡು ಎಸ್ಪೇಪ್ ಆಗಿದ್ದಾರೆ. ಆಗ ರಾಕೇಶ್ ತಮ್ಮ ಹರೀಶ್ ಸ್ನೇಹಿತ ನಂದಕಿಶೋರ್, ಹ್ಯಾರಿಸ್‌ ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಚೇಸ್ ಮಾಡಿದ್ದಾರೆ. ಈ ವೇಳೆ ಕಳ್ಳರು ಗನ್ ತೋರಿಸಿ ಹೆದರಿಸಿದ್ದು ಸಂದಿ-ಗೋಂದಿಯಲ್ಲಿ ತೋರಿಸಿ ಎಸ್ಕೇಪ್ ಆಗಿದ್ದು ಸದ್ಯ ಕಾರು ಪತ್ತೆಯಾಗಿದೆ.

ಇದನ್ನೂ ಓದಿ: ಇದು ತಮಾಷೆಯಲ್ಲ, ಸ್ವಲ್ಪವಾದರೂ ಸಂವೇದನೆ ಇರಲಿ: ರಾಹುಲ್​ ಗಾಂಧಿ ಟ್ವೀಟ್​​

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ