ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ?

Bengaluru–Tumakuru Metro Line: ಬೆಂಗಳೂರು-ತುಮಕೂರು ಮೆಟ್ರೋ (ನಮ್ಮ ಮೆಟ್ರೋ 4ನೇ ಹಂತ) ಯೋಜನೆಯ ಡಿಪಿಆರ್ ಸಿದ್ಧವಾಗಿದೆ. 59.60 ಕಿ.ಮೀ ಉದ್ದ, 26 ನಿಲ್ದಾಣಗಳು, ₹20,649 ಕೋಟಿ ಅಂದಾಜು ವೆಚ್ಚದಲ್ಲಿ ಈ ಅಂತರ ಜಿಲ್ಲಾ ಕಾರಿಡಾರ್ ನಿರ್ಮಾಣವಾಗಲಿದೆ. ಬೆಂಗಳೂರು-ತುಮಕೂರು ನಡುವಿನ ಪ್ರಯಾಣಿಕರಿಗೆ ಅಪಾರ ಪ್ರಯೋಜನ ನೀಡಲಿದ್ದು, ಕ್ಷೇತ್ರಮಟ್ಟದ ಅಧ್ಯಯನಗಳು ಪ್ರಗತಿಯಲ್ಲಿವೆ. ಇದು ರಾಜ್ಯದ ಪ್ರಮುಖ ಸಾರಿಗೆ ಯೋಜನೆಗಳಲ್ಲಿ ಒಂದಾಗಿದೆ.

ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ?
ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ

Updated on: Jan 09, 2026 | 1:12 PM

ಬೆಂಗಳೂರು, ಜ.9: ಬಹುಕಾಲ ಬೇಡಿಕೆಯಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯು ಅಧಿಕೃತವಾಗಿ ಘೋಷಣೆ ಆಗಿ, ಇದೀಗ ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಹತ್ವಾಕಾಂಕ್ಷೆಯ ಅಂತರ್​ ಜಿಲ್ಲಾ ಕಾರಿಡಾರ್‌ ಬಗ್ಗೆ ಯೋಜನಾ ವರದಿ (ಡಿಪಿಆರ್) ತಯಾರಿಕೆ ಮಾಡಲಾಗಿದೆ. ನಿರ್ಮಾಣ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ವೆಚ್ಚ ಹಾಗೂ ವಿಸ್ತರಣೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯೋಜನೆ ಬಂದರೆ ಬೆಂಗಳೂರು ಹಾಗೂ ತುಮಕೂರು ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ಡಿಪಿಆರ್ ಸಲಹಾ ಕಾರ್ಯವನ್ನು ನೀಡಿದೆ. ಸಂಸ್ಥೆಯು 1.2 ಕೋಟಿ ರೂ. ವೆಚ್ಚದ 59.60 ಕಿಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಟೆಂಡರ್‌ಗಳನ್ನು ನವೆಂಬರ್ 2025 ರಲ್ಲಿ ಕರೆಯಲಾಯಿತು. ಇನ್ನು ಈ ಕಾರಿಡಾರ್​​ಗಾಗಿ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಹಾಗೂ ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ದಿ ಹಿಂದೂಗೆ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದೆ. ಜತೆಗೆ ಮುಂದಿನ ದಿನಗಳಲ್ಲಿ ಇದರ ವಿಸ್ತರಣೆ ಬಗ್ಗೆಯೂ ಚರ್ಚೆಗಳು ಆಗಿದೆ ಎಂದು ಹೇಳಿದ್ದಾರೆ. ಬೆಂಗಳೂರು-ತುಮಕೂರು ಮೆಟ್ರೋವನ್ನು ನಮ್ಮ ಮೆಟ್ರೋದ 4 ನೇ ಹಂತದ ವಿಸ್ತರಣೆಯ ಭಾಗವಾಗಿ ಯೋಜಿಸಲಾಗಿದೆ ಮತ್ತು ಇದು ರಾಜ್ಯದ ಸಾರಿಗೆ ಮಾರ್ಗದಲ್ಲಿ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಿದೆ.

ಯೋಜನೆಯ ಪ್ರಮುಖ ವಿವರಗಳು:

ಒಟ್ಟು ಮಾರ್ಗದ ಉದ್ದ: 59.60 ಕಿ.ಮೀ.

ಅಂದಾಜು ವೆಚ್ಚ: 20,649 ಕೋಟಿ ರೂ.

ಒಟ್ಟು ನಿಲ್ದಾಣಗಳು: 26

ಪ್ರಯಾಣ: ಮಾದವರ (ಬೆಂಗಳೂರು)ನಿಂದ ನಾಗಣ್ಣನಪಾಳ್ಯ (ತುಮಕೂರು)ವರೆಗೆ

ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಈ ಕಾರಿಡಾರ್ ಪೂರ್ಣಗೊಂಡ ನಂತರ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ನಗರ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಡಿಪಿಆರ್‌ನೊಂದಿಗೆ ಮಾತುಕತೆ ನಡೆಸಿ, ಮುಂದುವರಿದಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಈ ಹಿಂದೆ ವರದಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು. ವಿಶೇಷವಾಗಿ ತುಮಕೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಅಗತ್ಯವಿದೆಯೇ ಎಂದು ಹೇಳಲಾಗಿತ್ತು. ಈ ಯೋಜನೆ ಮುಗಿದ ನಂತರ ಅದನ್ನು ಕೂಡ ವಿಸ್ತರಣೆ ಮಾಡಲಾಗವುದು ಎಂದು ಹೇಳಿದ್ದಾರೆ.

ಕಾರಿಡಾರ್‌ನಲ್ಲಿ ಯೋಜಿಸಲಾದ ಕೆಲವು ಪ್ರಮುಖ ನಿಲ್ದಾಣಗಳು:

ಮಕಾಲಿ

ದಾಸನಪುರ

ನೆಲಮಂಗಲ

ನೆಲಮಂಗಲ ಟೋಲ್‌ಗೇಟ್

ಟಿ. ಬೇಗೂರ್

ತಿಪ್ಪಗೊಂಡನಹಳ್ಳಿ

ಸೋಂಪುರ ಕೈಗಾರಿಕಾ ಪ್ರದೇಶ

ಡಾಬ್ಸ್‌ಪೇಟೆ

ಹಿರೇಹಳ್ಳಿ ಕೈಗಾರಿಕಾ ಪ್ರದೇಶ

ಕ್ಯಾತ್ಸಂದ್ರ

ತುಮಕೂರು ಬಸ್ ನಿಲ್ದಾಣ

ತುಡಾ ಲೇಔಟ್

ನಾಗಣ್ಣನಪಾಳ್ಯ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ