ಚಿಕಿತ್ಸೆಗೆಂದು ಹೋದವರು ಮರಳಿ ಮನೆಗೆ ಬರಲೇ ಇಲ್ಲ: ತಬ್ಬಲಿಯಾದ ಮೂರು ಮಕ್ಕಳು

| Updated By: ರಮೇಶ್ ಬಿ. ಜವಳಗೇರಾ

Updated on: May 26, 2024 | 3:19 PM

ಇವರೆಲ್ಲ ಒಂದೇ ಕುಟುಂಬದ ಬಂದುಗಳು..ಅನಾರೋಗ್ಯಕ್ಕೆ ತುತ್ತಾದವರನ್ನ ಚಿಕಿತ್ಸೆಗೆಂದು ಕಾರವಾರದ ಬಳಿಕ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದಕ್ಕೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ರು, ಹೇಗೋ ಸಮುದ್ರದ ತಟಕ್ಕೆ ಹೋಗಿದ್ದೇವೆಂದು ಕಡಲ ತೀರದಲ್ಲಿ ಮಗುವಿನೊಂದಿಗೆ ಆಟವಾಗಿ ಎಂಜಾಯ್ ಮಾಡಿದ್ದ ಕುಟುಂಬ ಸಂಜೆಯಾಗುತ್ತಲೆ ಕಾರನ್ನೇರಿ ಊರಿನತ್ತ ಹೊರಟಿದ್ದಾರೆ. ಆದ್ರೆ, ಅರ್ಧ ದಾರಿ ಕ್ರಮಿಸಿದ್ದ ಆ ಸಹೋದರಿಯರ ಕುಟುಂಬ ಊರು ಸೇರೋ ಮೊದಲೇ ಸಾಮೂಹಿಕವಾಗಿ ದುರುಂತ ಅಂತ್ಯ ಕಂಡಿದ್ದಾರೆ. ಮತ್ತೊಂದೆಡೆ ತಂದೆ-ತಾಯಿಯನ್ನು ಕಳೆದುಕೊಂಡು ಮೂವರು ಮಕ್ಕಳು ಅನಾಥವಾಗಿದ್ದಾರೆ.

ಚಿಕಿತ್ಸೆಗೆಂದು ಹೋದವರು ಮರಳಿ ಮನೆಗೆ ಬರಲೇ ಇಲ್ಲ: ತಬ್ಬಲಿಯಾದ ಮೂರು ಮಕ್ಕಳು
Follow us on

ಹಾಸನ/ದೇವನಹಳ್ಳಿ, (ಮೇ 26): ಹಾಸನ ತಾಲ್ಲೂಕಿನ ಈಚಲಹಳ್ಳಿ ಬಳಿಯ ರಾಸ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಮುಂಜಾನೆ 5-50ರ ಸುಮಾರಿಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಮಂದಿ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದ KA53C1419 ನಂಬರಿನ ಇಟಿಯೋಸ್ ಕಾರು ಹಾಗು MH46BM3875 ನಂಬರಿನ ಟ್ರಕ್ ನಡುವೆ ಮುಖಾಮುಕಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿಯ ನಾರಾಯಣಪ್ಪ ಹಾಗು ಸುನಂದಾ ದಂಪತಿ ಹಾಗೆ ಹೊಸಕೋಟೆ ತಾಲ್ಲೂಕಿನ ರವಿಕುಮಾರ್ ಹಾಗು ನೇತ್ರಾವತಿ ದಂಪತಿ ಹಾಗು ಅವರ ಪುತ್ರ ನಾಲ್ಕು ವರ್ಷದ ಚೇತನ್ ಹಾಗು ಕಾರಿನ ಚಾಲಕ ರಾಕೇಶ್ ಮೃತಪಟ್ಟಿದ್ದಾರೆ. ಒಂದೆಡೆ ಗಂಡ ಹೆಂಡತಿ ಮಗು ಸಾವಿಗೀಡಾಗಿದ್ದರೆ, ಇನ್ನೊಂದಡೆ ಗಂಡ ಹೆಂಡತಿ ಸಾವಿನಿಂದ ಅವರ ಮೂರು ಮಕ್ಕಳು ಅನಾಥವಾಗಿವೆ.

ಅನಾಥವಾದ ಮೂರು ಮಕ್ಕಳು

ಹಾಸನದಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಇದೀಗ ಮೂವರು ಮಕ್ಕಳು ಅನಾಥವಾಗಿವೆ. ಪಾರ್ಶ್ವವಾಯುನಿಂದ ಬಳಲುತ್ತಿದ್ದ, ಬಳಿಕ ಕೆಲವರ ಸಲಗೆ ಮೇರೆಗೆ ನಾರಾಯಣಪ್ಪನನ್ನು ಪತ್ನಿ ಸುನಂದಾ, ಚಿಕಿತ್ಸೆಗೆಂದು ಕಾರವಾರಕ್ಕೆ ಕರೆದುಕೊಂಡು ಹೋಗಿದ್ದರು. ನಾರಾಯಣಪ್ಪ ಜೊತೆ ಪತ್ನಿ, ಪತ್ನಿ ತಂಗಿ, ಗಂಡ, ಮಕ್ಕಳು ತೆರಳಿದ್ದರು. ಆದ್ರೆ, ಸುನಂದಾ ಮತ್ತು ನಾರಾಯಣಪ್ಪ ತಮ್ಮಿಬ್ಬರ ಮೂವರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು. ಆದ್ರೆ, ದುರ್ವೈವ ಚಿಕಿತ್ಸೆ ಪಡೆದುಕೊಂಡು ವಾಪಸ್ ಊರಿಗೆ ಬರುತ್ತಿದ್ದ ವೇಳೆ ಅಪಘಾತದಲ್ಲಿ ಸುನಂದಾ ಮತ್ತು ನಾರಾಯಣಪ್ಪ ಸಾವನ್ನಪ್ಪಿದ್ದಾರೆ. ಈಗ ತಂದೆ ತಾಯಿಯನ್ನ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿವೆ.

ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ಮಗು ಸೇರಿದಂತೆ 6 ಜನ ಸಾವು

ಹೇಗಾಯ್ತು ದುರಂತ?

ನಾರಾಯಣಪ್ಪನಿಗೆ ಪಾಶ್ವವಾಯುವಾಗಿದ್ದರಿಂದ ಚಿಕಿತ್ಸೆಗೆಂದು ಕುಟುಂಬ ಸಮೇತವಾಗಿ ಮಂಗಳೂರಿಗೆ ತೆರಳಿದ್ದ ಐವರು ಚಿಕಿತ್ಸೆ ಬಳಿಕ ಕಾರವಾರದ ಕಡಲ ತಡಿಯಲ್ಲಿ ಮಗುವಿನ ಜೊತೆಗೆ ಸುತ್ತಾಡಿದ್ದಾರೆ. ಸಂಜೆಯಾಗುತ್ತಲೆ ವಾಪಸ್ ಊರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ದಾರಿ ಮಧ್ಯ ಹಾಸನದ ಸಮೀಪ ಕಾರು ಚಾಲಕ ನಿದ್ರೆ ಮಂಪರಿಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡಿದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಡಿವೈಡರ್ ಜಂಪ್ ಮಾಡಿದ ಕಾರು ಎದುರಿನಿಂದ ಬರ್ತಿದ್ದ ಟ್ರಕ್ ಗೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯಾಗುತ್ತಲೆ ಕಾರಿಗಂಟಿಕೊಂಡಂತೆ ಸಿಲುಕಿದ ಕಾರನ್ನ ಟ್ರಕ್ ಸುಮಾರು ಐವತ್ತು ಮೀಟರ್ ಎಳೆದೊಯ್ದಿದ್ದು ಕಾರಿನೊಳಗಿದ್ದ ಆರು ಜನರು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿದ್ದಾರೆ, ಸ್ಥಳಕ್ಕೆ ಹಾಸನ ಎಸ್ಪಿ ಮೊಹಮದ್ ಸುಜೇತಾ, ಎಎಸ್ಪಿ ವೆಂಕಟೇಶ್ ನಾಯ್ಡು ಸೇರಿ ಹಿರಿಯ ಅದಿಕಾರಿಗಳು ಬೇಟಿ ನೀಡಿದ್ದು, ಅಪಘಾತದ ಬೀಕರತೆಗೆ ಜನರೇ ಬೆಚ್ಚಿಬಿದ್ದಿದ್ದಾರೆ.

ಭೀಕರತೆ ವಿವರಿಸಿದ ಲಾರಿ ಚಾಲಕ

ಅಪಘಾತದ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಸುಮಾರು ಒಂದು ಗಂಟೆ ಪ್ರಾಯಾಸಪಟ್ಟು ಮೃತದೇಹಗಳನ್ನು ಜೆಸಿಬಿ ನೆರವಿನೊಂದಿಗೆ ಕಾರಿನಿಂದ ಹೊರ ತೆಗೆದು ಹಾಸನದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಮಾಡಿದ್ಧಾರೆ. ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ಕೊರಿಯರ್ ಟ್ರಕ್ ಚಾಲಕ ತನ್ನಷ್ಟಕ್ಕೆ ತಾನು ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವೇಳೆಯಲ್ಲಿ ಏಕಾಏಕಿ ಜಿಗಿದು ಬಂದ ಕಾರು ನೇರವಾಗಿ ಲಾರಿಗಪ್ಪಳಿಸಿದೆ. ಏನಾಗ್ತಿದೆ ಎಂದು ಗಮನಿಸುವಷ್ಟರಲ್ಲಿ ಘೋರ ದುರಂತ ನಡೆದುಹೋಗಿದೆ. ಘಟನೆಯಿಂದ ಶಾಕ್ ಗೆ ಒಳಗಾಗಿರುವ ಲಾರಿ ಚಾಲಕ ಆತಂಕದಿಂದಲೇ ಘಟನೆಯನ್ನ ವಿವರಿಸಿದ್ದು, ಅಪಘಾತ ನಡೆದ ಕೂಡಲೆ ಸಾವರಿಸಿಕೊಂಡು ಸ್ಲಲ್ಪದೂರದಲ್ಲೇ ಲಾರಿ ನಿಲ್ಲಿಸಿದೆ, ಕೆಳಗಿಳಿದು ಕಾರಿನಲ್ಲಿದ್ದವರ ಬದುಕಿಸೊ ಪ್ರಯತ್ನ ಮಾಡಿದ್ರು ಅದು ಪ್ರಯೋಜನವಾಗಲಿಲ್ಲ, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ

ಒಟ್ಟಿನಲ್ಲಿ ಭಾವನ ಅನಾರೋಗ್ಯ ಎಂದು ಪತಿ ಹಾಗು ಮಗು ಮತ್ತು ಅಕ್ಕನ ಜೊತೆಗೆ ಕಾರವಾರಕ್ಕೆ ತೆರಳಿದ್ದ ಮಹಿಳೆ ಕುಟುಂಬ ದುರಂತ ಅಂತ್ಯಕಂಡಿದೆ. ಒಂದೆಡೆ ಗಂಡ ಹೆಂಡತಿ ಮಗು ಸಾವಿಗೀಡಾಗಿದ್ದರೆ, ಇನ್ನೊಂದಡೆ ಗಂಡ ಹೆಂಡತಿ ಸಾವಿನಿಂದ ಅವರ ಮೂರು ಮಕ್ಕಳು ಅನಾಥವಾಗಿವೆ. ಒಂದೇ ದಿನ ಒಂದೇ ಕುಟುಂಬದ ಐವರ ಸಾವು ಸಂಬಂದಿಕರ ಆಕ್ರಂಧನ ಮುಗಿಲುಮುಟ್ಟುವಂತೆ ಮಾಡಿದ್ದು ನಿದ್ರೆ ಮಂಪರಿನಲ್ಲಿ ಕಾರು ಚಾಲಕ ಮಾಡಿದ ಸಣ್ಣ ಎಡವಟ್ಟು ಆರು ಜನರ ಜೀವ ತೆಗೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ