AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ‌ 8 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಬದಲಾಯಿಸಿದೆ: ಕೇಂದ್ರ ಸಚಿವ ಪಿಯೂಷ್​​​ ಗೋಯಲ್

ಕಳೆದ 8 ವರ್ಷಗಳ ಹಿಂದೆ ಶುರುವಾದ ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಬದಲಾಯಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.

ಕೇವಲ‌ 8 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಬದಲಾಯಿಸಿದೆ: ಕೇಂದ್ರ ಸಚಿವ ಪಿಯೂಷ್​​​ ಗೋಯಲ್
ಕೇಂದ್ರ ಸಚಿವ ಪಿಯೂಷ್ ಗೋಯಲ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 18, 2022 | 4:58 PM

ಬೆಂಗಳೂರು: ಕಳೆದ 8 ವರ್ಷಗಳಿಂದ ಹಿಂದೆ ಶುರುವಾದ ಡಿಜಿಟಲ್ ಇಂಡಿಯಾ (Digital India) ಭಾರತೀಯರ ಜೀವನ ಬದಲಾಯಿಸಿದೆ. ನಾವು ಗಟ್ಟಿ ಇದ್ದೇವೆ ಅಂತ ತೋರಿಸಿದ್ದೇವೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದರು. ನಗರದಲ್ಲಿ ಆಯೋಜಿಸಿದ “ವಿಷನ್ ಇಂಡಿಯಾ@ 2047” ರ ನವೋದಯ ಹಾಗೂ ಉದ್ಯಮಶೀಲತೆ ಕಾರ್ಯಗಾರ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಇಲ್ಲದೇ ಬದುಕು ಊಹಿಸಲೂ ಸಾಧ್ಯವಿಲ್ಲ. ಕೇವಲ‌ 8 ವರ್ಷಗಳಲ್ಲಿ ನಾವು ಗಟ್ಟಿಯಿದ್ದೇವೆ ಅಂತ ಪ್ರಪಂಚಕ್ಕೆ ತೋರಿಸಿದ್ದೇವೆ. ಹಲವಾರು ಸಮಸ್ಯೆಗಳ ನಡುವೆ ಬದುಕುತ್ತೇವೆ ಅಂತ ಸಾಬೀತು ಪಡಿಸಿದ್ದೇವೆ ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದರು.

ONGC (Open Network for Digital Commerce) ಇನ್ನೂ ಬೀಟಾ ಹಂತದಲ್ಲಿದೆ. ಬೆಂಗಳೂರಿನಲ್ಲಿ ಒಎನ್​​ಡಿಸಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾವು ಇದನ್ನು ಹಲವೆಡೆ ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಭಾರತದಲ್ಲಿ ಅತಿ ಹೆಚ್ಚು ಡಿಜಿಟಲ್ ಟ್ರಾನ್ಸಾಕ್ಷನ್ ಬಳಕೆ ಆಗುತ್ತಿದೆ. ಕಳೆದ ತಿಂಗಳಲ್ಲಿ 6 ಬಿಲಿಯನ್ ಡಿಜಿಟಲ್ ಟ್ರಾನ್ಸಾಕ್ಷನ್ ಆಗಿದೆ. ONDC ಎಲ್ಲ ವರ್ಗಗಳಗೂ ಕನೆಕ್ಟ್ ಆಗಲಿದೆ. ಒಎನ್​​ಡಿಸಿ ಇಂದ ಎಲ್ಲ ವಲಯಗಳಿಗೂ ಸಹಾಯವಾಗಲಿದೆ. ONGC ಟೆಸ್ಟಿಂಗ್ ಇನ್ನೂ‌ ನಡೆಯುತ್ತಿದೆ. ಯಾವಾಗ ಅಂತ್ಯವಾಗುತ್ತೆ ಅಂತ ಹೇಳಲು ಸಾಧ್ಯವಿಲ್ಲ ಎಂದರು.

ಟೆಕ್ನಾಲಜಿ ಸದಾ ಕಾಲ‌ ಬದಲಾಗುತ್ತಲೇ‌ ಇದೆ ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದರು. ಕಾರ್ಯಕ್ರಮದಲ್ಲಿ PIB ಹೆಚ್ಚುವರಿ ಮಹಾನಿರ್ದೇಶಕರಾದ ಎಸ್.ಜಿ ರವೀಂದ್ರ ಅವರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:49 pm, Fri, 18 November 22