ಮದುವೆಯಾಗಿ ವರ್ಷ ಕಳೆದರೂ ನನಗೆ ಸಿಗಬೇಕಿರುವ ಸುಖ ಸಿಗುತ್ತಿಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಮದುವೆಯಾದ ಒಂದೇ ವರ್ಷಕ್ಕೆ ಯುವತಿ ತನ್ನ ಗಂಡನ ವಿರುದ್ಧ ಘೋರ ಆರೋಪವೊಂದನ್ನು ಮಾಡಿ ಠಾಣೆಯ ಮೆಟ್ಟಿಲೇರಿದ್ದಾಳೆ.

ಮದುವೆಯಾಗಿ ವರ್ಷ ಕಳೆದರೂ ನನಗೆ ಸಿಗಬೇಕಿರುವ ಸುಖ ಸಿಗುತ್ತಿಲ್ಲ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಸಾಂದರ್ಭಿಕ ಚಿತ್ರ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಆಯೇಷಾ ಬಾನು

Updated on: Jun 08, 2023 | 3:29 PM

ಆನೇಕಲ್: ಬೆಟ್ಟದಷ್ಟು ಆಸೆ, ಕನಸುಗಳನ್ನು ಕಟ್ಟಿಕೊಂಡಿದ್ದ ಯುವತಿ ತನ್ನ ಗಂಡನ ವಿರುದ್ಧ ಘೋರ ಆರೋಪವೊಂದನ್ನು ಮಾಡಿ ಠಾಣೆಯ ಮೆಟ್ಟಿಲೇರಿದ್ದಾಳೆ. ನನಗೆ ನನ್ನ ಗಂಡನಿಂದ ಸಿಗಬೇಕಿದ್ದ ಸುಖ ಸಿಗುತ್ತಿಲ್ಲ ಎಂದು ದೂರು ದಾಖಲಿಸಿದ್ದಾಳೆ. ಆಕೆಗಿನ್ನೂ‌ 21 ವರ್ಷ, ಎಲ್ಲಾ ಯುವತಿಯರಂತೆ ಆಕೆಗೂ ತನ್ನ ಗಂಡನ ಜೊತೆ ಸುಮಧುರ ಕ್ಷಣಗಳನ್ನು ಕಳೆಯಬೇಕೆಂಬ ಹಂಬಲ ಆಸೆ ಇದೆ. ಗಂಡನ ರೂಪದಲ್ಲಿ ಒಬ್ಬ ಜೊತೆಗಾರ ಸಿಕ್ಕ ಎನ್ನುವ ಖುಷಿಯಿಂದ ತನ್ನ ಮನೆಯವರು ನೋಡಿದ ಹುಡುಗನನ್ನು ಮದುವೆಯಾದ ಯುವತಿ ಸಂಸಾರದ ಬಗ್ಗೆ ನೂರಾರು ಕನಸು ಕಂಡಿದ್ದಳು. ಆದರೆ ಆ ಕನಸುಗಳೆಲ್ಲಾ ಕನಸುಗಳಾಗಿಯೇ ಉಳಿದುಹೋಗಿದೆ ಅಂತ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಹೌದು. ಇಂತಹದ್ದೊಂದು ಪ್ರಕರಣ‌ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಯುವತಿ, ಹಾಸನ ಮೂಲದ ಯುವಕ, ಇಬ್ಬರಿಗೆ ಕಳೆದ ವರ್ಷ ಮದುವೆ ಆಗಿದೆ. ಹುಡುಗ ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ ಮೆಂಟ್ ಸೆಕ್ಯುರಿಟಿ ಸೂಪರವೈಸರ್ ಆಗಿ ಕೆಲಸ ಮಾಡುತ್ತಿದ್ದು, ಎಲ್ಲರ‌ ಜೊತೆಗೆ ಅನೋನ್ಯವಾಗಿದ್ದಾನೆ. ಆದರೆ ಪತ್ನಿಯ ಜತೆ ಸಲುಗೆ ಬೆಳೆಸೊದಾಗ್ಲಿ, ಲೈಂಗಿಕತೆಯಲ್ಲಿ ತೊಡೊಗೋದಾಗ್ಲಿ ಮಾಡ್ತಾ ಇಲ್ಲ ಅಂತ ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.‌ ಅಲ್ಲದೇ ‌ಪ್ರೀತಿಯಿಂದ ಮಾತನಾಡಿಸೋಕೆ‌ ಸಮೀಪ ಹೋದ್ರೂ ಚಿಕ್ಕ ಚಿಕ್ಕ ವಿಚಾರಗಳನ್ನು ತೆಗೆದು ಜಗಳ‌ಮಾಡುತ್ತಾನೆ.

ಇದನ್ನೂ ಓದಿ: ಬಾಡಿಗೆಗೆ ಮನೆ ಕೊಟ್ಟಿದ್ದ ಓನರ್ ಆಂಟಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಬಿಹಾರ ಯುವಕರು; ಆನೇಕಲ್​ನ ಬೀಭತ್ಸ ಘಟನೆಗೆ ಟ್ವಿಸ್ಟ್

ಎಷ್ಟೂ ಅಂತ‌ ನಾನು ಸಹಿಸಲಿ, ಅದಕ್ಕೆ ವಿಚ್ಛೇದನ ಕೋರಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಆದ್ರೆ ಅದಕ್ಕೂ ಸಹಿ ಮಾಡೋದಕ್ಕೆ ಕೊರ್ಟ್ ಗೆ ಬಂದಿಲ್ಲ ಅಂತ ಯುವತಿ ದೂರಿದ್ದಾಳೆ. ಅತ್ತ ವಿಚ್ಛೇದನಾ ನೀಡಿದೆ, ಇತ್ತ ಸರಿಯಾಗಿ ಸಂಸಾರವೂ ಮಾಡದೇ ನನ್ನ ಜೀವನ ಹಾಳಾಗ್ತಿದೆ ಅದಕ್ಕೆ ನ್ಯಾಯ ಬೇಕು ಅಂತ ಯುವತಿ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದು, ಯುವಕನ ವಿರುದ್ಧ ಕ್ರಮ ಕೈಗೊಂಡು ಒಂದು ನಿರ್ಧಾರಕ್ಕೆ ತನ್ನಿ ಅಂತ ಮನವಿ‌ ಮಾಡಿಕೊಂಡಿದ್ದಾಳೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ