ಸರ್ಕಾರಕ್ಕೆ 75 ಕೋಟಿ ರೂ. ತೆರಿಗೆ ವಂಚನೆ, 200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ ಆರೋಪ: ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2022 | 4:18 PM

ಸರ್ಕಾರಕ್ಕೆ 75 ಕೋಟಿ ತೆರಿಗೆ ವಂಚನೆ ಮತ್ತು ಸುಮಾರು 200 ಕೋಟಿ ಅಕ್ರಮ ಆಸ್ತಿ ಖರೀದಿ ಆರೋಪದಡಿ ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗಿದೆ.

ಸರ್ಕಾರಕ್ಕೆ 75 ಕೋಟಿ ರೂ. ತೆರಿಗೆ ವಂಚನೆ, 200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ ಆರೋಪ: ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು
ಶೃಂಗೇರಿ ಶಾಸಕ ರಾಜೇಗೌಡ
Follow us on

ಬೆಂಗಳೂರು: ಸರ್ಕಾರಕ್ಕೆ 75 ಕೋಟಿ ತೆರಿಗೆ ವಂಚನೆ ಮತ್ತು ಸುಮಾರು 200 ಕೋಟಿ ಅಕ್ರಮ ಆಸ್ತಿ (assets) ಖರೀದಿ ಆರೋಪದಡಿ ಶೃಂಗೇರಿ ಕಾಂಗ್ರೆಸ್​​ ಶಾಸಕ ರಾಜೇಗೌಡ (MLA RajeGowda) ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ದೂರು ನೀಡಲಾಗಿದೆ. ಸಿ.ಪಿ. ವಿಜಯಾನಂದ ಎನ್ನುವವರು ದೂರು ನೀಡಿದ್ದಾರೆ. ಮೆಸರ್ಸ್ ಶಾಬನ್ ರಂಜನ್ ಫರ್ಮ್​ ಮೂಲಕ ತೆರಿಗೆ ವಂಚನೆ ಆರೋಪ ಮಾಡಲಾಗಿದೆ. ರಾಜೇಗೌಡ ಮತ್ತು ಕುಟುಂಬಸ್ಥರು ಸುಮಾರು 200 ಕೋಟಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾಫಿ, ಕ್ಯೂರಿಂಗ್ ವರ್ಕ್ಸ್​ ಸೇರಿದಂತೆ 266 ಎಕರೆ ಪ್ರದೇಶದಲ್ಲಿ ವಿವಿಧ ಪ್ಲಾಂಟ್ ಇರುವ ಭೂಮಿ ಇದಾಗಿದೆ. ಈ ಫರ್ಮ್​ನಲ್ಲಿ ಮೊದಲು ಸಿದ್ದಾರ್ಥ್ ಪಾಲುದಾರರಾಗಿದ್ದರು. ಸಿದ್ದಾರ್ಥ್ ನಿಧನ ನಂತರ ಅವರ ಪತ್ನಿ, ಮಗ ಪಾಲುದಾರರಾಗಿದ್ದರು. ಶಾಸಕ ರಾಜೇಗೌಡರು ತಮ್ಮ ಪ್ರಭಾವ ಬೀರಿ ಪತ್ನಿ, ಪುತ್ರನ ಸೇರ್ಪಡೆ ಮಾಡಿದ್ದಾರೆ. 1992ರಲ್ಲಿ ಶಬಾನ್ ರಂಜನ್ ಟ್ರಸ್ಟ್​ನಿಂದ ಸುಮಾರು 266 ಎಕರೆ 38 ಗುಂಟೆ, ಬಂಗ್ಲೆ, ಕ್ವಾರ್ಟರ್ಸ್​ ಖರೀದಿಸಿದ್ದರು.

ಆದರೆ ಇದೀಗ‌ ಸಿದ್ದಾರ್ಥ ಅವರ ಪತ್ನಿ ಮಗನ ಹೆಸರಿನಲ್ಲಿದ್ದ ಪ್ರಾಪರ್ಟಿ ರಾಜೇಗೌಡರ ಕುಟುಂಬಕ್ಕೆ ಹಸ್ತಾಂತರ ಆಗಿದೆ. ಹಸ್ತಾಂತರ ಮಾಡಿಕೊಂಡಿದ್ದಕ್ಕೆ ಯಾವುದೇ ಹಣಕಾಸು ವ್ಯವಹಾರದ ಲೆಕ್ಕಪತ್ರ ಇಲ್ಲ. ಸುಮಾರು‌ 200 ಕೋಟಿ ರೂ. ವ್ಯವಹಾರ ನಡೆದಿದ್ದು, ಇದರಿಂದ ಸರ್ಕಾರಕ್ಕೆ ಕೋಟ್ಯಂತರ ನಷ್ಟ ಆಗಿದೆ. ಅಕ್ರಮ ಹಣಕಾಸು ವಹಿವಾಟು ಮಾಡಿ ಪ್ರಾಪರ್ಟಿಯನ್ನ ತಮ್ಮ ಕುಟುಂಬಸ್ಥರ ಹೆಸರಿಗೆ ಮಾಡಿಕೊಂಡಿದ್ದಾರೆ ಅನ್ನೊ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ 2018 ಚುನಾವಣೆಯಗೆ ಸ್ಪರ್ಧೆ ಮಾಡುವಾಗ ಒಟ್ಟು 3೦ ಕೋಟಿ ರೂ. ಪ್ರಾಪರ್ಟಿ ಕ್ಲೈಮ್ ಮಾಡಿದ್ದರು. ಅದರಲ್ಲಿ‌ 25 ಕೋಟಿ ಬೇರೆ ಬೇರೆ ಹೊಣೆಗಾರಿಕೆ ಇರುವುದಾಗಿ ದಾಖಲೆ ನೀಡಿದ್ದರು. ಆದರೆ ಸಿದ್ದಾರ್ಥ ಅವರು ಬೇರೆ ಬೇರೆ ಬ್ಯಾಂಕ್​ಗಳಿಂದ‌ ಪ್ರಾಪರ್ಟಿ ಅಡಮಾನ ಇಟ್ಟು 135 ಕೋಟಿಗೂ ಅಧಿಕ ಸಾಲ ಮಾಡಿದ್ದರು. ಆದರೆ ಶಾಸಕ ರಾಜೇಗೌಡರ ಕುಟುಂಬ ವಶಕ್ಕೆ ತೆಗೆದುಕೊಂಡ ಬಳಿಕ ಎಲ್ಲಾ‌ ಸಾಲ‌ ಮರುಪಾವತಿ ಮಾಡಿದ್ದಾರೆ ಎಂದು ದೂರುದಾರ ಪರ ವಕೀಲ ತಿಳಿಸಿದ್ದಾರೆ.

ಈ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಮತ್ತು ಅಕ್ರಮ ಹಣ ಗಳಿಕೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಮಾಡಿ ಹಣ, ಆಸ್ತಿ, ಪಾಸ್ತಿ ಮಾಡುವ ಮೂಲ‌ಕ ನಷ್ಟ ಮಾಡಿರುವುದಾಗಿ ಆದಾಯ ತೆರಿಗೆ ಮತ್ತು ಇಡಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲಾಗಿದೆ.

ಭ್ರಷ್ಟಾಚಾರ ಮಾಡಿ ಸಾಲ ತೀರಿಸಿದ್ದಾರೆ, ಈ ಬಗ್ಗೆ ತನಿಖೆ ಆಗಲಿ: ಮಾಜಿ ಶಾಸಕ ಜೀವರಾಜ್

ಈ ಕುರಿತಾಗಿ ಶೃಂಗೇರಿ ಮಾಜಿ ಶಾಸಕ ಜೀವರಾಜ್ ಹೇಳಿಕೆ ನೀಡಿದ್ದು, ಬ್ರಿಟಿಷರ ಕಾಲದ 266 ಎಕರೆ ಭೂಮಿ ಕಾಫಿ ತೋಟ ಅದು. ಸಿದ್ಧಾರ್ಥ್ ಪತ್ನಿಯಿಂದ ಶಾಸಕ ರಾಜೇಗೌಡ ತೆಗೆದುಕೊಂಡಿದ್ದಾರೆ. ಕಾಫಿ ತೋಟ ಹೇಗೆ ತೆಗೆದುಕೊಂಡರು ಅನ್ನುವುದು ಯಕ್ಷ ಪ್ರಶ್ನೆ. ರಾಜೇಗೌಡರು ತಮ್ಮ ಪತ್ನಿ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಭೂಮಿ ಖರೀದಿ ಹಾಗೂ ಹಣದ ಮೂಲ ಎಲ್ಲೂ ತೋರಿಸಿಲ್ಲ. ಚುನಾವಣೆಗೆ ಸ್ಪರ್ಧೆ ಸಂದರ್ಭದಲ್ಲಿ ಕೂಡ ಘೋಷಣೆ ಮಾಡಿಲ್ಲ. 30 ಕೋಟಿ ಆದಾಯ ಮಾತ್ರ ಚುನಾವಣೆಯಲ್ಲಿ ಘೋಷಿಸಿದ್ದಾರೆ. 40 ಲಕ್ಷ ಆದಾಯದಲ್ಲಿ ಇಷ್ಟು ಭೂಮಿ ಖರೀದಿ ಮಾಡಿದ್ದರು. 122 ಕೋಟಿ ಸಾಲ ತೆಗೆದುಕೊಂಡು ತಿರಿಸಿದ್ದಾರೆ. ಭ್ರಷ್ಟಾಚಾರ ಮಾಡಿ ಸಾಲ ತೀರಿಸಿದ್ದಾರೆ, ಈ ಬಗ್ಗೆ ತನಿಖೆ ಆಗಲಿ. ನಾನು ಕೂಡ ಮುಖ್ಯಮಂತ್ರಿ ಬಳಿ ತನಿಖೆಗೆ ಮನವಿ‌ ಮಾಡುತ್ತೇನೆ
ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:54 pm, Fri, 18 November 22