ಜೈಲಿನಲ್ಲಿ ಇದ್ದರೂ ಆಕ್ಟೀವ್! ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ತನ್ನ ಶಿಷ್ಯಂದಿರ ಮೂಲಕ ಬೇರೆ ಬೇರೆ ಕೆಲಸಗಳಿಗೆ ರೌಡಿಶೀಟರ್​ಗಳು ಸ್ಕೆಚ್ ಹಾಕುತ್ತಿರುವುದು ತಿಳಿದುಬಂದಿದೆ.

ಜೈಲಿನಲ್ಲಿ ಇದ್ದರೂ ಆಕ್ಟೀವ್! ಪರಪ್ಪನ ಅಗ್ರಹಾರ ಜೈಲಿನಿಂದ 19 ನಟೋರಿಯಸ್ ರೌಡಿಶೀಟರ್ಸ್ ಶಿಫ್ಟ್
ಪರಪ್ಪನ ಅಗ್ರಹಾರ ಜೈಲು
Follow us
| Edited By: sandhya thejappa

Updated on: Aug 17, 2021 | 2:39 PM

ಬೆಂಗಳೂರು: ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವ ಸಲುವಾಗಿ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ. ಆದರೆ ಜೈಲಿನಲ್ಲಿದ್ದುಕೊಂಡೆ ಕೆಲ ರೌಡಿಶೀಟರ್​ಗಳು (Rowdy Sheeters) ಅಪರಾಧ ಕೆಲಸಗಳನ್ನು ಮಾಡುವುದು ಬೆಳಕಿಗೆ ಬಂದಿದೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ತನ್ನ ಶಿಷ್ಯಂದಿರ ಮೂಲಕ ಬೇರೆ ಬೇರೆ ಕೆಲಸಗಳಿಗೆ ರೌಡಿಶೀಟರ್​ಗಳು ಸ್ಕೆಚ್ ಹಾಕುತ್ತಿರುವುದು ತಿಳಿದುಬಂದಿದೆ. ಹೀಗಾಗಿ ರೌಡಿಸಂ ಮಟ್ಟ ಹಾಕಲು ಖಾಕಿ ಮುಂದಾಗಿದ್ದು, ಬೆಂಗಳೂರು ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ರೌಡಿಶೀಟರ್​ಗಳನ್ನ ಶಿಫ್ಟ್ ಮಾಡುತ್ತಿದ್ದಾರೆ.

ಜೈಲಿನಲ್ಲಿದ್ದು ಆಕ್ಟಿವ್ ಆಗಿದ್ದ 19 ರೌಡಿಶೀಟರ್​ಗಳನ್ನು ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬೇರೆ ಬೇರೆ ಜಿಲ್ಲೆಯ ಜೈಲುಗಳಿಗೆ ಸ್ಥಳಾಂತರ ಮಾಡಲು ಖಾಕಿ ನಿರ್ಧರಿಸಿದೆ. ಕಲಬುರಗಿ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ, ಬಳ್ಳಾರಿ ಜೈಲುಗಳಿಗೆ ರೌಡಿಶೀಟರ್​ಗಳನ್ನ ಸ್ಥಳಾಂತರ ಮಾಡಲಾಗುತ್ತಿದೆ.

ವಿಲ್ಸನ್ ಗಾರ್ಡನ್ ನಾಗ, ಪೂರ್ಣೇಶ, ಕಾರ್ಣಿಕ್ ರಾಜ್, ಕಮಲ್ನ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇನ್ನು ದಿನೇಶ್, ವಿಲ್ಸನ್ ಗಾರ್ಡನ್ ಶಿವ, ಪ್ರದೀಪ್ನನ್ನ ಬೆಳಗಾವಿ ಜಿಲ್ಲೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಮಹಮ್ಮದ್ ಖಲೀಲುಲ್ಲ ಅಲಿಯಾಸ್ ಬಾಂಬೆ ಸಲೀಂ, ಸುನೀಲ್, ಅರುಣ್ನನ್ನು ಧಾರವಾಡ ಜೈಲಿಗೆ ಕಳುಹಿಸಲಾಗುತ್ತದೆ. ಶಿವಮೊಗ್ಗ ಜೈಲಿಗೆ ನವೀನ್ ಅಲಿಯಾಸ್ ಬಂಡೆ ನವೀನ್, ಅರುಣ್ ಎಂ, ಸತೀಶನನ್ನ ಶಿಫ್ಟ್ ಮಾಡಿಲಾಗುವುದು.

ಮೈಸೂರು ಜೈಲಿಗೆ ಕಾರ್ತಿಕ್, ಆನಂದ್, ವಿಜಯಪುರ ಜೈಲಿಗೆ ದೇವರಾಜ್, ಧನಶೇಖರ್ ಮತ್ತು ಬಳ್ಳಾರಿ ಜೈಲಿಗೆ ಜಾರ್ಜ್, ಶರವಣನನ್ನು ಶಿಫ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ

ತಾಲಿಬಾನ್ ಉಗ್ರರು ನನ್ನ ಕೊಂದರೂ ದೇವರ ಸೇವೆಯೆಂದು ಭಾವಿಸುವೆ; ಅಫ್ಘಾನ್ ತೊರೆಯಲೊಪ್ಪದ ಹಿಂದೂ ಅರ್ಚಕ

‘ತಾಲಿಬಾನ್​​ ಉಗ್ರರಿಗಾಗಿ ಕಾಯುತ್ತಿದ್ದೇನೆ..ಅವರು ಕೊಲ್ಲಲು ಬರುತ್ತಾರೆ‘; ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಅಸಹಾಯಕತೆ​​

(19 Rowdy Sheeters will be shifted to different districts from Bengaluru Parappana Agrahara Jail)

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ