178 ಮಠಗಳಿಗೆ 142.37 ಕೋಟಿ ರೂ. ಅನುದಾನ ಬಿಡುಗಡೆ: ರಾಜ್ಯ ಸರ್ಕಾರದಿಂದ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2022 | 7:44 AM

ಕನ್ನಡ, ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಮೊತ್ತಕ್ಕೆ ಮಿತಿ ಹೇರಲಾಗಿದ್ದು, ಅನುದಾನದ ಗರಿಷ್ಠ ಮೊತ್ತ 2 ಲಕ್ಷ ರೂಪಾಯಿಗೆ ಮಿತಿಗೊಳಿಸಲಾಗಿದೆ. ಕನ್ನಡ, ಸಂಸ್ಕೃತಿ ಇಲಾಖೆಯಿಂದ ವಾರ್ಷಿಕ ಅನುದಾನ‌ ನೀಡಲಾಗುತ್ತಿತ್ತು.

178 ಮಠಗಳಿಗೆ 142.37 ಕೋಟಿ ರೂ. ಅನುದಾನ ಬಿಡುಗಡೆ: ರಾಜ್ಯ ಸರ್ಕಾರದಿಂದ ಆದೇಶ
ಸಂಗ್ರಹ ಚಿತ್ರ
Follow us on

ಬೆಂಗಳೂರು: ರಾಜ್ಯದ ವಿವಿಧ ಸಮುದಾಯದ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು, ಟ್ರಸ್ಟ್​​ಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ (Grant) ಬಿಡುಗಡೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. 178 ಮಠಗಳಿಗೆ 108.02 ಕೋಟಿ‌ ರೂ, 59 ದೇವಸ್ಥಾನಗಳಿಗೆ 21.35 ಕೋಟಿ ರೂ, 26 ಸಂಘ ಸಂಸ್ಥೆಗಳು ಮತ್ತು ಟ್ರಸ್ಟ್​​ಗಳಿಗೆ 13 ಕೋಟಿ ರೂ. ಸೇರಿದಂತೆ ಒಟ್ಟು 142.37 ಕೋಟಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸಿಎಂ ಸೂಚನೆ ನೀಡಲಾಗಿದೆ. ಚುನಾವಣೆ ಹಿನ್ನೆಲೆ ವಿವಿಧ ಸಮುದಾಯಗಳ ಮಠಗಳು, ದೇವಾಲಯ, ಸಂಘ ಸಂಸ್ಥೆ, ಟ್ರಸ್ಟ್​ಗಳಿಗೆ ಬಜೆಟ್ ಹಂಚಿಕೆ ಜತೆಗೆ ಸಿಎಂ ವಿಶೇಷಾನುದಾನದಡಿ ಹಣ ಬಿಡುಗಡೆ ಮಾಡಲಾಗಿದೆ.

ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನ ಮೊತ್ತಕ್ಕೆ ಮಿತಿ: ಆರ್ಥಿಕ ನೆರವಿಗೆ ಸರ್ಕಾರದ ಹಲವು ನಿರ್ಬಂಧ

ಕನ್ನಡ, ಸಂಸ್ಕೃತಿ ಇಲಾಖೆಯಲ್ಲಿ ಅನುದಾನ ಮೊತ್ತಕ್ಕೆ ಮಿತಿ ಹೇರಲಾಗಿದ್ದು, ಅನುದಾನದ ಗರಿಷ್ಠ ಮೊತ್ತ 2 ಲಕ್ಷ ರೂಪಾಯಿಗೆ ಮಿತಿಗೊಳಿಸಲಾಗಿದೆ. ಕನ್ನಡ, ಸಂಸ್ಕೃತಿ ಇಲಾಖೆಯಿಂದ ವಾರ್ಷಿಕ ಅನುದಾನ‌ ನೀಡಲಾಗುತ್ತಿತ್ತು. ನೋಂದಾಯಿತ ಸಂಘ- ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನ‌ಕ್ಕೆ ಮಿತಿ ಹೇರಲಾಗಿದೆ. ಅನುದಾನ ಪಡೆಯಲು ಕೆಲವೇ ಸಂಘ, ಸಂಸ್ಥೆ ಏಕಸ್ವಾಮ್ಯ ಸಾಧಿಸಿರುವ ಆರೋಪ ಹಿನ್ನೆಲೆಯಲ್ಲಿ ಮಿತಿ ಹೇರಲಾಗಿದೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ನೋಂದಾಯಿತ ಸಂಘ- ಸಂಸ್ಥೆಗಳಿಗೆ ನೀಡುತ್ತಿದ್ದ ವಾರ್ಷಿಕ ಅನುದಾನ‌ದಲ್ಲಿ ಕಡಿತಗೊಳಿಸಲಾಗಿದೆ. ಅನುದಾನ ಪಡೆಯುವಲ್ಲಿ ಕೆಲವೇ ಸಂಘ- ಸಂಸ್ಥೆಗಳು ಏಕಸ್ವಾಮ್ಯ ಸಾಧಿಸಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನ ಮೊತ್ತಕ್ಕೆ ಮಿತಿ; ಯೋಗ್ಯರಿಗೆ ಪಾರದರ್ಶಕವಾಗಿ ಅನುದಾನ ಹಂಚಿಕೆ ಮಾಡಲು ಆದೇಶ

ಹತ್ತಾರು ವರ್ಷಗಳಿಂದ 10- 15 ಲಕ್ಷ ರೂಪಾಯಿ ಅನುದಾನ ಹಿನ್ನೆಲೆ ಅನುದಾನ ಪಡೆದ ಸಂಸ್ಥೆಗಳಿಗೆ ಈ ಬಾರಿ ನೆರವು ಕಡಿತಗೊಳಿಸಲಾಗಿದೆ. ಆನ್​ಲೈನ್ ಅರ್ಜಿಗೆ ಗರಿಷ್ಠ ₹2 ಲಕ್ಷ ಮಾತ್ರ ಅನುದಾನ ಎಂದು ಹೇಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ಅನುದಾನ ಅರ್ಜಿ ಸ್ವೀಕಾರ ಮಾಡಲಾಗುತ್ತದೆ. ಕಾರ್ಯಕ್ರಮ ಆಯೋಜಿಸದೆ ಅನುದಾನ ಪಡೆಯಲು ಯತ್ನಿಸಲಾಗಿದೆ. ಕೊರೊನಾ ಅವಧಿಯ ಅನುದಾನ ಪಡೆಯಲು ಪ್ರಯತ್ನ ಮಾಡಲಾಗಿದೆ. ಯೋಗ್ಯರಿಗೆ ಪಾರದರ್ಶಕವಾಗಿ ಅನುದಾನ ಹಂಚಿಕೆ ಮಾಡಲಿದೆ ಎಂದು ಕನ್ನಡ, ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸೂಚನೆ ಕೊಟ್ಟಿದ್ದಾರೆ.

Published On - 7:35 am, Fri, 22 July 22