ದೇವನಹಳ್ಳಿ: ಮನೆಯವರು ಮಹಡಿ ಮೇಲೆ ಮಲಗಿದ್ದ ವೇಳೆ ಕಳ್ಳನ ಕೈಚಳಕ; ಕ್ಷಣ ಮಾತ್ರದಲ್ಲೇ ಹಣ, ಚಿನ್ನ ದೋಚಿ ಪರಾರಿ
ಹೇಳಿ ಕೇಳಿ ಬೇಸಿಗೆ ಕಾಲ ಮನೆಯ ಕಿಟಕಿ ಬಾಗಿಲೆಲ್ಲ ತೆಗೆದರೂ ಒಂದಿಷ್ಟು ತಂಪಾದ ಗಾಳಿ ಬರೋದು ಡೌಟ್. ಹೀಗಾಗೆ ಸಾಕಷ್ಟು ಜನ ರಾತ್ರಿಯಾದರೆ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗುವುದಕ್ಕೆ ಹೋಗುತ್ತಾರೆ. ಆದರೆ ಇದೀಗ ಹೀಗೆ ಮಲಗಲು ಹೋಗಿದ್ದ ಮನೆಯಲ್ಲಿಯೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಮನೆಯ ಬಾಗಿಲು ಹೇಗೆ ಮುಚ್ಚಿದೆಯೋ ಹಾಗೆ ಇದೆ ಮನೆ ಮುಂದಿನ ವಾತಾವರಣವು ಎಂದಿನಂತೆ ಇದೆ. ಬೆಳಗ್ಗೆ ನಿದ್ದೆಯಿಂದ್ದೆದ್ದ ಮನೆ ಮಾಲೀಕರು ಒಳಗಡೆ ಹೋದಾಗ ಮನೆಯ ಬೀರುವಿನಲ್ಲಿರಬೇಕಾದ ವಸ್ತುಗಳೆಲ್ಲ ಬೆಡ್ ಮೇಲೆ ಚೆಲ್ಲಾಪಿಲ್ಲಿಯಾಗಿದ್ರೆ, ಲಾಕರ್ಗಳನ್ನೆಲ್ಲ ಕಿತ್ತೆಸೆದಿರುವ ಖದೀಮರು ಹಣ, ಆಭರಣಗಳನ್ನೆಲ್ಲ ದೋಚಿ ಎಸ್ಕೇಪ್ ಆಗಿದ್ದಾರೆ. ಹೌದು ಅಂದಹಾಗೆ ಇಷ್ಟೆಕ್ಕೆಲ್ಲ ಕಾರಣವಾಗಿದ್ದು ಬೇಸಿಗೆ ಬಿಸಿಗಾಳಿ.
ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಇಸ್ಲಾಂ ನಗರದ ತೋಟದಲ್ಲಿ ಸೀನಪ್ಪ ಎಂಬುವವರು ಮನೆಯನ್ನ ಕಟ್ಟಿಕೊಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲೆ ವಾಸಿಸುತ್ತಿದ್ದಾರೆ. ಜೊತೆಗೆ ಪ್ರತಿಭಾರಿ ಬೇಸಿಗೆ ಕಾಲದಲ್ಲಿ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗುವುದು ಈ ಕುಟುಂಬಕ್ಕೆ ರೂಡಿಯಾಗಿದ್ದು, ಅದೇ ರೀತಿ ನಿನ್ನೆ(ಮಾ.31) ಸಹ ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದಾರೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಖದೀಮರು ತೋಟದ ಕಡೆಯಿಂದ ಮನೆಗೆ ಬಂದಿದ್ದು ಮನೆಯ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಜೊತೆಗೆ ಮನೆಯ ಬೀಗ ಮುರಿದು ಒಳ ಹೋದವರೆ ಮನೆಯ ಬೀರುವ ಬೆಡ್ ರೂಂನಲ್ಲೆಲ್ಲ ಹುಡುಕಾಡಿದ್ದು ಬಟ್ಟೆ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಹಣವನ್ನ ದೋಚಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ
ಮನೆಯಲ್ಲಿ ಬೇಸಿಗೆಯ ಸೆಕೆ ಎಂದು ಕುಟುಂಬಸ್ಥರೆಲ್ಲ ಮಹಡಿ ಮೇಲೆ ಮಲಗಿದ್ದು, ಮುಂಜಾನೆ ಶೌಚಾಲಯಕ್ಕೆ ಹೋಗುವುದಕ್ಕೆ ಎಂದು ಸೀನಪ್ಪ ಎಂಬುವವರು ಎದ್ದು ಮನೆಗೆ ಬಂದಿದ್ದಾರೆ. ಈ ವೇಳೆ ಮನೆಗೆ ಹಾಕಿದ್ದ ಬೀಗ ಹೊಡೆದು ಹಾಕಿ ಬಾಗಿಲು ಒಪನ್ ಮಾಡಿರುವುದು ಕಂಡು ಬಂದಿದ್ದು ಒಳಗಡೆ ಹೋಗಿ ನೋಡಿದ್ದಾರೆ. ಬೆಡ್ ರೂಂ ಕಬೋರ್ಡ್ನ್ನ ಹುಡುಕಾಡಿ 100 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಸೇರಿದಂತೆ ಮನೆಯಲ್ಲಿ ನಗದು ಹಣ ಸೇರಿದಂತೆ 10 ಲಕ್ಷ ರೂ ಮೌಲ್ಯದ ಹಣವನ್ನ ದೋಚಿ ಪರಾರಿಯಾಗಿದ್ದಾರೆ. ಇನ್ನು ಮಾಲೀಕರು ಮಹಡಿ ಮೇಲೆ ಇರುವಾಗ ಕಳ್ಳರು ರಾಜಾ ರೋಷವಾಗಿ ಮನೆ ಕಳ್ಳತನ ಮಾಡಿರುವುದು ಕುಟುಂಬಸ್ಥರು ಸೇರಿದಂತೆ ಪಟ್ಟಣದ ಜನರನ್ನ ಬೆಚ್ಚಿ ಬೀಳಿಸಿದೆ.
ಇನ್ನು ಮೇಲ್ನೂಟಕ್ಕೆ ಯಾರೊ ಬಲ್ಲವರೇ ಮನೆಯವರು ಮಹಡಿ ಮೇಲೆ ಮಲಗಿರುವುದನ್ನ ಕಂಡು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಈ ಸಂಬಂಧ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ತನಿಖೆ ನಂತರ ಕಳ್ಳತನ ಮಾಡಿದವರು ಎಂಬುದು ಗೊತ್ತಾಗಬೇಕಿದೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ