AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರವೇ ಪ್ರತಿಭಟನೆ ಸಂಬಂಧ 10 FIR ದಾಖಲು, 53 ಜನರು ಅರೆಸ್ಟ್: ಕಮಿಷನರ್​​ ಬಿ ದಯಾನಂದ್

ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ 10 ಎಫ್​ಐಆರ್​ ದಾಖಲು ಮಾಡಲಾಗಿದ್ದು, ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಬೆಂಗಳೂರು ಕಮಿಷನರ್​​ ಬಿ.ದಯಾನಂದ್ ಹೇಳಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅವಕಾಶ ಇದೆ. ಆದರೆ ಕಾನೂನು ಸುವ್ಯವಸ್ಥೆ ಕದಡುವಂತಹ ಕೆಲಸ ಮಾಡಬಾರದು ಎಂದಿದ್ದಾರೆ.

ಕರವೇ ಪ್ರತಿಭಟನೆ ಸಂಬಂಧ 10 FIR ದಾಖಲು, 53 ಜನರು ಅರೆಸ್ಟ್: ಕಮಿಷನರ್​​ ಬಿ ದಯಾನಂದ್
ಬೆಂಗಳೂರು ಕಮಿಷನರ್​​ ಬಿ.ದಯಾನಂದ್
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2023 | 4:55 PM

ಬೆಂಗಳೂರು, ಡಿಸೆಂಬರ್​ 28: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಪ್ರತಿಭಟನೆ ಸಂಬಂಧ 10 ಎಫ್​ಐಆರ್​ ದಾಖಲು ಮಾಡಲಾಗಿದ್ದು, ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಬೆಂಗಳೂರು ಕಮಿಷನರ್​​ ಬಿ.ದಯಾನಂದ್ ಹೇಳಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ಕೋಟ್ಯಂತರ ರೂಪಾಯಿ ವಂಚನೆ 

ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ವಂಚಕ ಸಂತೋಷ್ ಬಂಧನ ಪ್ರಕರಣವಾಗಿ ಮಾತನಾಡಿದ ಅವರು, ಮಹಾಲಕ್ಷ್ಮೀ ಲೇಔಟ್​ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಕಂಪನಿಯ ಪಾರ್ಟ್ನರ್ ಶಿಪ್ ತೆಗೆದುಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಎಂದಿದ್ದಾರೆ.

ಇದನ್ನೂ ಓದಿ: ಕನ್ನಡ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಬೋರ್ಡ್​ ಬದಲಾವಣೆಗೆ ಫೆ.28 ಡೆಡ್​​ಲೈನ್​ ನೀಡಿದ ಸಿಎಂ

ದೊಡ್ಡವರ ಕಚೇರಿ ಹೆಸರು ಹೇಳಿಕೊಂಡು ಬಹಳಷ್ಟು ಜನರಿಗೆ ವಂಚನೆ ಮಾಡಿರುವ ಮಾಹಿತಿ ಬಂದಿತ್ತು. ಮಠ ಮಾನ್ಯಗಳಿಗೂ ಭೇಟಿ ಕೊಟ್ಟು ನಂಬಿಕೆ ಬರುವಂತೆ ನಾಟಕ ಮಾಡುತ್ತಿದ್ದ. ಯಾರಿಗಾದರು ವಂಚನೆ ಮಾಡಿರುವ ಮಾಹಿತಿ ಕೊಟ್ಟರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟೆಚ್ಚರ 

ಹೊಸವರ್ಷ ದಿನಾಚರಣೆ ಆಚರಣೆಗೆ ಪೊಲೀಸ್ ಭದ್ರತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಕಟ್ಟೆಚ್ಚರ ವಹಿಸಲಾಗಿದೆ. ಹೊಸ ವರ್ಷದಂದು ಡ್ರಂಕ್ ಮತ್ತು ಡ್ರೈವ್ ಟೆಸ್ಟ್ ಮಾಡಲಾಗುವುದು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್​ಪಾರ್ಕ್​ನಲ್ಲಿ ಬಂದೋಬಸ್ತ್​​ ಕೈಗೊಳ್ಳಲಾಗುತ್ತೆ. ನಗರದಾದ್ಯಂತ 400 ಸಿಸಿಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಬಂಧನ ಖಂಡಿಸಿ ನಗರದಲ್ಲಿ ಪ್ರತಿಭಟನೆ ಮಾಡಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮೈಸೂರಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗಿದೆ.

ನಾರಾಯಣಗೌಡರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದು, ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಕನ್ನಡದ ಉಳಿವಿಗಾಗಿ ಹೋರಾಟ ಮಾಡುವುದು ತಪ್ಪಾ ಎಂದು ರಾಜ್ಯ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ