Deepavali Crackers: ಪಟಾಕಿ ಸಿಡಿದು ನಿನ್ನೆ ಒಂದೇ ದಿನ 11 ಮಕ್ಕಳ ಕಣ್ಣಿಗೆ ಗಾಯ

| Updated By: ganapathi bhat

Updated on: Nov 06, 2021 | 1:21 PM

ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲಾಗಿದೆ. ದೀಪಾವಳಿ ಬಳಿಕವೂ ಪಟಾಕಿ ದುರಂತಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಣ್ಣ ಮಕ್ಕಳಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ.

Deepavali Crackers: ಪಟಾಕಿ ಸಿಡಿದು ನಿನ್ನೆ ಒಂದೇ ದಿನ 11 ಮಕ್ಕಳ ಕಣ್ಣಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪಟಾಕಿ ಸಿಡಿದು ನಿನ್ನೆ ಒಂದೇ ದಿನ 11 ಮಕ್ಕಳ ಕಣ್ಣಿಗೆ ಗಾಯವಾಗಿರುವ ಬಗ್ಗೆ ತಿಳಿದುಬಂದಿದೆ. ಮಿಂಟೋ ಆಸ್ಪತ್ರೆಯಲ್ಲಿ ಈವರೆಗೆ 15 ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 9 ಜನರಿಗೆ ಚಿಕಿತ್ಸೆ ನೀಡಲಾಗಿದೆ. ದೀಪಾವಳಿ ಬಳಿಕವೂ ಪಟಾಕಿ ದುರಂತಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸಣ್ಣ ಮಕ್ಕಳಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವ ಬಗ್ಗೆ ತಿಳಿದುಬಂದಿದೆ.

6 ರಿಂದ 16 ವರ್ಷದ ಮಕ್ಕಳ ಕಣ್ಣುಗಳಿಗೆ ಪಟಾಕಿಯಿಂದಾಗಿ ಅತಿ ಹೆಚ್ಚು ಹಾನಿ ಉಂಟಾಗಿದೆ. ನಿನ್ನೆ ಒಂದೇ ದಿನ 11 ಪ್ರಕರಣಗಳು ದಾಖಲಾಗಿವೆ. ಬಿಜಲಿ, ಭೂಚಕ್ರ, ಫ್ಲವರ್ ಪಾಟ್‌ಗಳಿಂದ ಹೆಚ್ಚಿರೋ ಹಾನಿ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪಟಾಕಿ ಸಿಡಿಸುವ ವೇಳೆ ಹಲವರ ಕಣ್ಣಿಗೆ ಗಾಯಗಳಾಗಿವೆ. ಮಿಂಟೋ ಆಸ್ಪತ್ರೆಯಲ್ಲಿ 17 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಾತ್ರ ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಹೇಳಿಕೆ ನೀಡಿದ್ದಾರೆ.

ಪಟಾಕಿ ಬೆಲೆ ಏರಿಕೆ
ಈ ವರ್ಷ ಪಟಾಕಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಚ್ಚಾ ವಸ್ತು ಪೂರೈಕೆ ಕುಸಿತ ಹಿನ್ನೆಲೆಯಲ್ಲಿ, ಇಂಧನ ಬೆಲೆ ಇಳಿಕೆಯಾಗಿದ್ದರೂ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಪಟಾಕಿ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.30ರಷ್ಟು ಹೆಚ್ಚಳವಾಗಿದೆ. ವ್ಯಾಪಾರಸ್ಥರು ವ್ಯಾಪಾರವೇ ಇಲ್ಲ ಎಂದು ಹೇಳುತ್ತಿದ್ದಾರೆ. ಪರಿಸರ ಕಾಳಜಿಯಿಂದ ಹಸಿರು ಪಟಾಕಿಗಳ ಖರೀದಿಗೆ ಜನ ಮುಂದಾಗಿದ್ದಾರೆ.

ಈ ವರ್ಷ ಕಡ್ಡಾಯವಾಗಿ ಶೇ.18ರಷ್ಟು ಜಿಎಸ್ ಟಿ ಪಾವತಿಸಲೇಬೇಕು. ಈ ಕಾರಣದಿಂದ ವ್ಯಾಪಾರಸ್ಥರು ಇದರ ಸಂಪೂರ್ಣ ಹೊರೆಯನ್ನ ಗ್ರಾಹಕರ ಮೇಲೆ ಹಾಕಿದ್ದಾರೆ. ಕಳೆದ ವರ್ಷ ಕೊರೊನಾದಿಂದ ಬ್ಯುಸಿನೆಸ್ ಆಗಿರಲಿಲ್ಲ. ಈ ಬಾರಿ ಕೊರೊನಾ ಇಲ್ಲದಿದ್ದರೂ ಬೆಲೆ ಏರಿಕೆ ಆಗಿದೆ. ಈ ಕಾರಣದಿಂದಾಗಿ ಜನ ಪಟಾಕಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅದಾಗ್ಯೂ ಗ್ರಾಹಕರು ಬ್ರ್ಯಾಂಡ್ ಇರುವ ಪಟಾಕಿಗಳ ಮೇಲೆ ರಿಯಾಯಿತಿಯೇ ಕೊಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರತೀ ಪಟಾಕಿಯ ದರದಲ್ಲೂ ಭಾರೀ ಏರಿಕೆಯಾಗಿದ್ದು, ಒಂದು ಡಿಲೆಕ್ಸ್ ಭೂ ಚಕ್ರದ ಬಾಕ್ಸ್ ಬೆಲೆ 250 ರಿಂದ 300 ರೂ. ಗೆ ಏರಿಕೆಯಾಗಿದೆ. ಕಳೆದ ವರ್ಷ ಒಂದು ಬಾಕ್ಸ್ ಫ್ಲವರ್ ಪಾಟ್ ಬೆಲೆ 400ರೂ ಇತ್ತು, ಈಗ 500 ರೂ. ಗೆ ಏರಿಕೆಯಾಗಿದ್ದು, ಟ್ವಿಂಕ್ಲಿಂಗ್ ಸ್ಟಾರ್ 250 ರಿಂದ 335 ರೂ.ಗೆ, ಸುರಸುರಬತ್ತಿ ದರ ಕಳೆದ ವರ್ಷ 80 ರೂ. ಈಗ 120ರೂ.ಗೆ ಏರಿಕೆಯಾಗಿದೆ. 25 ಐಟಂನ ಸ್ಟ್ಯಾಡರ್ಸ್ ಟೈಟಾನ್ ಪಟಾಕಿಯ ಬಾಕ್ಸ್ ಬೆಲೆ 1,200 ರಿಂದ 1,300ರೂ. ಗೆ ಏರಿಕೆಯಾಗಿದ್ದು, 60 ಐಟಂನ ಸ್ಟ್ಯಾಡರ್ಸ್ ಟೈಟಾನ್ ಪಟಾಕಿಯ ಬಾಕ್ಸ್ ಬೆಲೆ 1,300 ರಿಂದ 1,500ರೂ. ಗೆ ಏರಿಕೆಯಾಗಿದೆ. ರಾಕೆಟ್ ಒಂದು ಬಾಕ್ಸ್ ಗೆ 150 ರಿಂದ 200ಕ್ಕೆ ಹೆಚ್ಚಳವಾಗಿದ್ದು, ಟಂಡರ್ ಆಟಂ ಬಾಂಬ್ ಪ್ರತೀ ಬಾಕ್ಸ್ ಗೆ 100 ರಿಂದ 150ರೂ. ಗೆ ಏರಿಕೆಯಾಗಿದೆ. ಒಟ್ಟಾರೆ ಶೇ.30 ರಷ್ಟು ಪಟಾಕಿ ದರ ಏರಿಕೆಯಾಗಿದ್ದು, ಪ್ರತೀ ವರ್ಷ ಶೇ.10% ಹೆಚ್ಚಳವಾಗ್ತಿತ್ತು. ಆದರೆ ಈ ಭಾರೀ ಏಕಾಏಕಿ ಶೇ.30% ಹೆಚ್ಚಳವಾಗಿದೆ.

ಆದರೆ ಅಚ್ಚರಿಯೆಂಬಂತೆ ವ್ಯಾಪಾರಸ್ಥರು ಮಾತಿಗಿಂತ ಭಿನ್ನ ದೃಶ್ಯ ಪಟಾಕಿ ಮುಂಗಟ್ಟುಗಳ ಮುಂದೆ ಕಂಡುಬರುತ್ತಿದೆ. ನಗರದ ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಖರೀದಿ ಜೋರಾಗಿದ್ದು, ನಗರ ಭಾಗದ 60 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಟ್ಟು 366 ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ನಡೆಯುತ್ತಿದ್ದು, ಜನರು ಖರೀದಿಸುತ್ತಿರುವ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ: ಪಟಾಕಿ ತರಲು ಹೋಗಿದ್ದ ವಿದ್ಯಾರ್ಥಿಯ ಅಪಹರಣ ಮತ್ತು ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಇದನ್ನೂ ಓದಿ: Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್

Published On - 11:39 am, Sat, 6 November 21