ಪಟಾಕಿ ತರಲು ಹೋಗಿದ್ದ ವಿದ್ಯಾರ್ಥಿಯ ಅಪಹರಣ ಮತ್ತು ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Crime News: ಪಟಾಕಿ ತರಲು ಹೋಗಿದ್ದ ವಿದ್ಯಾರ್ಥಿಯೊಬ್ಬನ ಅಪಹರಣ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: R.R.ನಗರದಲ್ಲಿ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತರುಣ್ ಎಂಬ ವಿದ್ಯಾರ್ಥಿಯನ್ನು ಅಪಹರಿಸಿ ನಂತರ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಾಸಿರ್, ಸೈಯದ್ ತಜ್ಮುಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರ್ವರು ಆರೋಪಿಗಳೂ ಕೂಡ ತರುಣ್ ತಂದೆ ಬಳಿಯೇ ಕೆಲಸ ಮಾಡುತ್ತಿದ್ದರು. ಹಣದಾಸೆಗಾಗಿ ತರುಣ್ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜರಾಜೇಶ್ವರಿ ಠಾಣೆ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಪ್ರಕರಣವೇನು? ತರುಣ್ ಭಾರತಿನಗರದ ಮನೆಯಿಂದ ಪಟಾಕಿ ತರುವುದಾಗಿ ಹೇಳಿ ಹೋಗಿದ್ದರು. ಆದರೆ ಎರಡು ದಿನದ ನಂತರ ರಾಜರಾಜೇಶ್ವರಿ ನಗರ ರಾಜಕಾಲುವೆ ಬಳಿ ಚೀಲದಲ್ಲಿ ಹೆಣವಾಗಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತರುಣ್ ತಂದೆಯ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳೇ ಆರೋಪಿಗಳು ಎಂದು ಸುಳಿವು ದೊರೆತ ನಂತರ ಬಂಧಿಸಿದ್ದಾರೆ. ತರುಣ್ ಮನೆಯಿಂದ ಹೋಗುವಾಗ ಆರೋಪಿಗಳನ್ನು ಬರುತ್ತೀರಾ ಎಂದು ಕರೆದು, ಕರೆದೊಯ್ದಿದ್ದ. ಡ್ರಗ್ಸ್ ನಶೆಯಲ್ಲಿದ್ದ ಆರೋಪಿಗಳು ಹಣದಾಸೆಗೆ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕಿರುಚಾಡದಂತೆ ಬಾಯಿಗೆ ಟೇಪ್ ಸುತ್ತಿದ್ದಾರೆ. ಮನೆಗೆ ಕರೆ ಮಾಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಾವಾಗ ವಿಚಾರ ಬಹಿರಂಗವಾಯಿತೋ ಆಗ ತರುಣ್ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ನಂತರ ಪ್ಲಾಸ್ಟಿಕ್ ಚೀಲಕ್ಕೆ ಸುತ್ತಿ, ರಾಜಕಾಲುವೆ ಬಳಿ ಬಿಸಾಕಿ ಪರಾರಿಯಾಗಿದ್ದರು. ನಗರದ ಬೇರೆ ಬೇರೆ ಭಾಗಗಳಲ್ಲಿ ತಲೆಮರೆಸಿಕೊಂಡಿದ್ದರು.
ಇಬ್ಬರು ಆರೋಪಿಗಳಾದ ನಾಸಿರ್ ಮತ್ತು ಸೈಯದ್ ತಜ್ಮುಲ್, ಸಹೋದರರಾಗಿದ್ದು, ತರುಣ್ ತಂದೆಯ ಬಳಿ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಮನೆಯಿಂದ ತೆರಳಿದ್ದ ತರುಣ್ ಅವರನ್ನು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿತ್ತು. ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:
ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ; ಪಟಾಕಿ ಖರೀದಿಸಿ ಬರ್ತೀನಿ ಎಂದು ಹೋದ ಯುವಕನ ಬರ್ಬರ ಹತ್ಯೆ
ಕೊರೊನಾ ವ್ಯಾಕ್ಸಿನ್ ಪಡೆಯಲು ಹುಬ್ಬಳ್ಳಿಯ ಇಸ್ಲಾಂಪುರ್ ವಾಸಿಗಳಿಂದ ಅಡ್ಡಿ; ವಿಡಿಯೋ ನೋಡಿ