ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ಸುಳ್ಳು ವರದಿ ಆರೋಪ; ಗ್ರಾಮಸ್ಥರ ಪ್ರತಿಭಟನೆ
ದೊಡ್ಡಬಳ್ಳಾಪುರ(Doddaballapura) ತಾಲೂಕಿನ ವಡ್ಡರಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ತಹಶೀಲ್ದಾರ್ ಹಾಗೂ ಆರ್‌ಐ ಸುಳ್ಳು ವರದಿ ನೀಡಿದ ಆರೋಪದ ಹಿನ್ನಲೆ ವಡ್ಡರಹಳ್ಳಿ ಬಳಿ ಒತ್ತುವರಿಯಾಗಿರುವ ಜಮೀನು ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಜ.04: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲೂಕಿನ ವಡ್ಡರಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ತಹಶೀಲ್ದಾರ್ ಹಾಗೂ ಆರ್‌ಐ ಸುಳ್ಳು ವರದಿ ನೀಡಿದ ಆರೋಪದ ಹಿನ್ನಲೆ ವಡ್ಡರಹಳ್ಳಿ ಬಳಿ ಒತ್ತುವರಿಯಾಗಿರುವ ಜಮೀನು ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಲೋಕಾಯುಕ್ತಕ್ಕೆ ಸಲ್ಲಿಸಲಾಗಿದ್ದ ಸುಳ್ಳು ವರದಿಯ ಪ್ರತಿಯನ್ನು ಹಿಡಿದು ಹೋರಾಟಕ್ಕೆ ಇಳಿದಿದ್ದಾರೆ.
ಈ ಹಿಂದೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಆಗಿದ್ದ ಮೋಹನ್ ಕುಮಾರಿ ಹಾಗೂ ಆರ್‌ಐ ಶಿವಪ್ರಸಾದ್ ಎನ್ನುವವರು ಲೋಕಾಯುಕ್ತಕ್ಕೆ ಸುಳ್ಳು ವರದಿ ನೀಡಿರುವ ಆರೋಪ ಕೇಳಿಬಂದಿದ್ದು, ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಸುಳ್ಳು ವರದಿ ಸಲ್ಲಿಕೆಯ ಬಗ್ಗೆಯೋ ಕೂಡ ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಜೊತೆಗೆ ಒತ್ತುವರಿ ತೆರವು ಮಾಡಿ ಗ್ರಾಮಸ್ಥರಿಗೆ ಸೈಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಆಶ್ರಯ ಯೋಜನೆಗೆ ಮಂಜೂರಾಗಿದ್ದ ಜಮೀನು ಒತ್ತುವರಿ, ತಹಶೀಲ್ದಾರ್ ನೇತೃತ್ವದಲ್ಲಿ ತೆರವು
ಏನಿದು ಘಟನೆ
ವಡ್ಡರಹಳ್ಳಿಯ ಸರ್ವೆ ನಂಬರ್ 162ರಲ್ಲಿ 7ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿತ್ತು. ಈ ವೇಳೆ ಒತ್ತುವರಿ ತೆರವು ಮಾಡಿ ಬೋರ್ಡ್ ಹಾಕಿರುವುದಾಗಿ ತಹಶೀಲ್ದಾರ್ ಮತ್ತು ಆರ್‌ಐ ಲೋಕಾಯುಕ್ತಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನಲೆಯೇ ಇಂದು ಪ್ರತಿಭಟನೆಗೆ ಇಳಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ