ಬೆಂಗಳೂರು, ಜು.25: ಮಹಾನಗರದಲ್ಲಿ ಆಟೋರಿಕ್ಷಾ(Auto Rickshaw) ಗಳಲ್ಲಿ ಪ್ರಯಾಣಿಸುವುದು ದುಬಾರಿಯಾಗಿದೆ ಎಂದು ಹೇಳಬೇಕಾಗಿಲ್ಲ. ಜೊತೆಗೆ ಅನೇಕ ಬಾರಿ, ಬೆಂಗಳೂರಿನ ಆಟೋ ಚಾಲಕರು ಹತ್ತಿರವೇ ಪ್ರಯಾಣಿಸಿದರೂ ವಿಪರೀತ ದರಗಳನ್ನು ಪ್ರಯಾಣಿಕರಿಂದ ವಸೂಲಿ ಮಾಡಿ ಅಸಮಾಧಾನಗೊಳಿಸಿದ್ದಾರೆ. ಅದರಂತೆ ಇದೀಗ ಮುಂಬೈ ಮೂಲದ ನ್ಯೂರಲ್‌ಗ್ಯಾರೇಜ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ಆದ ಮಂದಾರ ನಾಟೇಕರ್(Co-Founder And CEO of NeuralGarage) ಅವರು ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಮೀಟರ್ ಲೆಕ್ಕದಲ್ಲಿ ದರ ವಿಧಿಸುವುದಿಲ್ಲ ಎಂದು ಮಂದಾರ ನಾಟೇಕರ್ ಅವರು ದೂರಿದ್ದಾರೆ. ನಗರದಲ್ಲಿ ಕೇವಲ 500 ಮೀಟರ್ ರೈಡ್‌ಗೆ 100 ರೂಪಾಯಿ ಹಣ ಪಾವತಿಸಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
In this photo you will see the most ornamental thing in Bengaluru. The great Auto Meter. So expensive that it never gets used.
I just paid 100Rs for a 500 mtrs ride. To give perspective, in Mumbai 100Rs is the meter fare for approx 9 kms. @peakbengaluru pic.twitter.com/7piaKjGhnY— Mandar Natekar (@mandar2404) July 22, 2023
‘‘ಈ ಫೋಟೋದಲ್ಲಿ ನೀವು ಬೆಂಗಳೂರಿನಲ್ಲಿ ಅತ್ಯಂತ ಅಲಂಕಾರಿಕ ವಸ್ತುವನ್ನು ನೋಡುತ್ತೀರಿ. ದೊಡ್ಡ ಆಟೋ ಮೀಟರ್. ಎಷ್ಟು ದುಬಾರಿ ಎಂದರೆ ಅದು ಎಂದಿಗೂ ಬಳಕೆಯಾಗುವುದಿಲ್ಲ. ನಾನು ಕೇವಲ 500 ಮೀಟರ್ ರೈಡ್‌ಗೆ 100ರೂ ಪಾವತಿಸಿದ್ದೇನೆ. ಒಂದು ಅಂದಾಜಿನ ಪ್ರಕಾರ ಮುಂಬೈನಲ್ಲಿ 100 ರೂಗಳು ಪಾವತಿಸಿದರೇ ಸುಮಾರು 9 ಕಿ.ಮೀಟರ್ ಪ್ರಯಾಣಿಸಬಹುದು ಎಂದು ಆಟೋದ ಮೀಟರ್‌ನ ಫೋಟೋವನ್ನ ಹಾಕಿ “ಪೀಕ್ ಬೆಂಗಳೂರು” ಕ್ಷಣ ಎಂದು ಕರೆದಿದ್ದಾರೆ.
ಇದನ್ನೂ ಓದಿ:Bengaluru: ಆಟೋ ಚಾಲಕರ ಜೊತೆ ಸಂವಾದ ನಡೆಸುವ ಮೊದಲು ಆಟೋರಿಕ್ಷಾ ಓಡಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಇನ್ನು ಇದಕ್ಕೆ ಪ್ರತಿಕ್ರಿಯಿಸದ ಇತರ ಟ್ವಿಟರ್ ಬಳಕೆದಾರರು ಅವರಿಗಾದ ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಟಿವಿಎಫ್‌ನ ಅಧ್ಯಕ್ಷ ವಿಜಯ್ ಕೋಶಿ, ‘‘ಇದು ಪ್ರಾಯೋಗಿಕವಾಗಿ ಮುಂಬೈನ ಹೊರಗಿನ ಪ್ರತಿಯೊಂದು ನಗರಕ್ಕೂ ಒಂದೇ ಆಗಿರುತ್ತದೆ. ಚೆನ್ನೈ ಆಟೋ ಸವಾರಿಗೆ ಕುಖ್ಯಾತಿ ಪಡೆದಿದೆ’’ ಎಂದರು. ಅವರಿಗೆ ಉತ್ತರಿಸಿದ ನಾಟೇಕರ್, ‘‘ಕಡಿಮೆ ಹೇಳುವುದು ಹಾಸ್ಯಾಸ್ಪದ, ಈ ಹೆದ್ದಾರಿ ದರೋಡೆ ಅಸಲಿ ಎಂದು ತೋರುತ್ತದೆ. ಆದರೆ, ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ’’ ಎಂದರು.
ಎರಡನೆಯ ಬಳಕೆದಾರರು ಹೀಗೆ ಬರೆದಿದ್ದಾರೆ: “ಕೆಲವೇ ನಗರಗಳಲ್ಲಿ ಸ್ವಯಂ-ಮೀಟರ್ ಶುಲ್ಕ ವ್ಯವಸ್ಥೆ ಇದ್ದು, ಮುಂಬೈ ಮತ್ತು ಪಾಲಕ್ಕಾಡ್ ನನಗೆ ತಿಳಿದಿರುವ ಎರಡು ನಗರಗಳು ಮಾತ್ರ. ಇಲ್ಲಿ ಏನನ್ನೂ ಮಾಡಲಾಗದು,’’ ಎಂದರು. ಮೂರನೆಯವರು, ‘‘ಭಾರತದ ಏಕೈಕ ಸ್ಥಳವೆಂದರೆ ಮುಂಬೈ, ಅಲ್ಲಿ ರಿಕ್ಷಾಗಳು ಮೀಟರ್‌ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಭಾರತದ ಉಳಿದ ಭಾಗಗಳು ಲೂಟಿ ಮಾಡುತ್ತವೆ ಎಂದರು.
ಕಳೆದ ವರ್ಷ, ಕರ್ನಾಟಕ ಸರ್ಕಾರವು ಮೊದಲ ಎರಡು ಕಿಲೋಮೀಟರ್‌ಗಳಿಗೆ ಮೀಟರ್ ದರವನ್ನು 25 ರಿಂದ 30 ರೂಪಾಯಿಗೆ ಮತ್ತು ಕಿಲೋಮೀಟರ್‌ಗೆ ಮೂಲ ಬೆಲೆಯನ್ನು 13 ರಿಂದ 15 ಕ್ಕೆ ಏರಿಸಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ